ದೀಪಾವಳಿ: ಪೂಜಾ ಸಾಮಾಗ್ರಿಗಳ ಖರೀದಿಗೆ ಮುಗಿ ಬಿದ್ದ ಜನ
ಇಂಡಿ: ದೀಪಾವಳಿ ಪಾಡ್ಯದ ನಿಮಿತ್ಯ ಗುರುವಾರ ಪಟ್ಟಣದಲ್ಲಿ ಪೂಜಾ ಸಾಮಗ್ರಿ ಹಾಗೂ ಪಟಾಕಿ ಖರೀದಿ ಜೋರಾಗಿತ್ತು.
ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಸಿಂದಗಿ, ವಿಜಯಪುರ, ಸೋಲಾಪೂರ ರಸ್ತೆ ಬದಿಗಳಲ್ಲಿ ಕಬ್ಬು, ಬಾಳೆದಿಂಡುಗಳನ್ನು ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಮಾರಾಟಗಾರರು ಮಾರಾಟ ಮಾಡುತ್ತಿರುವುದು ಕಂಡು ಬಂತು. ಖರೀದಿಗಾರರು ಸಹ ಎಲ್ಲ ಪೂಜಾ ಸಾಮಗ್ರಿಗಳನ್ನು ಮುಗಿಬಿದ್ದು ಖರೀದಿಸುತ್ತಿರುವುದು ಕಂಡು ಬಂದಿತು.
ಸ್ಟೇಶನರಿ ಅಂಗಡಿಗಳಲ್ಲಿ ಪಟಾಕಿ ಖರೀದಿಗೂ ಜನ ಮುಗಿಬಿದ್ದು ಪಟಾಕಿ ಖರೀದಿದರು.