ಸಾರ್ವಜನಿಕ ಆಸ್ಪತ್ರೆಯಲ್ಲಿ ಬಸವ ಜಯಂತಿ
ಇಂಡಿ04: ಹನ್ನೆರಡನೆಯ ಶತಮಾನವು ಕರ್ನಾಟಕದ ಇತಿಹಾದಲ್ಲಿ ಸುವರ್ಣಯುಗ ಇಡೀ ಜಗತ್ತೇ ನಿಬ್ಬೆರಗಾಗುವಂತಹ ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಕ್ರಾಂತಿಗಳಿಗೆ ಸಾಕ್ಷಿಯಾದ ಕಾಲಘಟ್ಟವದು. ಆ ಕ್ರಾಂತಿಯ ನೇತಾರ ಬಸವಣ್ಣನವರು ಎಂದು ಡಾ.ರಾಜೇಶ ಕೋಳೆಕರ ಹೇಳಿದರು.
ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಬಸವಣ್ಣನವರ ಜಯಂತಿಯ ಅಂಗವಾಗಿ ಬಸವಣ್ಣನವರ ಪೋಟೊ ಪೂಜೆ ಸಲ್ಲಿಸಿ ಮಾತನಾಡಿದರು. ಎಲ್ಲರನ್ನೂ ತಮ್ಮ ಮಾನವೀಯ ಪ್ರೀತಿಯ ತೆಕ್ಕೆಯಲ್ಲಿ ಅಪ್ಪಿಕೊಂಡರು. ಅವರ ಧವಳ ಶುಭ್ರ ನಡೆ-ನುಡಿ, ಆಚಾರಗಳು ಅಂದಿನ ಹಿಂದೂ ಸಮುದಾಯದ ಎಲ್ಲ ವರ್ಗದ ಜನರನ್ನು ಸೆಳೆದುಕೊಂಡವು. ಅವರದ್ದು ಕೇವಲ ಧಾರ್ಮಿಕ ಚಳುವಳಿಯಾಗಿರದೆ ಅದಕ್ಕೆ ಸಾಮಾಜಿಕ, ಆರ್ಥಿಕ ಆಯಾಮಗಳೂ ಇದ್ದವು. ಹುಟ್ಟಿನ ಕಾರಣಕ್ಕೆ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ಸಮಾನರು ಎಂದರು.
ಡಾ. ಜಗದೀಸ ಬಿರಾದಾರ, ಶಾಂತೇಸ ಹಿಪ್ಪಲಿ, ಶ್ರೀಮಂತ ತೋಳನೂರ, ಶ್ರೀಕಾಂತ ಶೀಲವಂತ, ಮಲ್ಲಿಕಾರ್ಜುನ ಅರವತ್ತು, ಸುನೀಲ ರಾಠೋಡ, ಚಂದ್ರಾಮ ಮೇಡೆದಾರ, ಮರೇಪ್ಪ ದೊಡಮನಿ, ಜಗುಬಾಯಿ ಬಡಿಗೇರ, ಪಾರ್ವತಿ ಛತ್ರಿ ಸೇರಿದಂತೆ ಅನೇಕರು ಇದ್ದರು.