ಗೌರಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ: ಸಿಪಿಐ ಸಾಲಿಮಠ
ಬೈಲಹೊಂಗಲ 05: ಗೌರಿ ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕೆಂದು ಸಿಪಿಐ ಪಂಚಾಕ್ಷರಿ ಸಾಲಿಮಠ ಹೇಳಿದರು.
ಅವರು ಸೋಮವಾರ ತಾಪಂ. ಸಭಾಭವನದಲ್ಲಿ ಗಣೇಶ ಹಬ್ಬದ ನಿಮಿತ್ತ ಗಣೇಶ ಮಂಡಳಿಯ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಮಂಟಪದಲ್ಲಿ ಪೊಲೀಸ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು ಕಟ್ಟುನಿಟ್ಟಾಗಿ ಸಿಸಿ ಕ್ಯಾಮರಾ, ಹೆಸ್ಕಾಂ ಇಲಾಖೆಯಿಂದ ಅನುಮತಿ, ಮೀಟರ ಆಳವಡಿಸಬೇಕು. ಯಾವುದೇ ಅವಘಡ ಸಂಭವಿಸಿದಂತೆ ಗುಣಮಟ್ಟದ ವಿಿದ್ಯತ್ ವೈರಗಳನ್ನು ಬಳಕೆ ಮಾಡಬೇಕು. ಮಂಟಪದ ಸುತ್ತಮುತ್ತಲೂ ಬೆಳಕಿನ ವ್ಯವಸ್ಥೆ ಕಲ್ಪಿಸಬೆಕು. ಅಲ್ಲದೇ ಇಬ್ಬರು ವ್ಯಕ್ತಿಗಳು ಮಂಟಪದಲ್ಲಿ ಇರಬೇಕು. ಸಮಯಕ್ಕೆ ನಿಗದಿ ಪಡಿಸಿದ ಧ್ವನಿವರ್ಧಕ ಬಳಕೆ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆ ನಡೆಸಿದರೆ ಅಂತಹವರ ಮೇಲೆ ನಿಧರ್ಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ವೇದಿಕೆ ಮೇಲೆ ಹೆಸ್ಕಾಂ ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ವೈಶಾಲಿ ತುಡವೇಕರ, ತಾಪಂ.ಇಓ ಸುಭಾಸ ಸಂಪ್ಗಾವಿ, ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ, ಅಬಕಾರಿ ಇಲಾಖೆ ಅಧಿಕಾರಿ ಬಸವರಾಜ ಇದ್ದರು.
ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಗಣೇಶ ಉತ್ಸವವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಿಕೊಳ್ಳುತ್ತ ಬಂದಿದ್ದು ಈ ಬಾರಿ ಪೊಲೀಸ ಇಲಾಖೆ ಮಾರ್ಗಸೂಚಿಯ ಪ್ರಕಾರ ಅನುಮತಿ ಪಡೆದುಕೊಂಡು ಉತ್ಸವವನ್ನು ಅದ್ದೂರಿಯಾಗಿ ಆಚರಿಸಿ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಬೇಕೆಂದರು.
ಈ ವೇಳೆ ಪಟ್ಟಣದ ಸೇರಿದಂತೆ ತಾಲೂಕಿನ ಎಲ್ಲ ಸಾರ್ವಜನಿಕ ಗಣೇಶ ಉತ್ಸವ ಮಂಡಳಿ ಮುಖ್ಯಸ್ಥರು ಇದ್ದರು.