ಬೈಲಹೊಂಗಲ

ದಿನನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು: ಶಾಸಕ ಕೌಜಲಗಿ

ದಿನನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು: ಶಾಸಕ  ಕೌಜಲಗಿ

ಬೈಲಹೊಂಗಲ 23: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. 

ಅವರು ಶನಿವಾರ  ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಚ್ಛತೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ  ಬೈಲಹೊಂಗಲ ಪುರಸಭೆಗೆ ಪ್ರತಿವರ್ಷ ರಾಜ್ಯ, ಜಿಲ್ಲಾಮಟ್ಟದಲ್ಲಿ ಸ್ವಚ್ಛತೆಗೆ ಉತ್ತಮ ಸ್ಥಾನ ಪಡೆದಿದ್ದು, ಸ್ವಚ್ಛತೆಗೆ ಇನ್ನೂ ಹೆಚ್ಚಿನ ಒತ್ತು ನೀಡಿ, ಬೈಲಹೊಂಗಲ ಪುರಸಭೆಯನ್ನು ಮಾದರಿ ಪುರಸಭೆಯಾಗಿ ಮಾಡಲು ಶ್ರಮಿಸುವಂತೆ ತಿಳಿಸಿದರು. 

ಸ್ವಚ್ಛ ಭಾರತ ಮಿಷನ್‌-2.0 ಯೋಜನೆಯ ಸಫಾಯಿಮಿತ್ರ ಸುರಕ್ಷಾ ಶಿಬಿರದಡಿ ಪೌರಕಾರ್ಮಿಕರಿಗೆ ಆಯೋಜಿಸಲಾದ ವಿವಿಧ ಕ್ರೀಡೆಗಳ ವಿಜೇತರಿಗೆ ಪಾರತೋಷಕಗಳನ್ನು ನೀಡಿ, ಗೌರವಿಸಲಾಯಿತು ಹಾಗೂ ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಸುರಕ್ಷಾ ಧಿರಿಸುಗಳನ್ನು ವಿತರಿಸಲಾಯಿತು  ಮತ್ತು ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಹಾಗೂ ನೀರು ಸರಬರಾಜು ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು. 

ಅರೋಗ್ಯ ಇಲಾಖೆಯ  ನಾಗರಾಜ ಕಾಡೆ ಪೌರ ಕಾರ್ಮಿಕರ ಅರೋಗ್ಯ ತಪಾಸಿಸಿದರು.   ಮುಖ್ಯಾಧಿಕಾರಿ ವಿರೇಶ ಹಸಬಿ, ಸದಸ್ಯರಾದ ರಾಜು ಜನ್ಮಟ್ಟಿ, ಸುಧೀರ ವಾಲಿ ಮಾತನಾಡಿದರು. 


ಸುದ್ದಿ ಓದಿ