ರಾಣೆಬೆನ್ನೂರ

ಶಿಕ್ಷಕರು ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕು-ಪಿ.ವಿ.ಮಠದ

ಶಿಕ್ಷಕರು ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕು-ಪಿ.ವಿ.ಮಠದ

ರಾಣೇಬೆನ್ನೂರು 9: ಮಕ್ಕಳ ಶಿಕ್ಷಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಶಕ್ತಿಯಾಗಿ ಕೆಲಸ ಮಾಡಬೇಕಾದ ಶಿಕ್ಷಕ ವರ್ಗ ಇಂದು ಸರ್ಕಾರಿ ಕೆಲಸದ ಜೊತೆಗೆ ಮತ್ತೊಂದು ಆದಾಯ ಬರುವಂತಹ ಕೆಲಸ ಮಾಡುತ್ತಿರುವುದು ಶಿಕ್ಷಣದ ಗುಣಮಟ್ಟವನ್ನು ಕುಗ್ಗಿಸುವಲ್ಲಿ ಪ್ರಮುಖ ಕಾರಣವಾಗಿ ಕಂಡುಬರುತ್ತಿದೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಪಿ.ವಿ. ಮಠದ  ವಿಷಾದಿಸಿದರು. ಅವರು.ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆಯ  ಸದಸ್ಯರು ತಾಲೂಕಿನ ಶಿಕ್ಷಕರು ತಮ್ಮ ಶಾಲಾ ಅವಧಿಯ ಸಮಯವನ್ನು ವ್ಯರ್ಥ ಗೊಳಿಸಿದ್ದು ಕಂಡು ಬಂದಲ್ಲಿ ಅಂತಹ ಶಾಲೆಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಖುದ್ದಾಗಿ ಭೇಟಿ ನೀಡಿ ಎಚ್ಚರಿಕೆ ನೀಡಲಾಗುವುದು.  ಸರ್ಕಾರಿ ಶಾಲೆಗಳ ಗುಣಮಟ್ಟಕ್ಕೆ ಬೇಸತ್ತು ಪಾಲಕರು ದುಬಾರಿ ಶಿಕ್ಷಣದತ್ತ ಮುಖ ಮಾಡಿರುವುದು ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಸ್ಥಿತಿಗೆ ಬಂದಂತಾಗಿದೆ. ಸ್ವತಃ ಶಿಕ್ಷಕರುಗಳೇ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಸುತ್ತಿದ್ದು, ಕಾರ್ಮಿಕ ಬಡ ರೈತರ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಓದುವಂತಾಗಿದೆ, ಸಾವಿರಾರು ಗಟ್ಟಲೆ ಹಣ ನೀಡಿ ನವೋದಯ ಮುರಾರ್ಜಿ ಅಂತಹ ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ತಮ್ಮ ಮಕ್ಕಳನ್ನು ಪಾಲಕರು ಖಾಸಗಿ ಟ್ಯೂಷನ್ ಗಳಿಗೆ ಸೇರಿಸುತ್ತಿರುವುದು ಸರ್ಕಾರಿ ಶಾಲಾ ಶಿಕ್ಷಕರ ಕಾರ್ಯವೈಖರಿಯನ್ನ ಅಣಕಿಸುವಂತಿದೆ , ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ಗಮನಹರಿಸಿ ಸರ್ಕಾರಿ ಶಾಲೆಯಲ್ಲಿಯೇ ನವೋದಯ ಮುರಾರ್ಜಿ ರಾಣಿ ಚೆನ್ನಮ್ಮ ಮತ್ತು ಸೈನಿಕ ಶಾಲೆಗೆ ಅರ್ಹತೆ ಹೊಂದಲು ವಿಶೇಷ ತರಬೇತಿ ತರಗತಿಗಳನ್ನು ಕಡ್ಡಾಯವಾಗಿ ಆಯೋಜಿಸುವಂತೆ ಶಿಕ್ಷಕರಿಗೆ ತಾಕಿತು ಮಾಡಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ   ವೇದಿಕೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸಾವಕ್ಜಳ್ಳವರ್, ಕಾರ್ಮಿಕ ಘಟಕದ ಅಧ್ಯಕ್ಷ ಶಂಕನಗೌಡ ಪಾಟೀಲ್, ತಾಲೂಕು ಸಂಘಟನಾ ಕಾರ್ಯದರ್ಶಿ ಮಾಲತೇಶ್ ಪೂಜಾರ್ ಮತ್ತಿತರರು ಪಾಲ್ಗೊಂಡಿದ್ದರು.

ಸುದ್ದಿ ಓದಿ