ರಾಣೆಬೆನ್ನೂರ

ತುಂಗಾಜಲ ಚೌಡೇಶ್ವರಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ

ತುಂಗಾಜಲ ಚೌಡೇಶ್ವರಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ

ರಾಣಿಬೆನ್ನೂರ28: ಮಾರುತಿ ನಗರದ ತುಂಗಾಜಲ ಚೌಡೇಶ್ವರಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಅಂಗವಾಗಿ ಕಳಸದ ಮೆರವಣಿಗೆಯನ್ನು ಪೂರ್ಣಕುಂಬ ಹೊತ್ತ ಮಹಿಳೆಯರೊಂದಿಗೆ ಇಲ್ಲಿನ ಕುರಬಗೇರಿಯ ಬನಶಂಕರಿ ದೇವಸ್ಥಾನದಿಂದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಸಲಾಯಿತು. 

   ಮೆರವಣೆಗೆಯು ನಗರದ ಪ್ರಮುಖ ಬೀದಿಗಳಲ್ಲಿ ಭಾಜಾ ಭಜಂತ್ರಿ ಮತ್ತು ಮಂಗಲ ವಾಧ್ಯಗಳೊಂದಿ ಸಂಚರಿಸಿ ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನಕ್ಕೆ ಬಂದು ತಲುಪಿತು.

     ಮೆರವಿಗೆಯಲ್ಲಿ ಹೊನ್ನಾಳಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ಲಿಂಗನಾಯಕನಹಳ್ಳಿಯ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಶಿವಾಚಾರ್ಯ ಶ್ರೀಗಳು,   ದಿಂಡದಹಳ್ಳಿಯ ಪಶುಪತಿ ಸ್ವಾಮಿಗಳು, ನಗರದ ಹಿರೇಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ ಶ್ರೀಗಳು, ದೇವಸ್ಥಾನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ,  ಎಲ್.ಜಿ. ಶೆಟ್ಟರ, ಏಕಾಂತ ಮುದಿಗೌಡ್ರ, ಕುಮಾರ ಮಡಿವಾಳರ,  ಕರಬಸಪ್ಪ ಜಾಡರ, ಈರಪ್ಪ ಮುದಿಗೊಣ್ಣನವರ, ನಿಂಗಪ್ಪ ವಿಭೂತಿ, ಲಕ್ಷ್ಮಣ ಸಾಲಿ, ಪ್ರಮೋದ ಕೋಪರ್ಡ್ , ಬಸವರಾಜ ಗೂಳೇರ, ವಿರುಪಾಕ್ಷಪ್ಪ ಮರಡಿಬಣಕಾರ, ದುರುಗಪ್ಪ ಹುಲಗಮ್ಮನವರ, ಶಿವಪ್ಪ ಬೆನಕನಕೊಂಡ, ಪ್ರಮೋದ ಕೋಪಡರ್ೆ ಪಾಲ್ಗೊಂಡಿದ್ದರು. 

    ನಂತರ ಹರಗುರು ಚರಮೂರ್ತಿಗಳ ಅಮೃತ ಹಸ್ತದಿಂದ ದೇವಿಗೆ ಅಭಿಷೇಕ, ನೂತನ ಬೆಳ್ಳಿ ಕವಚ ಸಮರ್ಪಣೆ, ವಿವಿಧ ಹೂವುಗಳಿಂದ ಅಲಂಕಾರ, ಹವನ ಹೋಮ ವಿಧಿ ವಿಧಾನಗಳು ನೆರವೇರಿದವು. ನಂತರ ಪೂಜ್ಯರ ಸಾನಿಧ್ಯದಲ್ಲಿ ಕಳಸಾರೋಹಣ ನೆರವೇರಿತು.                    


ಸುದ್ದಿ ಓದಿ