ರಾಣೆಬೆನ್ನೂರ

ಚನ್ನೇಶ್ವರ ಮಠದಲ್ಲಿ ಬುದ್ಧ ಪೂರ್ಣಿಮೆ ; ಮನುಷ್ಯನ ಬದುಕು ಭದ್ರತೆಗೆ ಧರ್ಮಾಚರಣೆ ಅವಶ್ಯ : ಡಾ.ಚನ್ನಮಲ್ಲಿಕಾರ್ಜುನ ಶ್ರೀಗಳು

ಚನ್ನೇಶ್ವರ ಮಠದಲ್ಲಿ ಬುದ್ಧ ಪೂರ್ಣಿಮೆ ; ಮನುಷ್ಯನ ಬದುಕು ಭದ್ರತೆಗೆ ಧರ್ಮಾಚರಣೆ ಅವಶ್ಯ : ಡಾ.ಚನ್ನಮಲ್ಲಿಕಾರ್ಜುನ ಶ್ರೀಗಳು

ಲೋಕದರ್ಶನ ವರದಿ 

ರಾಣೆಬೆನ್ನೂರು 06: ಭರತ ಭೂಮಿಯಲ್ಲಿ  ಮಾನವ ಜೀವಿಯಾಗಿ ಬಂದಿರುವ ಪ್ರತಿಯೊಬ್ಬರು ಧರ್ಮದ ಆಚರಣೆ ಮತ್ತು ಅನುಸರಣೆಯಲ್ಲಿ ಬದುಕಿದಾಗ ಮಾತ್ರ ಜೀವನ ಸಾರ್ಥಕತೆ ಹೊಂದಲು ಸಾಧ್ಯವಾಗುವುದು ಎಂದು ಹೊನ್ನಾಳಿ ಹಿರೇಕಲ್ ಮಠದ ಡಾ :  ಒಡೇಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. 

    ಅವರು ಶುಕ್ರವಾರ ಸಂಜೆ ಮೃತ್ಯುಂಜಯ ನಗರದ ಶ್ರೀ ಚನ್ನೇಶ್ವರ ಮಠದ ಸಭಾಭವನದಲ್ಲಿ ನಡೆದ ವಾರ್ಷಿಕ ಸಂಪ್ರದಾಯದ ಬುದ್ಧ ಪೂರ್ಣಿಮೆ, ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಬುದ್ಧ ಪೂರ್ಣಿಮೇಯು  ಕನ್ನಡ ನಾಡಿನಲ್ಲಿ ಆಗಿ ಹುಣ್ಣಿಮೆ ಎನ್ನುವ ನಾಮೆಯಲ್ಲಿ  ಅತ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಬುದ್ಧ ಪೂರ್ಣಿಮೆ ಕುರಿತು ವಿಶ್ಲೇಷಣೆ ನೀಡಿದ ಶ್ರೀಗಳು ಹಬ್ಬ, ಹರಿದಿನಗಳು, ಜಾತ್ರೆ ಉತ್ಸವಗಳು ಆಚರಿಸುವುದರಿಂದ ಮಾನವನ ವಿಕಾಸತೆಗೆ ಇವೆಲ್ಲವುಗಳು ಅತ್ಯಂತ ಸಹಕಾರಿಯಾಗಿದೆ ಎಂದರು.    

    " ನಮ್ಮ ಚಿತ್ತ- ಗುರುಭಕ್ತಿ " ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಡಾ.ಬಿ. ಆರ್‌. ಅಂಬೇಡ್ಕರ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕ ಎಸ್ ಆರ್ ತೇವರಿ ಅವರು ಇಂದಿನ  ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪ್ರಜ್ಞಾವಂತರಾಗಿ ಗುರುತಿಸಿಕೊಳ್ಳಬೇಕಾದರೆ ಧರ್ಮದ ಹಾದಿಯಲ್ಲಿ ಸಾಗಬೇಕು. ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಅಂದಾಗ ಮಾತ್ರ ಉತ್ತಮ ಸಂಸ್ಕಾರ ಹೊಂದಲು ಸಾಧ್ಯವಾಗುವುದು ಎಂದರು.  

    ಕಾರ್ಯಕ್ರಮ ಉದ್ಘಾಟಿಸಿದ  ಲಲಿತಾ ಅಜ್ಜಪ್ಪ ಹಾದಿಮನಿ ಕುಟುಂಬದವರು ಪ್ರಸಾದ ಸೇವೆ ನೀಡಿದರು. ಇದೇ ಸಂದರ್ಭದಲ್ಲಿ ಸೇವಾಕರ್ತರನ್ನು ಶಿವಾಚಾರ್ಯರು ಗುರು ರಕ್ಷೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಶಿಕ್ಷಕ ಅಮೃತ ಗೌಡ ಪಾಟೀಲ್, ಬಿ.ಎಂ. ಕರ್ಜಗಿ, ಚನ್ನವೀರ ಗೌಡ ಪಾಟೀಲ್, ಸುನಂದಮ್ಮ ತಿಳುವಳ್ಳಿ, ಗಾಯಿತ್ರಮ್ಮ ಕುರುವತ್ತಿ, ಭಾಗ್ಯಶ್ರೀ ಗುಂಡಗಟ್ಟಿ, ಹಾಲಸಿದ್ದಯ್ಯ ಶಾಸ್ತ್ರಿ ದಾನೇಶ್ವರಿ ಅಕ್ಕನ ಬಳಗದ ಸದಸ್ಯರು  ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಲಾವಿದೆ ರಜನಿ ಕರಿಗಾರ್ ಸಂಗಡಿಗರು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ  ವಿ.ವ್ಹಿ.ಹರಪನಹಳ್ಳಿ ಸ್ವಾಗತಿಸಿ, ಶಿಕ್ಷಕ ಜಗದೀಶ್ ಮಳೇಮಠ  ನಿರೂಪಿಸಿ, ಕಸ್ತೂರಮ್ಮ ಪಾಟೀಲ್ ವಂದಿಸಿದರು. 


ಸುದ್ದಿ ಓದಿ