ಎಲ್ಎಸ್ಎಂಪಿ ನೂತನ ನಿರ್ದೇಶಕರಿಗೆ ಸನ್ಮಾನ
ಬೈಲಹೊಂಗಲ 06: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ.ನಂ.1 ರಲ್ಲಿ ಇತ್ತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ದೊಡ್ಡಾದೇವರ ದೇವಸ್ಥಾನ ಟ್ರಸ್ಟ್ ಕಮೀಟಿ ಹಾಗೂ ಸಂಘದ ರೈತರು ಸನ್ಮಾನಿಸಿದರು.
ಸಂಘದ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ಪಾಂಡಪ್ಪ ಇಂಚಲ, ಉಳವಪ್ಪ ಬಡ್ಡಿಮನಿ, ಮಹಾಬಳೇಶ್ವರ ಬೋಳನ್ನವರ, ಕುಮಾರಗೌಡಾ ಪಾಟೀಲ, ಮಹಾಂತೇಶ ಹೊಸಮನಿ ಹಾಗೂ ಅರುಣ ತುರಮರಿ, ಮಹಾಂತೇಶ ಹರಕುಣಿ ಅವರನ್ನು ಸತ್ಕರಿಸಲಾಯಿತು. ಇದೇ ವೇಳೆ ನಿವೃತ್ತಗೊಂಡ ಸಂಘದ ಹಿಂದಿನ ಕಾರ್ಯದಶರ್ಿ ಸೋಮಪ್ಪ ವಾಲಿ ಅವರನ್ನು ಕೂಡ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನಕ್ಕುತ್ತರವಾಗಿ ಮಾತನಾಡಿದ ನೂತನ ನಿರ್ದೇಶಕ ಮಹಾಬಳೇಶ್ವರ ಬೋಳನ್ನವರ, ರೈತರ ಅಭಿವೃದ್ದಿಗಾಗಿ ನೂತನ ಆಡಳಿತ ಮಂಡಳಿ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಶ್ರಮಿಸುವದಾಗಿ ತಿಳಿಸಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವೆ.ಮೂ. ಮಹಾಂತಯ್ಯಸ್ವಾಮಿ ತೆಗ್ಗಿನಮಠ, ವೆ.ಮೂ. ಸಂಜಯಸ್ವಾಮಿ ತೆಗ್ಗಿನಮಠ ವಹಿಸಿ ಆಶೀರ್ವಚನ ನೀಡಿ, ಶ್ರೀ ದೊಡ್ಡಾದೇವರ ಟ್ರಸ್ಟ್ ಕಮೀಟಿಗೆ 11 ಸಾವಿರ ರೂ.ದೇಣಿಗೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿವರಂಜನ ಬೋಳನ್ನವರ, ಶಂಕ್ರೆಪ್ಪ ಯಡಳ್ಳಿ, ಶಂಕ್ರೆಪ್ಪ ತುರಮರಿ, ಮಲ್ಲಿಕಾಜರ್ುನ ಬೋಳನ್ನವರ, ಉಳವಪ್ಪ ಶೆಟಗಾರ, ಶ್ರೀಕಾಂತ ಮತ್ತಿಕೊಪ್ಪ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಆಗಮಿಸಿದ್ದರು. ಟ್ರಸ್ಟ್ ಕಮೀಟಿ ಪದಾಧಿಕಾರಿಗಳು, ಗ್ಪಣ್ಯರು ಪಾಲ್ಗೊಂಡಿದ್ದರು.