ಬಾಳೇಕುಂದರಗಿ ಸಹಕಾರ ಪೆನಲ್ ಗೆಲ್ಲಿಸುವಂತೆ ಬಸವರಾಜ ಬಾಳೇಕುಂದರಗಿ ಮನವಿ
ಲೋಕದರ್ಶನ ವರದಿ
ಬೈಲಹೊಂಗಲ 01: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಯ ಧ್ಯೇಯೋದ್ದೇಶ ಹೊಂದಿರುವ ಬಾಳೇಕುಂದರಗಿ ಸಹಕಾರ ಪೆನಲ್ ಗೆಲ್ಲಿಸುವಂತೆ ಕಾರ್ಖಾನೆಯ ಮಾಜಿ ಅಧ್ಯಕ್ಷ, ಸಹಕಾರ ಪೆನಲ್ ಮುಖಂಡ ಬಸವರಾಜ ಬಾಳೇಕುಂದರಗಿ ರೈತ ಸದಸ್ಯರಿಗೆ ಮನವಿ ಮಾಡಿದರು.
ಅವರು ಸೊಮೇಶ್ವರ ಕಾರ್ಖಾನೆಯಲ್ಲಿ ತಮ್ಮ ಪೆನೆಲದೊಂದಿಗೆ ನಾಮಪತ್ರ ಸಲ್ಲಿಸಿ ಮಾತನಾಡಿ, ಸೆ.10 ರಂದು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಆಯ್ಕೆಗಾಗಿ ನಡೆಯಲಿರುವ ಚುನಾವಣೆಗೆ ನಾನು ಬಾಳೇಕುಂದರಗಿ ಸಹಕಾರ ಪೆನಲ್ ಮಾಡಿದ್ದು ಸದರಿ ಪೆನಲ್ನ ಅಭ್ಯರ್ಥಿಗಳೊಂದಿಗೆ ನಾನು ಸ್ಪರ್ಧಿಸುತ್ತಿದ್ದೇನೆ. ನಮ್ಮ ತಂದೆ ದಿ.ಆರ್.ಸಿ.ಬಾಳೇಕುಂದರಗಿ ಅವರು ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಕಷ್ಟಗಳನ್ನು ಎದುರಿಸಿ ಹಗಲಿರುಳು ಎನ್ನದೇ ದುಡಿದು ಕಾರ್ಖಾನೆಯನ್ನು ಹುಟ್ಟು ಹಾಕಿದ್ದಾರೆ. ಅವರ ಅಕಾಲಿಕ ಮರಣದಿಂದಾಗಿ ಸೆ.2001 ರಲ್ಲಿ ಕಾರ್ಖಾನೆ ಅಧ್ಯಕ್ಷನಾಗಿ ಅವರ ಆಸೆಯಂತೆ ಅರ್ಧಕ್ಕೆ ನಿಂತ ಕಾರ್ಖಾನೆಯ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಿದ್ದೇನೆ. ಈ ಕಾರ್ಯಕ್ಕೆ ಬೇಕಾಗಿದ್ದ ಹಣಕಾಸಿನ 30 ಕೋಟಿ ರೂ.ಸಾಲ ಮತ್ತು ಕರೆ ಠೇವಣಿ ವ್ಯವಸ್ಥೆಯನ್ನು ಎಲ್ಲರ ಸಹಕಾರದೊಂದಿಗೆ ಮಾಡಿ, ಕಾರ್ಖಾನೆಯ ಸ್ಥಾಪನಾ ಕಾರ್ಯಗಳನ್ನು ಮುಗಿಸಿ, ಸನ್ 2006-07 ರಿಂದ ನಿರಂತರವಾಗಿ ಕಬ್ಬು ಅರೆಯುವ ಹಂಗಾಮುಗಳನ್ನು ತೂಕದಲ್ಲಿ ಪಾರದರ್ಶಕವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಸ್ವತಂತ್ರ ಬಂದಾಗಿನಿಂದಲೂ ಈ ಭಾಗದಲ್ಲಿ ಯಾವುದೇ ರಾಜಕೀಯ ಧುರೀಣರು ಮಾಡದೇ ಇರುವಂತಹ ಕೆಲಸವನ್ನು ನಮ್ಮ ತಂದೆಯವರು ಮಾಡಿರುವದರಿಂದ ಸಾವಿರಾರು ರೈತರು, ನೂರಾರು ಜನ ನಿರುದ್ಯೋಗಿಗಳ ಜೀವನಕ್ಕೆ ಆಧಾರವಾಗಿದೆ. ನಮ್ಮ ತಂದೆಯವರು ಶ್ರಮವಹಿಸಿ ಕಟ್ಟಿದ ಈ ಕಾರ್ಖಾನೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಆಡಳಿತಾತ್ಮಕ ಕಾರಣಗಳಿಂದ ಮಾಡಲು ಸಾಧ್ಯವಾಗಿರುವುದಿಲ್ಲ. ಕಾರಣ ಕಬ್ಬು ನುರಿಸುವ ಸಾಮಥ್ರ್ಯ ಹೆಚ್ಚಳ ಮಾಡುವುದು, ವಿದ್ಯುತ್ ಉತ್ಪಾದನಾ ಘಟಕ ಹಾಗೂ ಇಥೇನಾಲ ಘಟಕ ಪ್ರಾರಂಭಿಸುವುದು ಅವಶ್ಯವಾಗಿರುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದ ಕಬ್ಬು ಅರೆದು ಸಕ್ಕರೆ ಮತ್ತು ಸಹ ಘಟಕಗಳ ಉತ್ಪನ್ನ ಸಹಿತ ಹೆಚ್ಚಿನ ಆದಾಯ ಪ್ರಾಪ್ತಿಯಾಗಿ ರೈತರಿಗೆ ಉತ್ತಮ ಬೆಲೆ ಕೊಡಲು ಮತ್ತು ಸ್ವಂತ ಬಂಡವಾಳ ಹೆಚ್ಚಿಸಲು ಅನುಕೂಲವಾಗುತ್ತದೆ.
