ರಾಣೆಬೆನ್ನೂರ

ಭಗವಂತನ ಸಾಕ್ಷಾತ್ಕಾರಕ್ಕೆ ಭಜನೆ ಸಹಕಾರಿ: ಪ್ರಶಾಂತ್

ಭಗವಂತನ ಸಾಕ್ಷಾತ್ಕಾರಕ್ಕೆ ಭಜನೆ ಸಹಕಾರಿ: ಪ್ರಶಾಂತ್

ರಾಣೇಬೆನ್ನೂರು 06:  ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ವೇದ ಇತಿಹಾಸ ಕಾಲಗಳಿಂದಲೂ ಭಕ್ತಿ, ಭಾವ ಮತ್ತು. ಮನಃಶಾಂತಿ ಪಡೆಯಲು ಭಜನೆ ಬಹು  ಸಹಕಾರಿಯಾಗಿದೆ ಎಂದು ಪತ್ರಿಕೋದ್ಯಮಿ ಪ್ರಶಾಂತ ರಿಪ್ಪನ್ ಪೇಟೆ ಹೇಳಿದರು.    ಅವರು ತಾಲೂಕಿನ ಸ್ಪಟಿಕ ಲಿಂಗದ ಖ್ಯಾತಿಯ ಶ್ರೀ ಕ್ಷೇತ್ರ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವ, ರಥೋತ್ಸವದ ನಿಮಿತ್ತ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮಾನವನ ಜೀವನ ಕಲುಷಿತವಾಗುತ್ತಲಿದೆ ಇಂತಹ ಸಂದರ್ಭದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕೆ ಭಜನೆ ಬಹು ಮುಖ್ಯ ಪಾತ್ರ ವಹಿಸುತ್ತಲಿದೆ ಎಂದರು.         ಭಾರತೀಯ ಸಂಸ್ಕೃತಿಯಲ್ಲಿ ಕಲೆ ಮತ್ತು ಕಲಾವಿದರಿಗೆ ಸದಾಕಾಲ ಗೌರವ ಮಾನ ಸನ್ಮಾನಗಳು ಇದ್ದೇ ಇದೆ. ಇತಿಹಾಸದಲ್ಲಿ ರಾಜಶ್ರಯ  ಪಡೆದಿದ್ದ ಕಲಾವಿದರು, ಇಂದು ಸರಕಾರ  ಮತ್ತು ಜನಾಶ್ರಯದಲ್ಲಿ ಬದುಕು ಸಾಗಿಸುವಂತಾಗಿದೆ ಎಂದ ಅವರು, ಪಾಚ್ಚಿ ಮಾತ್ಯೆ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ನಿಜ ಸಂಸ್ಕೃತಿ ಮರೆಯಾಗುತ್ತಿರುವುದು ವಿಷಾಧಕರ ಸಂಗತಿಯಾಗಿದೆ ಎಂದರು.      

ದಿವ್ಯ ಸಾನಿಧ್ಯ ವಹಿಸಿದ್ದ, ಕ್ಷೇತ್ರ ಲಿಂಗದಹಳ್ಳಿ ಮಠದ ವೀರಭದ್ರ ಶಿವಾಚಾರ್ಯರು, ಮಾತನಾಡಿ ಪ್ರತಿಯೊಬ್ಬ ಮಾನವರು ಧರ್ಮದ ಹಾದಿಯಲ್ಲಿ ಸಾಗಿ, ಧರ್ಮವಂತರಾಗಿ ಬದುಕಿ, ಬಾಳಿ ಜೀವನ ಸಾಗಿಸಿ, ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಲು ಮುಂದಾಗಬೇಕು ಅದುವೇ ನಿಜವಾದ ಮಾನವ ಧರ್ಮವಾಗಿದೆ. ಸ್ಪಟಿಕಲಿಂಗು ದರ್ಶನದಿಂದ ಸದಾಕಾಲ ಶಾಂತಿ, ನೆಮ್ಮದಿ ಜೀವನ ಸಾಗಿಸಲು, ಕ್ಷೇತ್ರ ದರ್ಶನ ಬಹುಮುಖ್ಯವಾಗಿದೆ ಎಂದರು.       

ಭಾರತೀಯ ಕಲೆ ಸುಮ್ಮನೆ ಒಲಿಯುವುದಿಲ್ಲ, ಮೊದಲು ಆಸ್ವಾದಿಸಿ, ಆರಾಧಿಸಿ ಸತತ ಅಧ್ಯಯನ ಮಾಡಬೇಕು ಅಂದಾಗ ಮಾತ್ರ ಸಂಗೀತ ಸರಸ್ವತಿ ಒಲಿಯಲು ಸಾಧ್ಯ. ವಿನಯ, ವಿನಮ್ರತೆ ಸಂಗೀತ ಸೇವೆಯಲ್ಲಿ ಅಳವಡಿಸಿಕೊಂಡರೆ ಮಾತ್ರ, ಕಲೆಯ ಯಾವುದೇ ಪ್ರಕಾರದಲ್ಲಿ ಯಶಸ್ವಿಗಳಿಸಲು ಸಾಧ್ಯವಾಗುವುದು ಎಂದರು. ನಾಟಕ ಮತ್ತು ಸಂಗೀತ ನಿರ್ದೇಶಕ ಗುಡ್ಡ ರಾಜ ಹಲಗೇರಿ, ಅಭಿರುಚಿ ಜನಪದ ಕಲಾ ತರಬೇತಿ ಸಂಸ್ಥೆಯ,ಕಾರ್ಯದರ್ಶಿ, ಕೆ.ಎಸ್‌. ನಾಗರಾಜ್, ಮತ್ತಿತರ ಗಣ್ಯರು ಮಾತನಾಡಿದರು.        

ವೇದಿಕೆಯಲ್ಲಿ ಮುಖಂಡರಾದ ಬಸವರಾಜಪ್ಪ ಬಣಕಾರ್, ಶಂಕರಗೌಡ ಪಾಟೀಲ, ಕೊಟ್ರೇಶಪ್ಪ ಬಣಕಾರ್, ಶೇಖರಗೌಡ ಎಡಚಿ, ಭರಮಣ್ಣ ಬಣಕಾರ್, ವೀರನಗೌಡ ಯಡಚಿ, ಮಲ್ಲಿಕಾರ್ಜುನ ಇಂಗಳಗೊಂದಿ, ಮೊದಲಾದವರು ಉಪಸ್ಥಿತರಿದ್ದರು. ಮುಂಜಾನೆಯಿಂದ ಸಂಜೆಯವರೆಗೂ ನಡೆದ  ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಾಡಿನ 50 ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಂಡು, ಸ್ಪರ್ಧಾತ್ಮಕವಾಗಿ ನಮ್ಮಲ್ಲಿರುವ ಕಲಾ ಪರಂಪರೆ ಮೆರೆದು, ಧನ್ಯತೆ ಪಡೆದರು. ಸಮಾರೋಪದಲ್ಲಿ ಮೊತ್ತ ಪ್ರಮಾಣ ಪತ್ರ, ವಿತರಿಸಿ,ಅಭಿನಂದಿಸಿ ಗೌರವಿಸಲಾಯಿತು. 


ಸುದ್ದಿ ಓದಿ