ಕಲ್ಲೂತಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಲೋಕದರ್ಶನ ವರದಿ
ಸಂಬರಗಿ 07: ದೇಶ ಸ್ವತಂತ್ರವಾಗಿ 76 ವರ್ಷ ಗತಿಸಿದರೂ ಕಲ್ಲೂತಿ ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ 80 ವರ್ಷದ ಮನೋಬಾಯಿ ಬಳವಂತ ವಾಯಿದಂಡೆ ಇವಳು ತನ್ನ ಕೆಲಸಕ್ಕಾಗಿ ಜಂಬಗಿ ಗ್ರಾಮಕ್ಕೆ ನಡೆದುಕೊಂಡು ಹೋಗಿ ಬರುತ್ತಾಳೆ. ಈ ಗ್ರಾಮಕ್ಕೆ ನಾ ಇರುವದರಲ್ಲಿ ಕಲ್ಲೂತಿ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಬೇಕೆಂಬ ಬಹಳ ಮಹದಾಸೆಯನ್ನು ಇಟ್ಟುಕೊಂಡಿದ್ದಾಳೆ.
ಕಲ್ಲೂತಿ ಗ್ರಾಮದ ಜನಸಂಖ್ಯೆ 3ಸಾವಿರ ಇದ್ದು ಗ್ರಾಮದ ಜನ ತೋಟದ ವಸತಿಯಲ್ಲಿ ವಾಸಮಾಡುತ್ತಿದ್ದಾಳೆ. ಈ ಗ್ರಾಮದ ಅಂಚೆ ಕಛೇರಿ ಜಂಬಗಿ ಗ್ರಾಮಕ್ಕೆ ಇದೆ. ಸರಕಾರದ ವಿವಿಧ ಮಾಸಾಶನ ಪಡೆಯಲು ಕಲ್ಲೂತಿ ಗ್ರಾಮದ ಅನೇಕ ಹಿರಿಯರು ಅಂಚೇ ಕಛೇರಿಗೆ ಬರುತ್ತಿದ್ದಾರೆ. ಈ ಗ್ರಾಮದಿಂದ ಜಂಬಗಿ ಗ್ರಾಮವು 5 ಕಿ.ಮೀ. ಅಂತರವಿದ್ದು ಕಾಲುನಡಿಗೆ ಮುಖಾಂತರ ಅಂಚೆ ಕಛೇರಿಗೆ ತಲುಪಿ ಮರಳಿ ಗ್ರಾಮಕ್ಕೆ ಬರಬೇಕಾದರೆ ಸುಮಾರು 3 ಗಂಟೆ ಕಾಲ ಕಳೆಯುತ್ತಿದೆ. ಈ ಭಾಗದ ಚುನಾಯಿತ ಪ್ರತಿನಿಧಿಗೆ ಹಲವಾರು ಬಾರಿ ಗಮನಕ್ಕೆ ತಂದರೂ ಸಹ ಬಸ್ ಸಂಚಾರ ಇನ್ನೂ ಇರುವದಿಲ್ಲ. ಮಕ್ಕಳು ಶಾಲೆಗೆ ಹೋಗಿ ಬರಲು ಜಂಬಗಿ, ಶಿವನೂರ ಹಾಗೂ ಸಂಬರಗಿ ಗ್ರಾಮಕ್ಕೆ ತಲುಪಬೇಕಾಗುತ್ತದೆ.
ಈ ಗ್ರಾಮ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ಇದ್ದು, ಈ ಗ್ರಾಮಕ್ಕೆ ಮಹಾರಾಷ್ಟ್ರದ ಸಾಂಗಲಿ ಘಟಕದ ಬಸ ಸಂಚಾರ ಇರುತ್ತದೆ. ಆದರೆ ಕನರ್ಾಟಕ ಅಥಣಿ ಘಟಕದ ಒಂದು ಬಸ್ ಸಂಚಾರ ಇರುವದಿಲ್ಲ. ಕಾರಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಈ ಗ್ರಾಮಕ್ಕೆ ಜಂಬಗಿ ಮಾರ್ಗವಾಗಿ ಅಥಣಿ ಘಟಕದಿಂದ ಬಸನ್ನು ಬಿಡಬೇಕೆಂದು ಈ ಭಾಗದ ಜನರು ಹಾಗೂ ಕಲ್ಲೂತಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಅಥಣಿ ಘಟಕ ಬಸ್ ಡಿಪೋ ಮ್ಯಾನೇಜರ ಎನ್.ಎಮ್. ಕೇರಿ ಇವರನ್ನು ಸಂಪರ್ಕಿಸಿದಾಗ, ನಾನು ಪರಿಶೀಲನೆ ಮಾಡಿ ಕ್ರಮ ಕೈಕೊಳ್ಳಲಾಗುವದು ಎಂದು ಹೇಳಿದರು.