ಬೈಲಹೊಂಗಲ

ಮೊಹರಂ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಿ: ಸಿಪಿಐ ಸಾಲಿಮಠ

ಮೊಹರಂ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಿ: ಸಿಪಿಐ ಸಾಲಿಮಠ

ಬೈಲಹೊಂಗಲ 23: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕೆಂದು ಸಿಪಿಐ ಪಂಚಾಕ್ಷರಿ ಸಾಲಿಮಠ ಹೇಳಿದರು.

ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು. ಬೈಲಹೊಂಗಲ ನಾಡು ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಎಲ್ಲ ಧರ್ಮದವರು ಪ್ರೀತಿ, ವಾತ್ಸಲ್ಯದಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಮೊಹರಂ ಹಬ್ಬವನ್ನು ಎಲ್ಲರೂ ಕೊಡಿಕೊಂಡು ಶಾಂತಿಯಿಂದ ಆಚರಿಸಬೇಕು. ಯಾರಾದರೂ ಶಾಂತಿ ಕದಡುವುದಾಗಲಿ, ಗಲಾಟೆ ಮಾಡುವುದಾಗಲಿ ಹಂತವರ ಬಗ್ಗೆ ಮಾಹಿತಿ ನೀಡಿ ಮುಲ್ಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ. ಪೊಲೀಸ್ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ಡೋಲಿಗಳ ಹಿರಿಯರು ಪೊಲಿಸರೊಂದಿಗೆ ಸಹಕಾರ ನೀಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಕೆಲವರು ಕುಡಿದು ಹೆಣ್ಣು ಮಕ್ಕಳನ್ನು ಚುಡಾಯಿಸುವುದಾಗಲಿ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ. ಎಲ್ಲ ಕಡೆ ಬಿಗಿ ಪೊಲೀಸ್ ಬಂದೋಬಸ್ತ ಒದಗಿಸಲಾಗುವುದು ಎಂದರು. ಎಲ್ಲ ಡೋಲಿಗಳ ಹಿರಿಯರು, ಸಾರ್ವಜನಿಕರು, ಪೊಲೀಸರು ಉಪಸ್ಥಿತರಿದ್ದರು

ಸುದ್ದಿ ಓದಿ