ಉರುಸ್ ಕಾರ್ಯಕ್ರಮ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ರಾಣೆಬೆನ್ನೂರ 28: ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಶಿಕ್ಷಣ ಪ್ರೇಮಿ ಹಾಗೂ ಹಜರತ್ ಸೈಯದ್ ಸಾದಾತ ಶಾ:ವಲಿ ಕಮಿಟಿ ಕಾರ್ಯದರ್ಶಿ ನಸರುಲ್ಲಾ ಮುಲ್ಲಾ ಹೇಳಿದರು ನಗರದ ಹಲಗೇರಿ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದಾತ ಶಾ:ವಲಿ ಅವರ ಉರುಸ್ ಕಾರ್ಯಕ್ರಮದ ಅಂಗವಾಗಿ ಹಜರತ್ ಸೈಯದ್ ಸಾದಾತ ಶಾ:ವಲಿ ಕಮಿಟಿ (ರಿ), ಹಾಗೂ ರಾಣೇಬೆನ್ನೂರು ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ನಗರಸಭೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು .
ಯುವಕರು ಮೊದಲ ಭಾರಿಗೆ ರಕ್ತದಾನ ಮಾಡಿ ಸಂತೋಷ ಪಟ್ಟರು.. ಉತ್ತರ ಪ್ರದೇಶದ ರಾಮ ಬಯಾ ಅವರು ರಕ್ತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದು ಮಾದರಿಯಾದರು. ಕಮಿಟಿಯ ಅಧ್ಯಕ್ಷ ಅಲ್ಲಾ ಅಲ್ಲಾಭಕ್ಷ ನೀಲಗಾರ್ ಬಸೀರ ಅಹ್ಮದ್ ಕರ್ಜಿಗಿ, ಅತಾವುಲ್ಲಾ ಡೊಗ್ಗಳ್ಳಿ, ಹಜರಲಿ ಶಿಡೇನೂರ, ಬ್ಲಡ್ ಬ್ಯಾಂಕಿನ , ವಿಶ್ವನಾಥ್ ದಾಸರ ಸೈಯದ್ ರೋಷನ, ಸಂತೋಷ ನೆಲ್ಲಿಕೊಪ್ಪ ರಂಜಿತ ಅಹ್ಮದ್, ರೆಡ್ಡಿ, ಸೈಯದ್ ಸಾದಾತ ಶಾ:ವಲಿ ದರ್ಗಾ ಕಮಿಟಿಯ ಸದಸ್ಯರುಗಳು, ಬ್ಲಡ್ ಬ್ಯಾಂಕಿನ ಸಿಬ್ಬಂದಿ ಮತ್ತಿತರರು ಇದ್ದರು