ರೈತ ವಿರೋಧಿ ಕೃಷಿ ನೀತಿಗಳನ್ನು ಮತ್ತು ವಿದ್ಯುತ್ ಕಾಯ್ದೆ 2023 ರದ್ದತಿಗಾಗಿ ಸೆಪ್ಟೆಂಬರ್ 23ರಂದು ದೆಹಲಿ ಚಲೋ
ಬಳ್ಳಾರಿ 05: ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಇಂದು ನಗರದ ಮರ್ಚೆಡ್ ರೆಸಿಡೆನ್ಸಿ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾ.ಗೋವಿಂದ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ನಮ್ಮ ದೇಶ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲಿದೆ, ಆದರೆ ರೈತರು ಮತ್ತು ಕೃಷಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಕೃಷಿ ಲಾಭದಾಯಕವಲ್ಲ, ಅಷ್ಟೇ ಅಲ್ಲ ಅದು ರೈತರನ್ನು ಸಾಲದ ಬಲೆಗೆ ಸಿಲುಕಿಸುತ್ತಿದೆ. ರೈತರು ಯಾವಾಗಲೂ ಬೆಲೆ ಕುಸಿತದ ವಿದ್ಯಮಾನವನ್ನು ಎದುರಿಸುತ್ತಿದ್ದಾರೆ ಮತ್ತು ಅವರು ಕೃಷಿ ಉತ್ಪಾದನೆಯನ್ನು ತೀರಾ ಕನಿಷ್ಠ ಬೆಲೆಗೆ ಮಾರಿಕೊಳ್ಳುವಂತಾಗಿದೆ. ರೈತರು ಬಹಳ ಕಾಲದಿಂದ ಇಟ್ಟಿರುವ ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಒಖಕ ಅ2+50ಅ ನ ಸೂತ್ರದ ಅಡಿಯಲ್ಲಿ ಉತ್ಪಾದನಾ ವೆಚ್ಚವನ್ನು ಕೇಂದ್ರ ಸರ್ಕಾರವು ಇಲ್ಲಿಯವರೆಗೂ ಕಾನೂನುಬದ್ಧಗೊಳಿಸಿಲ್ಲ.
ಕೃಷಿ ಒಳಸುರಿಯಾದ ಬೀಜ,ರಸಗೊಬ್ಬರ, ಮತ್ತು ಯಂತ್ರೋಪಕರಣಗಳು, ಕೃಷಿ ಉತ್ಪಾದನಾ ವೆಚ್ಚ, ಇವೆಲ್ಲವೂ ಏಕಸ್ವಾಮ್ಯದಿಪತಿಗಳ ಹಿಡಿತದಲ್ಲಿರುವುದರಿಂದ ಎಲ್ಲದರ ವೆಚ್ಚ ಅಡೆತಡೆಯಿಲ್ಲದೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ರೈತ ಸಾಲದ ಬಲೆಗೆ ಸಿಲುಕಿ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾನೆ. ರೈತರು ತಮ್ಮ ಭೂಮಿಗಳನ್ನು ಕಳೆದುಕೊಂಡು ಕೃಷಿ ಕಾರ್ಮಿಕರಾಗುತ್ತಿದ್ದಾರೆ. ಮತ್ತು ಈ ಕೃಷಿ ಕಾರ್ಮಿಕರಿಗೆ ಹಳ್ಳಿಯಲ್ಲಿ ಕೆಲಸವಿಲ್ಲ. ಅವರೆಲ್ಲ ನಗರಗಳಿಗೆ ಬಲವಂತವಾಗಿ ವಲಸೆ ಕಾರ್ಮಿಕರಾಗಿ ತಳ್ಳಲ್ಪಟ್ಟಿದ್ದಾರೆ. ಇತ್ತ ನಗರಗಳಲ್ಲೂ ಕೆಲಸವಿಲ್ಲದೆ ಅವರ ಜೀವನವನ್ನು ದಾರಿದ್ರ್ಯಗೊಳಿಸಿದೆ. ಇದರ ಕೀರ್ತಿಯು ಸ್ವಾತಂತ್ರ್ಯ ಭಾರತವನ್ನು ಆಳ್ವಿಕೆ ಮಾಡಿದ ಎಲ್ಲಾ ಸರ್ಕಾರಗಳಿಗೆ ಸಲ್ಲುತ್ತದೆ.
