ಅಥಣಿ

ಬಳವಾಡ ಪಿಕೆಪಿಎಸ್ ಚುನಾವಣೆ: ಶಾಸಕ ಲಕ್ಚ್ಮಣ ಸವದಿ ಪೆನಲ್‌ಗೆ ಭಾರೀ ಬಹುಮತದ ಗೆಲುವು

ಬಳವಾಡ ಪಿಕೆಪಿಎಸ್ ಚುನಾವಣೆ: ಶಾಸಕ ಲಕ್ಚ್ಮಣ ಸವದಿ ಪೆನಲ್‌ಗೆ ಭಾರೀ ಬಹುಮತದ ಗೆಲುವು

ಅಥಣಿ 10: ಬಳವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಡಿಸಿಎಮ್, ಶಾಸಕ ಲಕ್ಚ್ಮಣ ಸವದಿ ನೇತೃತ್ವದ ಸಹಕಾರಿ ಪೆನಲ್‌ನ ಎಲ್ಲ 12 ಅಭ್ಯರ್ಥಿಗಳು ಭಾರೀ ಬಹುಮತದಿಂದ ಗೆಲುವು ಸಾಧಿಸಿದ್ದಾರೆ ಎಂದು ಸಹಕಾರಿ ಪೆನಲ್ ನ ಅಪ್ಪು ನೇಮಗೌಡ ಹೇಳಿದರು.  

ಅವರು ಸಹಕಾರಿ ಸಂಘದ ಚುನಾವಣೆ ಹಿನ್ನಲೆಯಲ್ಲಿ ಬಳವಾಡ ಗ್ರಾಮದಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಚುನಾವಣೆ ಪೂರ್ವ ದಲ್ಲಿಯೇ ನಮ್ನ ಸಹಕಾರಿ ಪೆನಲ್ ನ 6 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು ಇನ್ನೂಳಿದ 6 ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಲು ವಿರೋಧಿ ಪೆನಲ್ ನವರೊಂದಿಗೆ ಚರ್ಚಿಸಿದರೂ ಕೂಡ ಅವರು ಚುನಾವಣೆ ಮಾಡಲು ಒಲವು ತೋರಿದ ಪರಿಣಾಮ ಅನಿವಾರ್ಯ ವಾಗಿ ಚುನಾವಣೆ ಮಾಡಿದ್ದೇವೆ ಎಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ 6 ಅಭ್ಯರ್ಥಿಗಳೂ ಕೂಡ ಭಾರೀ ಬಹುಮತದಿಂದ ಆಯ್ಕೆಯಾಗಿದ್ದು, ಚುನಾವಣೆಯಲ್ಲಿ ಸಹಕರಿಸಿದ್ದ ಎಲ್ಲ ಮತದಾರ ಬಂಧುಗಳನ್ನು ಅಭಿನಂದಿಸಿದರು.  

ಕಾಂಗ್ರೆಸ್ ಮುಖಂಡ ನಿಂಗಪ್ಪಾ ಐನಾಪುರ ಮಾತನಾಡಿ, ಇದೇ ಮೊದಲ ಬಾರಿಗೆ ಶಾಸಕ ಲಕ್ಷ್ಮಣ ಸವದಿ ನೇತೃತ್ವದ ಈ ಪೆನಲ್ ನ ಎಲ್ಲ ಅಭ್ಯರ್ಥಿಗಳು ಭಾರೀ ಅಂತರದಿಂದ ಜಯಶಾಲಿಯಾಗಿರಯವುದು ಲಕ್ಷ್ಮಣ ಸವದಿಯವರ ಕೈ ಬಲಪಡಿಸಿದಂತಾಗಿದೆ ಎಂದ ಅವರು ನಮ್ಮ ಅಧಿಕಾರವಧಿಯಲ್ಲಿ ರೈತರಿಗೆ ಸರಕಾರದ ಆರ್ಥಿಕ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದರು.  

ಗ್ರಾಮದ ಮುಖಂಡ ರಸೂಲ ನದಾಫ ಮಾತನಾಡಿ, ನಮ್ಮ ಕೃಷಿ ಪತ್ತಿನ ಸಹಕಾರಿ ಸಂಘದ ಬೆನ್ನೆಲುಬಾಗಿ ಶಾಸಕ ಲಕ್ಚ್ಮಣ ಸವದಿ ನಿಂತಿದ್ದು, ಮುಂದಿನ ದಿನಗಳಲ್ಲಿ ಈ ಸಹಕಾರಿ ಸಂಘದ ಆರ್ಥಿಕ ವ್ಯವಹಾರ ದ್ವಿಗುಣಗೊಳ್ಳಲಿದೆ ಎಂದರು.  

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಬಾಬು ಮಗದುಮ್, ಮಹಾದೇವ ಪಾಟೀಲ, ಅನೀಲ ಐನಾಪುರ, ರಾಮು ಮಟ್ಟಿ, ಶಿದರಾಯ ಪಾಟೀಲ, ಶಿವರುದ್ರ (ಅಪ್ಪು) ನೇಮಗೌಡ ಬಹುಮತದಿಂದ ಆಯ್ಕೆಯಾಗಿದ್ದಾರೆ.   

ಅವಿರೋಧವಾಗಿ ಮಹಾದೇವಿ ಬಸಪ್ಪಾ ಸವದಿ, ಮಹಾದೇವಿ ಶಿದರಾಯ ನೇಮಗೌಡ, ಭೀಮಣ್ಣಾ ತಮ್ಮಣ್ಣಾ ಜನವಾಡ, ಇಮಾಮ ಜಾಫರ ನದಾಫ, ಮಲ್ಲಿಕಾರ್ಜುನ ಹರೋಲಿ, ರಾಜು ಮಲ್ಲಪ್ಪಾ ಕಾಂಬಳೆ ಆಯ್ಕೆಯಾಗಿದ್ದಾರೆ.  

ಚುನಾವಣಾ ಅಧಿಕಾರಿಯಾಗಿ ಸಿಡಿಪಿಒ ಅಶೋಕ ಕಾಂಬಳೆ, ಸಹಾಯಕರಾಗಿ ರಾವಸಾಬ ಸವದಿ, ಪರಶುರಾಮ ಬಳವಾಡಕರ, ಬಸಗೌಡ ನೇಮಗೌಡ ಕಾರ್ಯನಿರ್ವಹಿಸಿದರು.   

ವಿಜಯೋತ್ಸವದಲ್ಲಿ ಸಂಭಾಜಿ ಐನಾಪುರ,  ಅಣ್ಣಪ್ಪಾ ಜನವಾಡ, ಅಣ್ಣಾಸಾಬ ಪಾಟೀಲ, ಮಲ್ಲಿಕಾರ್ಜುನ ಹರೋಲಿ, ತಿಪ್ಪಣ್ಣಾ ಶೆಡಬಾಳ, ಅಪ್ಪಾಸಾಬ ಪಾಟೀಲ, ಬಸವರಾಜ ಹರೋಲಿ, ಪ್ರಕಾಶ ಹರೋಲಿ, ಕಲ್ಲಪ್ಪ ಐನಾಪುರ, ಭೀಮಪ್ಪಾ ಐನಾಪುರ, ರಾವಸಾಬ ಶಿರಿಗಿರಿ, ರಮಜಾನ ನದಾಫ, ಚನಗೌಡ ಸವದಿ, ವಜೀರ ನದಾಫ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. 


ಸುದ್ದಿ ಓದಿ