ಅಭಿವೃದ್ಧಿಗೆ ಪಣ:
ಕಾರ್ಖಾನೆಯ ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸುವೆ. ಕಾಖರ್ಾನೆಯ ಕಬ್ಬು ಅರೆಯುವ ಸಾಮಥ್ರ್ಯವನ್ನು ಪ್ರತಿದಿನ 2500 ಮೆ.ಟನ್ ದಿಂದ 5000 ಮೆ.ಟನ್ಗೆ ಹೆಚ್ಚಳ ಮಾಡಲಾಗುವುದು. 16 ಮೆ ವ್ಯಾಟ್ ಸಹ ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸುವುದು. 100 ಕೆ.ಎಲ್.ಪಿ.ಡಿ.ಇಥೆನಾಲ್ ಘಟಕವನ್ನು ಪ್ರಾರಭಿಸುವುದು. ಈ ಎಲ್ಲ ಯೋಜನೆಗಳನ್ನು ಎರಡು ವರ್ಷದ ಅವಧಿಯೊಳಗಾಗಿ ನೆರವೇರಿಸಲು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಇದಲ್ಲದೆ ಇನ್ನೂ ಅನೇಕ ಕೆಲಸ ಕಾರ್ಯಗಳನ್ನು ಸಾಕಾರ ಮಾಡಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಯಲ್ಲಿರುವ ಕಾಮರ್ಿಕ ವರ್ಗದವರನ್ನು ಕಾಪಾಡುವ ಗುರಿ ಹೊಂದಿದ್ದೇನೆ. ಆದ್ದರಿಂದ ಕಾರ್ಖಾನೆಯ ಮತದಾರ ರೈತ ಸದಸ್ಯರು ಮತ್ತು ಬೆಂಬಲಿತ ಜನತೆಯ ಸಹಕಾರದಿಂದ ಕಾರ್ಖಾನೆಯ ಅಭಿವೃದ್ಧಿಗಾಗಿ ಸೆ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಬಾಳೇಕುಂದರಗಿ ಸಹಕಾರ ಪೆನಲ್ನ ಅಭ್ಯಥರ್ಿಗಳಿಗೆ ಮತ ನೀಡಬೇಕೆಂದು ವಿನಂತಿಸಿದರು.
ಡಾ.ಮಹಾಂತೇಶಶಾಸ್ತ್ರೀ, ಆರಾದ್ರಿಮಠ, ಶ್ರೀಶೈಲ ಬೋಳಣ್ಣವರ, ಶಿವರಂಜನ ಬೋಳಣ್ಣವರ, ಮಹಾಂತೇಶ ತುರಮರಿ, ಡಾ.ಮಹಾಂತೇಶ ಕಳ್ಳಿಬಡ್ಡಿ, ರಾಜಶೇಖರ ಮೂಗಿ, ನ್ಯಾಯವಾದಿಗಳಾದ ಸಂತೋಷ ಲದ್ದಿಗಟ್ಟಿ, ಸಿ.ಎಸ್.ಚಿಕ್ಕನಗೌಡರ ಹಾಗೂ ಪೆನೆಲ್ ಅಭ್ಯರ್ಥಿಗಳಾದ ಕಾರ್ತಿಕ ಮಲ್ಲೂರ, ಮಹಾಂತೇಶ ಮತ್ತಿಕೊಪ್ಪ, ಮಹಾಬಳೇಶ್ವರ (ರಾಜು) ಕುಡಸೋಮಣ್ಣವರ, ಅಶೋಕ ಬಾಳೇಕುಂದರಗಿ, ಪ್ರದೀಪ ವಣ್ಣೂರ, ಮಡಿವಾಳಪ್ಪ ಅಂಗಡಿ, ಮಹಾಂತೇಶ ಹೊಸಮನಿ, ಚಂದ್ರು ಕಡೆಮನಿ, ಮಹೇಶ ಬಸೆಟ್ಟಿ, ಸಿದ್ದಪ್ಪ ಪೂಜೇರ, ಮಲ್ಲಪ್ಪ ಅಷ್ಟಗಿ, ಆದೃಶಪ್ಪ ಕೊಟಬಾಗಿ, ಅಶೋಕ ಯರಗೊಪ್ಪ, ರಿಯಾನಾ ಬೆಳವಡಿ, ಜಯಶ್ರೀ ಜಪ್ತಿ, ರಾಮಚಂದ್ರ ಕಕ್ಕಯ್ಯನವರ ಹಾಗೂ ರೈತ ಸದಸ್ಯರು ಇದ್ದರು