ಅಥಣಿ

ಲಕ್ಷ್ಮಣ ಗೊಳಸಂಗಿ ಮರು ನೇಮಕಕ್ಕೆ ಬಸನಗೌಡಾ ಆಗ್ರಹ

ಲಕ್ಷ್ಮಣ ಗೊಳಸಂಗಿ ಮರು ನೇಮಕಕ್ಕೆ ಬಸನಗೌಡಾ ಆಗ್ರಹ

ಲೋಕದರ್ಶನ ವರದಿ 

ಅಥಣಿ 04: ಪಂಚಾಯತ ರಾಜನ ಗ್ರಾಮೀಣ ಕುಡಿಯುವ ನೀರು ಅಥಣಿ ಇಲಾಖೆಯಲ್ಲಿ ಅನುಭವ ಇರುವ ಸಿಬ್ಬಂದಿಗಳ ಕೊರತೆಯಿಂದ ಸಂಯುಕ್ತ ಗ್ರಾಮೀಣ ಕುಡಿಯುವ ನೀರು ಯೋಜನೆ ಹಾಗೂ ಪ್ರತಿ ಗ್ರಾಮದ ಎಲ್ಲ ಮನೆ, ತೋಟದ ವಸತಿಗಳಿಗೂ ಕುಡಿಯುವ ನೀರು ಒದಗಿಸುವ ಜಲಜೀವನ್ ಮೀಶನ್ ಯೋಜನೆಗಳ ಅನುಷ್ಠಾನಕ್ಕಾಗಿ ವಿಳಂಬವಾಗುವ ಸಾಧ್ಯತೆಗಳಿರುವುದರಿಂದ ಇಲಾಖೆಯಲ್ಲಿ ಸುಮಾರು 20 ವರ್ಷಗಳ ಕಾಲ ಜ್ಯೂನಿಯರ್ ಇಂಜನೀಯರ್ ಆಗಿ ಸೇವೆ ಸಲ್ಲಿಸಿ ಫೆ.28 ರಂದು ನಿವೃತ್ತರಾದ ಲಕ್ಷ್ಮಣ ಗೊಳಸಂಗಿ ಇವರನ್ನು ಗುತ್ತಿಗೆ ಆಧಾರದ ಮೇಲೆ ಸೇವೆಗೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಅಧ್ಯಕ್ಷ ಬಸನಗೌಡಾ ಪಾಟೀಲ ಇಲಾಖೆಯ ಮೇಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.  

     ಸದ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರ ಮೂರಾ​‍್ಗಲಿ ಇವರನ್ನು ಹೊರತು ಪಡೆಸಿ ಇನ್ನುಳಿದ ಎಲ್ಲ ಅಭಿಯಂತರರು ಕೂಡ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಈ ಅಭಿಯಂತರರೆಲ್ಲರೂ ಈ ಇಲಾಖೆಗೆ ಹೊಸಬರು ಹೀಗಾಗಿ ಈ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದ್ದು, 20 ಕ್ಕೂ ಹೆಚ್ಚು ವರ್ಷಗಳಿಂದ ಪಂಚಾಯತ ರಾಜ ಇಲಾಖೆಯಲ್ಲಿ  ಹಾಗೂ ಇದೇ ಇಲಾಖೆಯಲ್ಲಿ 5 ವರ್ಷಗಳಿಂದ ಕಾರ್ಯನಿರ್ವಹಿಸಿದ ಇವರನ್ನು ಈ ಯೋಜನೆಗಳು ಪೂರ್ಣಗೊಳ್ಳುವವರೆಗೂ ಹೊರ ಗುತ್ತಿಗೆ ಆಧಾರದ ಮೇಲೆ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ. 


ಸುದ್ದಿ ಓದಿ