27ರಂದು ಕಾಂಗ್ರೆಸ್ ಪಕ್ಷದ ಸಮಾವೇಶ
ಸಂಬರಗಿ 15: ಮದಭಾವಿ ಗ್ರಾಮದಲ್ಲಿ ಫೆ. 27ರಂದು ರಾಜ್ಯ ವಿಧಾನಸಭಾ ವಿರೋಧ ಪಕ್ಶದ ನಾಯಕ ಸಿದ್ದರಾಮಯ್ಯಾ ಇವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ವಿವಿಧ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಾರೆಂದು ಅನಂತಪೂರ ಬ್ಲಾಕ್ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಒಂಪ್ರಕಾಶ್ ಪಾಟೀಲ ಸಂಬರಗಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ಸಮಾರಂಭಕ್ಕೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಮ್. ಬಿ.ಪಾಟೀಲ, ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಲಕ್ಶ್ಷೀ ಹೆಬ್ಬಾಳಕರ, ಜಿಲ್ಲಾಧ್ಯಕ್ಷ ಲಕ್ಷ್ಮಣ ಚಿಂಗಳೆ, ಮಾಜಿ ಶಾಸಕ ರಾಜು ಕಾಗೆ, ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸೇರಿದಂತೆ ರಾಜ್ಯದ ಮುಖಂಡರು ಉಪಸ್ಥಿತರಿರುತ್ತಾರೆ.
ಕಾಗವಾಡ ಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮದಲ್ಲಿ ಪ್ರತಿ ವಾರ್ಡ್ದಲ್ಲಿ ಪಧಾದಿಕಾರಿಗಳ ಆಯ್ಕೆ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕಾರ್ಯಕರ್ತರ ಯಾವುದೇ ಸಮಸ್ಯೇ ಇದ್ದರೆ ನಾವು ಶೀಘ್ರ ಪರಿಹಾರಗೋಳಿಸುತ್ತಿದ್ದೇವೆ. ಸಮಾವೇಶಕ್ಕೆ ಸುಮಾರು ಆರವತ್ತರಿಂದ ಎಪ್ಪತ್ತು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂದರು.
ಸಂಬರಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಶೋಕ ಮಾನೆ, ರಮೇಶ ಪಾಟೀಲ, ಪಾಂಡುರಂಗ ಕಾಂಬಳೆ, ಮಹದೇವ ತಾನಗೆ ಉಪಸ್ಥಿತರಿದ್ದರು.