ಇಂದಿನ ಸಮಾಜದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕ: ರಾಕೇಶಕುಮಾರ
ಯರಗಟ್ಟಿ 11: ಸರಕಾರಿ ಶಾಲೆಯಲ್ಲಿ ಕಲಿಯುವ ಗ್ರಾಮೀಣ ಮಕ್ಕಳಿಗೆ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯವಾಗಿದೆ ಎಂದು ಬಾಷ್ ಕಂಪನಿ ಭಾರತ ಸೆಕ್ಯೂರಿಟಿ ಮುಖ್ಯಸ್ಥ ರಾಕೇಶಕುಮಾರ ತ್ರಿಪಾಠಿ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬಾಷ್ ಲಿಮಿಟೆಡ್ ಕಂಪನಿಯಿಂದ ಸುಮಾರು ಹದಿನೈದು ಲಕ್ಷಕ್ಕಿಂತಲೂ ಹೆಚ್ಚಿನ ಹಣದಲ್ಲಿ ಇಪ್ಪತ್ತು ಕಂಪ್ಯೂಟರ್ ವಿತರಿಸಿ, ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.
ಪ್ರಕಾಶಗೌಡ ಪಾಟೀಲ ಬಾಷ್ ಕಂಪನಿ ಸೆಕ್ಯೂರಿಟಿ ಅಧಿಕಾರಿ ಮಾತನಾಡಿ ಬಾಷ್ ಕಂಪನಿಯು ಜರ್ಮನಿ ದೇಶದ ಕಂಪನಿಯಾಗಿದೆ ಭಾರತ ದೇಶದಲ್ಲಿ ಸಾಕಷ್ಟು ಸೋಲಾರ ಪ್ಲಾಂಟ್ಗಳನ್ನು ನಿರ್ಮಿಸಿ ಸೋಲಾರ ವಿದ್ಯುತ್ ನೀಡುತ್ತಾ ಬಂದಿದೆ. ಬಾಷ್ ಕಂಪನಿಯು ಸಮಾಜದ ಬಡವರಿಗೆ, ವಿದ್ಯಾರ್ಥಿಗಳಿಗೆ, ಮೂಲಭೂತ ಸೌಕರ್ಯಗಳಿಗೆ ತನ್ನ ಲಾಬಾಂಶದಲ್ಲಿ ಸಾಕಷ್ಟು ಹಣವನ್ನು ಸಹಾಯ ಮಾಡುತ್ತಾ ಸಮಾಜ ಸೇವೆ ಮಾಡುತ್ತಿದೆ ಎಂದರು.
ಬಾಗೋಜಿಕೊಪ್ಪ ಡಾ.ಶಿವಲಿಂಗ ಮುರುಘಾರಾಜೇಂದ್ರ ಶ್ರೀಗಳು ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಎಸ್ಡಿಎಮ್ಸಿ ಅಧ್ಯಕ್ಷೆ ಸೃಷ್ಠಿ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ, ಪ.ಪಂ.ಮುಖ್ಯಾಧಿಕಾರಿ ಎಸ್.ಎಸ್.ಗೋರೋಶಿ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ಬಳಿಗಾರ, ಪ್ರದೀಫ್ ಸಿಂಗ್, ಪ್ರೀತಮ್ ಸಿಂಗ್, ಸಿ.ವೈ.ತುಬಾಕದ, ಎಚ್.ಆರ್.ಪೆಟ್ಲೂರ, ಎಂ.ಎಂ.ಚೀಲದ, ಎಸ್.ಬಿ.ಮಿಕಲಿ, ಎ.ಕೆ.ಜಮಾದಾರ, ಎನ್.ಕೆ.ಹುಚರಡ್ಡಿ, ರಾಜೇಂದ್ರ ವಾಲಿ, ರಪೀಕ್ ಜಮಾದಾರ, ಎಸ್ಡಿಎಮ್ಸಿ ಸರ್ವ ಸದಸ್ಯರು, ಶಾಲಾ ಸಿಬ್ಬಂದಿ, ಸಿಆರ್ಸಿಗಳು, ಯರಗಟ್ಟಿ ಸೋಲಾರ್ ಪ್ಲಾಂಟ್ ಬಾಷ್ ಲಿಮಿಟೆಡ್ ಕಂಪನಿ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ಎಸ್.ಬಿ.ಪಾಣಿಶೆಟ್ಟಿ ನಿರೂಪಿಸಿದರು, ಶಿಕ್ಷಕ ಹುಣಶಿಕಟ್ಟಿ ಸ್ವಾಗತಿಸಿದರು, ಶಿಕ್ಷಕ ಪೂಜೇರ ವಂದಿಸಿದರು.