ಇಂಡಿ

ಅಭ್ಯರ್ಥಿ ಪೂಜಾರ ಗೆಲವು ಖಚಿತ: ಬಿರಾದಾರ

ಅಭ್ಯರ್ಥಿ ಪೂಜಾರ ಗೆಲವು ಖಚಿತ: ಬಿರಾದಾರ

ಇಂಡಿ: ಬಿಜೆಪಿ ಪಕ್ಷದಿಂದ ವಿಜಯಪೂರ, ಬಾಗಲಕೋಟ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿರುವ ಅಭ್ಯರ್ಥಿ ಪಿ.ಎಚ್‌. ಪೂಜಾರ ಸುಮಾರು ಮೂರು ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಭಾಜಪ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. 

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಕೂಡಾ ಕಂಡು ಬಂದಿದೆ. ಇಂತಹ ಪಕ್ಷಕ್ಕೆ ತಕ್ಕ ಪಾಠಕಲಿಸುವುದಾಗಿ ಸ್ಥಳೀಯ ಆಡಳಿತ ಚುನಾಯಿತ ಪ್ರತಿನಿಧಿಗಳು ಮಾತನಾಡುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಬದ್ದತೆಯಿಂದ ಕೆಲಸ ಮಾಡಿರುವದಿಂದ ಪಿ.ಎಚ್‌. ಪೂಜಾರಿಯವರನ್ನು ವರಿಷ್ಠರು ಗುರುತಿಸಿ ಟಿಕೇಟ ನೀಡಿದ್ದಾರೆ ಅವರ ಗೆಲುವು ಶತಸಿಧ್ಧವಾಗಿದೆ ಎಂದರು. 


ಸುದ್ದಿ ಓದಿ