ನಮ್ಮ ದೇಶದಲ್ಲಿ ಜಾರಿಗೆ ಬಂದ ಜಾಗತೀಕರಣ ಖಾಸಗೀಕರಣ ನೀತಿಗಳಿಂದಾಗಿ, ರೈತರಿಗೆ ಸಿಗುವ, ಎಲ್ಲಾ ಸಬ್ಸಿಡಿಗಳನ್ನು ಕಡಿತ ಮಾಡಿ, ಬಂಡವಾಳಿಗರಿಗೆ ಧಾರೆ ಎರಿದ ಪರಿಣಾಮ ಈ ಎಲ್ಲಾ ದುಃಖ ಮತ್ತು ಸಂಕಟಗಳಿಗೆ ಕಾರಣವಾಗಿದೆ. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ, ಮಾಲೀಕರ ಮತ್ತು ಬಹು ರಾಷ್ಟ್ರೀಯ ಕಂಪನಿಗಳ ದುರಾಸೆಯನ್ನು ಪೂರೈಸಲು ಒಂದರ ನಂತರ ಒಂದರಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಅವರ ದಬ್ಬಾಳಿಕೆ ಮತ್ತು ನಿಗ್ರಹಕ್ಕೆ ಯಾವುದೇ ಮಿತಿ ಇಲ್ಲ. ಬಿಕ್ಕಟ್ಟಿನಿಂದ ಕೂಡಿದ ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಲು ಅವರು ಸಾಮಾನ್ಯ ರೈತರು ಮತ್ತು ಕೃಷಿ ಕಾರ್ಮಿಕರ ಹೆಗಲ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ಎಲ್ಲಾ ರೈತ ಕಾರ್ಮಿಕ ವಿರೋಧಿ ನೀತಿಗಳಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಾರ್ೊರೇಟ್ ಮನೆತನಗಳ ಪಾದ ಸೇವೆ ಮಾಡುವ ಪಕ್ಷಗಳೆಂಬುವುದು ಅವರ ನೀತಿಗಳಿಂದ ಸಾಬೀತಾಗಿದೆ.
ರೈತರು ಮತ್ತು ಕೃಷಿ ಕಾರ್ಮಿಕರಿಗೆ ಹೋರಾಟ ಬಿಟ್ಟು ಬೇರೆ ದಾರಿ ಇಲ್ಲ. ಅದಕ್ಕೆ ಸಾಕ್ಷಿ ದೆಹಲಿಯ ಗಡಿಯಲ್ಲಿ ರೈತರು 13 ತಿಂಗಳ ವೀರೋಚಿತ ಹೋರಾಟವನ್ನು ನಡೆಸಿ,750 ರೈತರು ತಮ್ಮ ಈ ಉದ್ದೇಶಕ್ಕಾಗಿ ಸಾವನ್ನು ನಗುಮೊಗದಿಂದ ಸ್ವೀಕರಿಸಿರುವುದನ್ನು ನಾವು ನೋಡಿದ್ದೇವೆ. ರಾಷ್ಟ್ರೀಯ ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಅವರ ಏಜೆಂಟರಾದ ಕೇಂದ್ರ ಬಿಜೆಪಿ ಸರ್ಕಾರ, ರೈತರ ಹೋರಾಟಕ್ಕೆ ಮಣಿದು ತಲೆಬಾಗಿ ಮೂರು ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲೇಬೇಕಾಯಿತು.ಅಷ್ಟೇ ಅಲ್ಲದೇ, ಕೇಂದ್ರ ಸರ್ಕಾರವು 6 ತಿಂಗಳ ಒಳಗೆ ಎಲ್ಲಾ ಬೆಳೆಗೆ ಬೆಂಬಲ ಬೆಲೆಯನ್ನು ನೀಡುವುದಾಗಿ, ಹುತಾತ್ಮ ರೈತರಿಗೆ ಪರಿಹಾರ ನೀಡುವುದಾಗಿ ಮತ್ತು ದೆಹಲಿ ರೈತ ಹೋರಾಟದ ಸಮಯದಲ್ಲಿ ರೈತರ ಮೇಲೆ ಹಾಕಿದ ಕೇಸ್ಗಳನ್ನು ವಾಪಸ್ ಪಡೆಯುವುದಾಗಿ ಲಿಖಿತ ಭರವಸೆ ನೀಡಿ, ಬೇಡಿಕೆ ಈಡೇರಿಸದೇ ರೈತರಿಗೆ ದ್ರೋಹ ಬಗೆದಿದೆ. ಆದರೆ ರೈತರು ದೇಶದ್ಯಾಂತ ಬಲಿಷ್ಠ ಹೋರಾಟ ಮುಂದುವರೆಸಿರುವುದು, ರೈತರು ಅಸಹಾಯಕರಲ್ಲ ಹಾಗೂ ರೈತರು ಬಂಡವಾಳಶಾಹಿಗಳ ಮತ್ತು ಅವರ ಹಿಂಬಾಲಕರನ್ನು ಅದಮ್ಯ ಸ್ಪೂರ್ತಿಯಿಂದ ಎದುರಿಸಬಹುದು ಎಂಬುವುದು ಮತ್ತೊಮ್ಮೆ ಸಾಬೀತುಪಡಿಸಿದೆ. ನಮ್ಮ ಪ್ರಜಾ ಸತ್ತಾತ್ಮಕ ಬೇಡಿಕೆಗಳನ್ನು ಪೂರ್ಣವಾಗಿ ಈಡೇರಿಸುವಂತೆ ಒತ್ತಾಯಿಸಲು ಈ ಹೋರಾಟ ಮುಂದುವರೆಯಲಿದೆ.
