ಇಂಡಿ

ದಿ. 12ರಂದು ಕಿವುಡ, ಮೂಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ದಿ. 12ರಂದು  ಕಿವುಡ, ಮೂಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಇಂಡಿ 11: ನಗರದಲ್ಲಿ ಗಜಾನನ ಯುವಕ ಮಂಡಳಿ, ಮಾಹಾಲಕ್ಷೀ ನಗರ ವತಿಯಿಂದ ಗಜಾನನ ಉತ್ಸವದ ಅಂಗವಾಗಿ ಇದೆ ದಿ. 12ರಂದು ಸಾಯಂಕಾಲ 5ಗಂಟೆಗೆ ಮಹಾಂತೇಶ ಶಾಸ್ತ್ರಿಗಳು ಹಿರೇಮಠ ತದ್ದೇವಾಡಿ ಇವರ ಸಾನಿಧ್ಯದಲ್ಲಿ ಗುರು ಚಂದ್ರಶೇಖರ ಕಿವುಡ ಹಾಗೂ ಮೂಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗಜಾನನ ಯುವಕ ಮಂಡಳಿ ಅಧ್ಯಕ್ಷರು ಹಾಗೂ ಇಂಡಿ ವಿಕಾಸ ಸೌಹಾರ್ದಿತ ಬ್ಯಾಂಕ್ ಅಧ್ಯಕ್ಷ ಆನಂದ ಗಣಾಚಾರಿ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ಬಿಜೆಪಿ ಮುಖಂಡ ದಯಸಾಗರ ಪಾಟೀಲ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀತಿಲಿದ್ದಾರೆ. ನಿವೃತ್ತ ಶಿಕ್ಷಕರು ಹಾಗೂ ಶಾಸಕರ ಆಪ್ತ ಸಹಾಯಕ ತಮ್ಮಣ್ಣ ಕಟ್ಟೆ, ರಾಜ್ಯ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಸ್ ಆರ್ ಪಾಟೀಲ, ಉದ್ದಿಮೇದಾರ ವಿಶ್ವನಾಥ ಚವ್ಹಾಣ, ಕಾಂಗ್ರೆಸ್ ಮುಖಂಡ ಮಂಜುನಾಥ ಕಾಮಗೊಂಡ, ಪುರಸಬೆ ಸದಸ್ಯರಾದ ಅಹಿಬೂ ಬಾಗವಾನ, ಉಮೇಶ್ ದೇಗಿನಾಳ, ಶ್ರೀಮಂತ ಎಳಸಂಗ್, ನಂದಲಾಲ್ ಗುಜ್ಜರ, ಭಾರತೀ ವಾಲಿ, ಶ್ರೀಶೈಲ ಕೊರಳ್ಳಿ, ಸಂಮಮೇಶ ಗಲಗಲಿ, ಮಾಪಸಿಂಗ್ ಫಾರ್ಮ್‌ರ, ಸೇರಿದಂತೆ ಅನೇಕ ಗಣ್ಯಮಾನ್ಯರು ಉಪಸ್ಥಿತಿ ಇರಲಿದ್ದಾರೆ. ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಗಜಾನನ ಯುವಕ ಮಂಡಳಿ ಅಧ್ಯಕ್ಷ ಆನಂದ ಗಣಾಚಾರಿ ತಿಳಿಸಿದ್ದಾರೆ. 


ಸುದ್ದಿ ಓದಿ