ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಿ: ಪಿಎಸ್ಐ ದೀಪಾ
ಇಂಡಿ 04: ಇಂಡಿ ತಾಲೂಕಿನ ತಡವಲಗಾ, ಗಣವಲಗಾ, ಬೋಳೆಗಾಂವ ಗ್ರಾಮಗಳಲ್ಲಿ ಈ ಬಾರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಅಂಗವಾಗಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಿರುವ ಆಯೋಜಕರು ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶಾಂತಿ ಸಭೆಯನ್ನು ಹೋರ್ತಿ ಪೋಲಿಸ್ ಠಾಣೆ ಪಿಎಸ್ಐ ದೀಪಾ ಗೋಡೆಕಾರ ಅವರ ನೇತೃತ್ವದಲ್ಲಿ ತಡವಲಗಾ ಗ್ರಾಮದ ಬಲಭೀಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯನ್ನುಉದ್ದೇಶಿಸಿ ಮಾತನಾಡಿದ ಹೋರ್ತಿ ಪೋಲಿಸ್ ಠಾಣೆ ಪಿಎಸ್ಐ ದೀಪಾ ಗೋಡೆಕಾರ ಅವರು ಈ ಬಾರಿ ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು. ಆಯೋಜಕರು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಪರಿಸರ ಸ್ನೇಹಿ ವಿಗ್ರಹಗಳನ್ನು ಪ್ರತಿಪ್ಠಾಪಿಸಲು, ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು. ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು, ಪೆಂಡಾಲ್ ಸುರಕ್ಷತೆ ಮತ್ತು ಸಿಸಿ ಟಿವಿ ಕ್ಯಾಮರ ಅಳವಡಿಕೆ, ಏಕಗವಾಕ್ಷಿ ವ್ಯವಸ್ಥೆ ಹಾಗೂ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಸೂಚನೆಗಳನ್ನು ನೀಡಿದರು. ಏನಾದರೂ ತೊಂದರೆ ಆದರೆ ತಮ್ಮ ತಮ್ಮ ಗ್ರಾಮಗಳ ಬಿಟ್ ಪೋಲಿಸ್ರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ, ತಮ್ಮ ಸಮಸ್ಯೆ ಬಗೆ ಹರಿಯದಿದ್ದರೆ ನನ್ನನು ಸಂಪರ್ಕಿಸಿ ಎಂದು ಹೇಳಿದರು. ಹೋರ್ತಿ ಪೋಲಿಸ್ ಠಾಣೆಗೆ ನಿಯೋಜಿಗೊಂಡ ನಂತರ ್ರ್ರಥಮವಾಗಿ ತಡವಲಗಾ ಗ್ರಾಮಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ವಾಲಿಕಾರ ಅವರು ಕಖಋ ದೀಪಾ ಗೋಡೆಕಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಡವಲಗಾ ಗ್ರಾಮದ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.ನಾಗಪ್ಪ ಮಕಣಿ, ಗಾಲಿಬಸಾಬ ಧಡೇದ, ಅಶೋಕ ಮಿರ್ಜಿ, ಮರುಳಸಿದ್ದಪ್ಪ ಬ್ಯಾಳಿ, ಸದಾಶಿವ ಬಗಲಿ ಹಾಗೂ ಪೋಲಿಸ್ರಾದ ಎಸ್ ಬಿ ಬಿರಾದಾರ, ದಶರಥ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.