ಎಲ್ಲಾ ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರದ ವಹಿವಾಟನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು (ಠಿ) ಕಾನೂನುಬದ್ಧಗೊಳಿಸಿ, ಅ2+50ಅ ಸೂತ್ರದ ಪ್ರಕಾರ ಕೃಷಿ ಉತ್ಪನ್ನಗಳನ್ನು ಖರೀದಿಸಿ. ಕಡಿಮೆ ದರದಲ್ಲಿ ರಸಗೊಬ್ಬರ ಮತ್ತು ಬೀಜಗಳಂತಹ ಒಳಸುರಿಗಳನ್ನು ಸರಬರಾಜು ಮಾಡಿ. ಗ್ರಾಮೀಣ ಬಡವರಿಗೆ ವರ್ಷವಿಡಿ ಕೆಲಸ ಕೊಡಿ ಮತ್ತು ಸಮರ್ಕ ಕೂಲಿಯನ್ನು ಖಾತ್ರಿಪಡಿಸಿ. ಬಗರು ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ವಿತರಿಸಿ. ರೈತರ ಸಾಲ ಮನ್ನಾ ಮತ್ತು 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ನೀಡಿ. ವಿದ್ಯುತ್ ಕಾಯ್ದೆ 2023 ರನ್ನು ಕೂಡಲೇ ರದ್ದು ಮಾಡಿ, ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ಕಟ್ಟಬೇಕಿದೆ. ನಾವೆಲ್ಲರೂ ಸಂಘಟಿತರಾಗಬೇಕು ಮತ್ತು ದೇಶಾದ್ಯಂತ ಪ್ರಬಲ ರೈತ ಚಳುವಳಿಯನ್ನು ಕಟ್ಟಬೇಕು. ಇದಕ್ಕಾಗಿ ಂಋಏಒಖ ಸಂಘಟನೆಯು ಸೆಪ್ಟೆಂಬರ್ 23,2024 ದೆಹಲಿಯ ತಾಲ್ಕೊತ್ರಾ ಸ್ಟೇಡಿಯಂನಲ್ಲಿ ಕಿಸಾನ್ ಮಹಾ ಪಂಚಾಯತ್ ಅನ್ನು ಸಂಘಟಿಸುತ್ತಿದೆ. ಇದು ರೈತರ ಹೋರಾಟವನ್ನು ಬಲಪಡಿಸುತ್ತದೆ ಮತ್ತು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನಾವು ಭಾವಿಸುತ್ತೇವೆ.
ಎಲ್ಲಾ ಕಾರ್ಮಿಕ ವರ್ಗ ಮತ್ತು ಪ್ರಜಾಸತ್ತಾತ್ಮಕ ಮನಸ್ಸಿನ ಜನರು ಮೊದಲಿನಂತೆ ನಮ್ಮೊಂದಿಗಿದ್ದಾರೆ. ಅವರು ಉದಾರವಾಗಿ ಈ ಹೋರಾಟದಕ್ಕೆ ನಮಗೆ ಸಹಾಯ ಸಹಕಾರ ನೀಡುವುದರ ಮೂಲಕ ಐತಿಹಾಸಿಕ ದೆಹಲಿ ಹೋರಾಟವನ್ನು ಯಶಸ್ವಿಗೂಳಿಸಬೇಕು ಎಂದು ಕರೆ ನೀಡುತ್ತಾ ನಾವು ಹೋರಾಡುತ್ತೇವೆ, ನಾವು ಗೆಲ್ಲುತ್ತೇವೆ ಎಂದರು.
ಈ ಪತ್ರೀಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ , ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಮುಖಂಡರಾದ ಕುರುಗೋಡು ತಾಲೂಕು ಅಧ್ಯಕ್ಷ ಕೋಳೂರು ಲಿಂಗಪ್ಪ, ಕಾರ್ಯದರ್ಶಿ ಕೆರೆಕೆರೆ ಬಸವರಾಜ, ಜಿಲ್ಲಾ ಸಮಿತಿ ಸದಸ್ಯ ಬೆಳಗಲ್ ಬಸವರಾಜ್, ಮಲ್ಲಪ್ಪ ಮತ್ತು ಹನುಮಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.