ಬಳ್ಳಾರಿ

ಬಡೇಲಡಕು ಸತೀಶ ಕುಮಾರ ಅವರಿಗೆ ಪಿಹೆಚ್‌ಡಿ ಪದವಿ ಪ್ರದಾನ

ಬಡೇಲಡಕು ಸತೀಶ ಕುಮಾರ ಅವರಿಗೆ ಪಿಹೆಚ್‌ಡಿ ಪದವಿ ಪ್ರದಾನ

ಬಳ್ಳಾರಿ,ನ.06: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆರೆಕಾವಲರ ಹಟ್ಟಿ (ಕೆ.ಕೆ.ಹಟ್ಟಿ) ಗ್ರಾಮದ ಬಡೇಲಡಕು ಸತೀಶಕುಮಾರ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿ ಘೋಷಿಸಿದೆ. 

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಹಾಗೂ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಪ್ರೊ.ರಮೇಶ್ ಓ ಓಲೇಕಾರ ಅವರ ಮಾರ್ಗದರ್ಶನದಲ್ಲಿ ಹಾಗೂ ವ್ಯವಹಾರ ಅಧ್ಯಯನ ನಿಕಾಯದಲ್ಲಿ “ಎ ಸ್ಟಡಿಆಫ್ ಫೈನಾನ್ಸಿಯಲ್ ಲಿಟರೆಸಿ ಆ್ಯಂಡ್ ಇಂಡಿವಿಜುವಲ್ ಇನ್ವೆಸ್ಟರ​‍್ಸ‌ ಡಿಸಿಜನ್ ಇನ್ ಷೇರ​‍್ಸ‌ ವಿತ್ ಸ್ಪೆಷಿಯಲ್ ರೆಫರೆನ್ಸ್‌ ಟು ಸೆಲೆಕ್ಟೆಡ್ ಸಿಟಿಸ್ ಇನ್ ಕರ್ನಾಟಕ” ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌.ಡಿ ಪದವಿಯನ್ನು ನೀಡಲಾಗಿದೆ ಎಂದು ವಿವಿಯ ಪರೀಕ್ಷಾ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ. 

ಸುದ್ದಿ ಓದಿ