ಬೈಲಹೊಂಗಲ

ಚಕ್ಕಡಿಗೆ ಬೈಕ್ ಡಿಕ್ಕಿ, ಸವಾರ ಸಾವು

ಚಕ್ಕಡಿಗೆ ಬೈಕ್ ಡಿಕ್ಕಿ, ಸವಾರ ಸಾವು

ಬೈಲಹೊಂಗಲ 22: ದ್ವೀಚಕ್ರ ವಾಹನವೊಂದು ಚಕ್ಕಡಿ ಗಾಡಿಗೆ ಡಿಕ್ಕಿಯಾದ ಪರಿಣಾಮ ಬೈಕ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ಸಮೀಪದ ಬೆಳಗಾವಿ- ಬಾಗಲಕೋಟ ರಾಜ್ಯ ಹೆದ್ದಾರಿಯ ಬೂದಿಗೊಪ್ಪ ಕ್ರಾಸ ಬಳಿ ಮಂಗಳವಾರ ಸಂಭವಿಸಿದೆ. 

   ಬೈಲಹೊಂಗಲ ಪಟ್ಟಣದ  ಬಸವೇಶ್ವರ ಆಶ್ರಯ ಕಾಲೋನಿ ನಿವಾಸಿ ಅಯುಬ  ಅಬ್ದುಲಮುನಾಪ ತಿಗಡಿ (42) ಮೃತ ದುರ್ದೈವಿ.  ಈತನು ಚೋಳ ಮಂಡಲ ಪೈನಾನ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೆಲಸದ ನಿಮಿತ್ತ ಬೈಲಹೊಂಗಲದಿಂದ ಯರಗಟ್ಟಿಗೆ ತನ್ನ ಬೈಕನಲ್ಲಿ ಹೋಗುವಾಗ ಬೂದಿಗೋಪ್ಪ ಕ್ರಾಸ ಹತ್ತಿರ ಚಕ್ಕಡಿಗಾಡಿ ಅಡ್ಡ ಬಂದದ್ದರಿಂದ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಒಂದು ಎತ್ತಿಗೂ ಗಾಯಗಳಾಗಿವೆ.  

  ಘಟನಾ ಸ್ಥಳಕ್ಕೆ ಸಿಪಿಐ ಮೌನೇಶ್ವರ ಮಾಳಿ ಪಾಟೀಲ, ಸಿಬ್ಬಂದಿ  ಸ್ಥಳಕ್ಕೆ ಭೇಟಿ ಪರೀಶೀಲನೆ ನಡೆಸಿದ್ದಾರೆ.  ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