ಬೈಲಹೊಂಗಲ

ಪುಸ್ತಕಗಳು ಜನರ ನಿಜವಾದ ಸಂಪತ್ತು: ಹೂಲಿ

ಪುಸ್ತಕಗಳು ಜನರ ನಿಜವಾದ ಸಂಪತ್ತು: ಹೂಲಿ

ಬೈಲಹೊಂಗಲ 23: ಪುಸ್ತಕಗಳು ಜನರ ನಿಜವಾದ ಸಂಪತ್ತು. ದೇಶ ಸುತ್ತು ಕೋಶ ಓದು ಎಂಬಂತೆ ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ ಎಂದು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪಿ. ಬಿ. ಹೂಲಿ ಹೇಳಿದರು. 

ಇಲ್ಲಿನ ಕೆಆರ್‌ಸಿಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗೂಗಲ್ ಮೀಟ್ ಮೂಲಕ ಆನ್‌ಲೈನ್‌ದಲ್ಲಿ ಆಚರಿಸಲಾದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಮುಖ್ಯ ಅತಿಥಿ ಸ್ಥಾನ ವಹಿಸಿದ್ದ  ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬಿ.ಎನ್‌. ಮುದೆಣ್ಣವರ ಪುಸ್ತಕಗಳು ಜನರ ನಿಜವಾದ ಆಪ್ತಮಿತ್ರ, ಯುವ ಜನತೆ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿ ಜೊತೆಗೆ ಕೆಲವು ಉತ್ತಮ ಪುಸ್ತಕಗಳ ಪಟ್ಟಿಯನ್ನು ನೀಡಿದರು. 

ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ನ ವಿದ್ಯಾರ್ಥಿಗಳು ಭಾಗ ವಹಿಸಿದ್ದರು. ವಿಜಯಕುಮಾರ ಕಿತ್ತೂರಮಠ, ಸುರಯ್ಯಶೇಖ್, ಪೂರ್ಣಿಮಾ ಕಲಹಾಳ, ಮೇಘನಾ ಮನಕೀಕರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  

ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಸ್‌. ಬಿ. ಕರಡಿಗುದ್ದಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಎನ್‌. ಡಿ. ಚಿನ್ನಪ್ಪಗೌಡರ ವಂದಿಸಿದರು. ಪಿ. ಎಮ್‌. ಅಯಾಚಿತ ಸ್ವಾಗತಿಸಿ, ನಿರೂಪಿಸಿದರು. 


ಸುದ್ದಿ ಓದಿ