ಅಥಣಿ

14ರಂದು ಬೆಂಗಳೂರು ಚಲೋ ಪಾದಯಾತ್ರೆ

14ರಂದು ಬೆಂಗಳೂರು ಚಲೋ ಪಾದಯಾತ್ರೆ

ಅಥಣಿ 12:  ದೇಶ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಸಮಾಜ ಸರ್ವಾಂಗೀಣ ಅಭಿವೃದ್ದಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸರಕಾರ 2ಎ ಮೀಸಲಾತಿಗಾಗಿ ಕೂಡಲಸಂಗಮದ ಪಂಚಮಸಾಲಿ ಲಿಂಗಾಯತ ಪೀಠಾಧ್ಯಕ್ಷರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜ.14ರಂದು ಬೆಂಗಳೂರು ಚಲೋ ಪಾದಯಾತ್ರೆ ಮುಖಾಂತರ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದೆಂದು ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹಕ್ಕೋತ್ತಾಯ ಸಂಘಟಣಾ ವೇದಿಕೆಯ ರಾಷ್ಟ್ರೀಯ ಉಪಾಧ್ಯಕ್ಷ ರಾಮನಗೌಡ ಪಾಟೀಲ ಹೇಳಿದರು.

ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪಾದಯಾತ್ರೆಯಲ್ಲಿ ಭಾಗಿಯಾಗಲು ಅಥಣಿ ತಾಲೂಕಿನಿಂದ ಸುಮಾರು 10 ಸಾವಿರಕ್ಕಿಂತ ಹೆಚ್ಚಿನ ಜನ ಪಾಲ್ಗೊಳ್ಳುತ್ತಾರೆ. ಜನೇವರಿ 14ರಂದು ಕೂಡಲಸಂಗಮದಲ್ಲಿ ಸುಮಾರು ಸಮಾಜದ 5 ಲಕ್ಷ ಜನ ಭಾಗಿಯಾಗುತ್ತಾರೆ. ಅಲ್ಲಿಂದ ದಿನಕ್ಕೆ 20ಕಿ.ಮೀ ಅಂತರವರೆಗೆ ಕಾಲ್ನಡಿಗೆಯಿಂದ ಪಾದಯಾತ್ರೆ ತೆರಳುತ್ತಾರೆ. ಈ ಹೋರಾಟವು ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹೊರತು ಇತರೆ ಯಾವುದೇ ಲಿಂಗಾಯತ ಸಮಾಜದ ಮೀಸಲಾತಿ ಕಸಿದುಕೊಳ್ಳುವ ಉದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದರು. 

ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹಕ್ಕೋತ್ತಾಯ ಸಂಘಟಣಾ ವೇಧಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಸುಭಾಷ ನಾಯಿಕ ಮಾತನಾಡಿ, 1994ರಲ್ಲಿ ನಮ್ಮ ಹೋರಾಟ ಸಂಘಟಣೆ ಮಾಡುವುದರ ಮೂಲಕ 2003ರಲ್ಲಿ ದೆಹಲಿ 250 ನಮ್ಮ ಸಮಾಜದ ಮುಖಂಡರು ಮೀಸಲಾತಿಗಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.

ಈ ವೇಳೆ ಪಿ. ಜಿ. ಬಿಸಗುಪ್ಪಿ, ಬಿ. ಬಿ. ಠಕ್ಕಣ್ಣವರ, ಎಸ್. ಎಸ್. ಪಾಟೀಲ, ವಿನಯ ಪಾಟೀಲ, ಮುರಿಗೆಪ್ಪಗೌಡ ಪಾಟೀಲ. ಅಶೋಕ ನೇಮಗೌಡ, ವಿಜಯ ನೇಮಗೌಡ, ಸುನೀಲ ಸಂಖ, ಸುರೇಶ ಪಾಟೀಲ ಶೇಗುನಸಿ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