ರಾಣೆಬೆನ್ನೂರ

ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ : ವಾಪಾಸ್ ಪಡೆಯಲು ರೈತರ ಆಗ್ರಹ 26 ರಂದು ಹೆದ್ದಾರಿ ಬಂದ್

ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ : ವಾಪಾಸ್ ಪಡೆಯಲು ರೈತರ ಆಗ್ರಹ 26 ರಂದು ಹೆದ್ದಾರಿ ಬಂದ್

ರಾಣೇಬೆನ್ನೂರು  25 : ರೈತರ ಖಾತೆಗೆ ಜಮಾ ಆಗಿರುವ ಬೆಳೆ ವಿಮೆ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಂಡಿರುವುದನ್ನು  ವಾಪಸ್ ಪಡೆಯದಿದ್ದರೆ ಇದೇ 26 ರಂದು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬಂದ್ಗೊಳಿಸಿ  ಪ್ರತಿಭಟನೆ ಮಾಡಲಾಗುವುದೆಂದು ರೈತ ಮುಖಂಡ ರವೀಂದ್ರ ಗೌಡ ಪಾಟೀಲ್ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ  ಎಚ್ಚರಿಸಿದ್ದಾರೆ. ರೈತರ ಖಾತೆಗೆ ಜಮಾ ಆಗಿರುವ ಬೆಳೆ ವಿಮೆ ಹಣದ ಜೊತೆಗೆ ವಿಧವಾ ವೇತನ, ಪಿಂಚಣಿ, ಮಾಸಾಸನ ಸೇರಿದಂತೆ ಉದ್ಯೋಗ ಖಾತ್ರಿ ಎಂತಹ ವಿವಿಧ ಯೋಜನೆಗಳ ಹಣವನ್ನು ಬ್ಯಾಂಕಿನವರು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಂಡು ರೈತರು ಆ ಹಣವನ್ನು ಡ್ರಾ ಮಾಡಿಕೊಳ್ಳದಂತೆ ಬ್ಲಾಕ್ ಮಾಡಿಕೊಂಡಿರುವ ಬ್ಯಾಂಕಿನವರ ಕ್ರಮವನ್ನು ಖಂಡಿಸಿರುವ ರವೀಂದ್ರ ಗೌಡ ಮತ್ತು ಈರಣ್ಣ ಹಲಗೇರಿ ಅವರು ಕೂಡಲೇ ಲಾಕ್ ಓಪನ್ ಮಾಡಬೇಕು ಇಲ್ಲದೆ ಇದ್ದರೆ 400 ವೃತ್ತದಲ್ಲಿರುವ  ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮೇ 26ರಂದು ಮುಂಜಾನೆ 10 ಗಂಟೆಗೆ ಮಾಕನೂರು  ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಲು ರೈತ ಸಂಘದ ಮುಖಂಡರು, ತಾಲೂಕಿನ ರೈತರು ನಿರ್ಧರಿಸಲಾಗಿದ್ದು, ರೈತ ಬಾಂಧವರು ನಿಗದಿತ ಸಮಯಕ್ಕೆ ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತರಿದ್ದು  ಸಹಕರಿಸುವಂತೆ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು ಕರೆ ನೀಡಿದ್ದಾರೆ.

ಸುದ್ದಿ ಓದಿ