ಅಂತರರಾಷ್ಟ್ರೀಯ

ಬಾಕ್ಸಿಂಗ್ ಡೇ ಟೆಸ್ಟ್: ಮೊದಲ ದಿನದಾಟ ಅಂತ್ಯಕ್ಕೆ ಭಾರತ 215/2

ಬಾಕ್ಸಿಂಗ್ ಡೇ ಟೆಸ್ಟ್: ಮೊದಲ ದಿನದಾಟ ಅಂತ್ಯಕ್ಕೆ ಭಾರತ 215/2

ಮೆಲ್ಬೋನರ್್, ಡಿ.26-  ಕನ್ನಡಿಗ  ಮಯಾಂಕ್ ಅಗರ್ವಾಲ್ ಹಾಗೂ  ಟೀಂ ಇಂಡಿಯಾದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಅರ್ಧಶತಕಗಳ  ನೆರವಿನಿಂದ ಬಾಕ್ಸಿಂಗ್ ಟೆಸ್ಟ್ನ  ಮೊದಲ ದಿನದ ಅಂತ್ಯಕ್ಕೆ  ಕೊಹ್ಲಿ ಪಡೆ  2 ವಿಕೆಟ್ಗಳನ್ನು ಕಳೆದುಕೊಂಡು  215 ರನ್ಗಳನ್ನು ಗಳಿಸಿದೆ.

 ಪತರ್್ ಟೆಸ್ಟ್ನಲ್ಲಿ ಹೀನಾಯ  ಸೋಲು ಕಂಡಿದ್ದ ಭಾರತ ತಂಡ ಇಂದು  ಹೊಸ ಹುರುಪಿನೊಂದಿಗೆ  ಮೈದಾನಕ್ಕಿಳಿದಿತ್ತಾದರೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್  ಮಾಡಿದ ಭಾರತ ತಂಡಕ್ಕೆ  ಮೆಲ್ಬೋನರ್್ನಲ್ಲೂ ಆರಂಭಿಕ ಆಘಾತ  ಕಾಡಿತು.

  ಕೆ.ಎಲ್.ರಾಹುಲ್  ಹಾಗೂ   ಮುರಳಿ ವಿಜಯ್ರ  ಅನುಪಸ್ಥಿತಿಯಲ್ಲಿ  ಆರಂಭಿಕ ಆಟಗಾರನಾಗಿ ಕಣಕ್ಕಿಳಿದ  ಹನುಮ  ವಿಹಾರಿ ತಾಳ್ಮೆಯುತ ಆಟಕ್ಕೆ ಮುಂದಾದರೂ 8 ರನ್ ಗಳಿಸಿದ್ದಾಗ  ಕುಮ್ಮಿನ್ಸ್ರ ಎಸೆತದಲ್ಲಿ  ಆರೋನ್ಫಿಂಚ್ ಗೆ ಕ್ಯಾಚ್ ನೀಡಿದಾಗ  ಭಾರತ ತಂಡದ  ಮೊತ್ತ 40 ರನ್ಗಳಾಗಿತ್ತು.

  ಮಯಾಂಕ್  ಅದ್ಭುತ ಬ್ಯಾಟಿಂಗ್:

 ಕನ್ನಡಿಗ  ಮಯಾಂಕ್ ಅಗರ್ವಾಲ್  ಪಾದಾರ್ಪಣೆ ಮಾಡಿದ ಮೊದಲ  ಪಂದ್ಯದಲ್ಲೇ ಆಸೀಸ್ನ ವೇಗದ ಬೌಲಿಂಗ್ ಅನ್ನು ದಿಟ್ಟವಾಗಿ ಎದುರಿಸಿ ಬೌಂಡರಿಗಳ ಸುರಿಮಳೆಗೈಯ್ಯುವ ಮೂಲಕ ಚೊಚ್ಚಲ  ಅರ್ಧಶತಕ ಗಳಿಸಿದರು.

 ಮೊದಲ ವಿಕೆಟ್ಗೆ  40 ರನ್ಗಳ ಜೊತೆಯಾಟ ಆಡಿದ ಮಯಾಂಕ್, ದ್ವಿತೀಯ ವಿಕೆಟ್ನಲ್ಲೂ  ಚೇತೇಶ್ವರಪೂಜಾರೊಡಗೂಡಿ ಆಸೀಸ್ ಬೌಲರ್ಗಳನ್ನು ದಂಡಿಸಿದರು. ಟೀ ವಿರಾಮಕ್ಕೂ ಮುನ್ನವೇ ತಂಡದ ಮೊತ್ತವನ್ನು  100 ರ ಗಡಿ ದಾಟಿಸಿದರು.

 ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸುವ ಆಸೆ ಹೊಂದಿದ್ದ  ಮಯಾಂಕ್ (76 ರನ್, 8 ಬೌಂಡರಿ, 1 ಸಿಕ್ಸರ್) 55ನೇ  ಓವರ್ನ  ಕೊನೆಯ ಎಸೆತದಲ್ಲಿ ವೇಗಿ ಪ್ಯಾಟ್ ಕುಮ್ಮಿನ್ಸ್ ಬೌಲಿಂಗ್ನಲ್ಲಿ ಭಾರಿ ಹೊಡೆತಕ್ಕೆ  ಕೈ ಹಾಕಿ ವಿಕೆಟ್ ಕೀಪರ್ ಪೇನ್ಗೆ  ಕ್ಯಾಚ್ ನೀಡಿ ನಿರಾಸೆ ಮೂಡಿಸಿದರೂ 2ನೆ ವಿಕೆಟ್ಗೆ ಉಪಯುಕ್ತ  83  ರನ್ಗಳ ಜೊತೆಯಾಟವಾಡಿದರು.

ಮಯಾಂಕ್  ಔಟಾಗುತ್ತಿದ್ದಂತೆ ಕ್ರೀಸ್ಗಿಳಿದ  ನಾಯಕ ವಿರಾಟ್ ಕೊಹ್ಲಿ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ  ಮುಂದಾದರೂ ಕೂಡ ದಿನದ ಅಂತಿಮ ಅವಧಿಯಲ್ಲಿ  ತಾಳ್ಮೆಯುತ ಆಟಕ್ಕೆ ಶರಣಾದರು.

  ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು 2 ವಿಕೆಟ್ಗಳನ್ನು ಕಳೆದುಕೊಂಡು 215 ರನ್ಗಳನ್ನು ಗಳಿಸಿದ್ದು ನಾಯಕ ವಿರಾಟ್ ಕೊಹ್ಲಿ (47 ರನ್, 6 ಬೌಂಡರಿ) ಹಾಗೂ ಚೇತೇಶ್ವರ ಪೂಜಾರ (68 ರನ್, 6 ಬೌಂಡರಿ) ಗಳಿಸಿ ನಾಳೆಯ ಆಟದಲ್ಲಿ ಬೃಹತ್ ಇನ್ನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದ್ದಾರೆ.

ಆಸ್ಟ್ರೇಲಿಯಾ ಪರ ಪ್ಯಾಟ್  ಕುಮ್ಮಿನ್ಸ್ 2 ವಿಕೆಟ್ ಕಬಳಿಸಿ ದಿನದ ಯಶಸ್ವಿ ಬೌಲರ್ ಎನಿಸಿಕೊಂಡರು.


ಸುದ್ದಿ ಓದಿ