ಇಂಡಿ

ಅಭ್ಯರ್ಥಿ ಪಿ.ಎಚ್‌. ಪೂಜಾರ ಗೆಲವು ಖಚಿತ: ಪಟ್ಟಣಶೆಟ್ಟಿ

ಅಭ್ಯರ್ಥಿ ಪಿ.ಎಚ್‌. ಪೂಜಾರ ಗೆಲವು ಖಚಿತ: ಪಟ್ಟಣಶೆಟ್ಟಿ

ಇಂಡಿ: ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿರುವ ಅಭ್ಯರ್ಥಿ ಪಿ.ಎಚ್‌. ಪೂಜಾರ ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು. 

ಅವರು ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.  

ಅವಳಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಸದಸ್ಯರನ್ನು ಈಗಾಗಲೆ ಭೇಟಿ ಮಾಡಲಾಗಿದ್ದು ಬಿಜೆಪಿ ಬೆಂಬಲಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 

ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಕೂಡಾ ಕಂಡು ಬಂದಿದೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗಿನಂತಾಗಿದೆ ಇಂತಹ ಪಕ್ಷಕ್ಕೆ ತಕ್ಕ ಪಾಠಕಲಿಸುವುದಾಗಿ ಸ್ಥಳೀಯ ಆಡಳಿತ ಚುನಾಯಿತ ಪ್ರತಿನಿಧಿಗಳು ಮಾತನಾಡುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಬದ್ದತೆಯಿಂದ ಕೆಲಸ ಮಾಡಿರುವದಿಂದ ಪಿ.ಎಚ್‌. ಪೂಜಾರಿಯವರನ್ನು ವರಿಷ್ಠರು ಗುರುತಿಸಿ ಟಿಕೇಟ ನೀಡಿದ್ದಾರೆ. ಎರಡು ಬಾರಿ ಪೂಜಾರ ಅವರು ಶಾಸಕರಾಗಿ ಕಾರ್ಯ ಮಾಡಿದ್ದರು. ನಂತರ ಅವರಿಗೆ ಪಕ್ಷ ಟಕೆಟ್ ನೀಡಲಿಲ್ಲವಾದರೂ ಪೂಜಾರ್ ಅವರು ಪಕ್ಷ ಬಿಡಲಿಲ್ಲ. ಅವರ ಪ್ರಾಮಾಣಿಕತೆ ಮೆಚ್ಚಿ ಪಕ್ಷ ಮತ್ತೆ ಅವರಿಗೆ ಈ ಬಾರಿ ವಿಧಾನಪರಿಷತ್ ಟಿಕೆಟ್ ನೀಡಿದೆ. ಅವರ ಗೆಲುವು ಶತಸಿದ್ಧವಾಗಿದೆ ಎಂದರು.

ಸುದ್ದಿ ಓದಿ