ಇಂಡಿ

24 ರಂದು ಅಯ್ಯಪ್ಪ ಸ್ವಾಮಿಯವರ 26ನೇ ವರ್ಷದ ಜಾತ್ರಾ ಮಹೋತ್ಸವ

24 ರಂದು ಅಯ್ಯಪ್ಪ ಸ್ವಾಮಿಯವರ 26ನೇ ವರ್ಷದ ಜಾತ್ರಾ ಮಹೋತ್ಸವ

ಇಂಡಿ: ಅಯ್ಯಪ್ಪ ಸ್ವಾಮಿಯವರ 26ನೇ ವರ್ಷದ ಜಾತ್ರಾ ಮಹೋತ್ಸವ ಡಿ.24 ಮತ್ತು 25 ರಂದು ಪಟ್ಟಣದ ಚವಡಿಹಾಳ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ಮಠದ ಆವರಣದಲ್ಲಿ ಜರುಗಲಿದೆ ಎಂದು ರಾಯಲ್ ಗುರುಸ್ವಾಮಿ ತಿಳಿಸಿದ್ದಾರೆ. 

24 ರಂದು ಸಾಯಂಕಾಲ 4 ಗಂಟೆಗೆ ಅಯ್ಯಪ್ಪಸ್ವಾಮಿಯ ಪಲ್ಲಕ್ಕಿ ಉತ್ಸವ ಹಾಗೂ ದಿವ್ಯ ಜ್ಯೋತಿಯು ಬೆನಕಪ್ಪನ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಭವ್ಯ ಮೆರವಣೆಗೆಯೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ಮಠಕ್ಕೆ ಬಂದು ತಲುಪುವದು. ನಂತರ ಪೂಜಾ ಕಾರ್ಯಕ್ರಮಗಳು ಜರುಗುವವು. 

25 ರಂದು ನಸುಕಿನ ಜಾವ 5 ಗಂಟೆಗೆ ಬ್ರಾಹ್ಮಿ ಮೂಹುರ್ತದಲ್ಲಿ ಅಭಿಷೇಕ ನಂತರ ಮಹಾ ಮಂಗಳಾರತಿ ಜರುಗುವುದು. ನಂತರ ಬೆಳಿಗ್ಗೆ 6 ಗಂಟೆಗೆ ಗಣಹೋಮ ಕಾರ್ಯಕ್ರಮ ಜರುಗುವದು.ನಂತರ 9 ಗಂಟೆಗೆ  18 ಮೆಟ್ಟಿಲುಗಳ ಪೂಜಾ ಕಾರ್ಯಕ್ರಮ, ಅಯ್ಯಪ್ಪ ಮಾಲಾಧಾರಿಗಳಿಂದ ವಿಶೇಷ ಭಕ್ತಿಗೀತೆಗಳು ನಂತರ 10 ಗಂಟೆಗೆ ಮಹಾ ಪ್ರಸಾದ ಜರುಗುವದು.11 ಗಂಟೆಗೆ ರಾಯಲ್ ಗುರುಸ್ವಾಮಿಯವರ ನೇತೃತ್ವದಲ್ಲಿ ಬೃಹತ್ ನೇತ್ರದಾನ ಹಾಗೂ ರಕ್ತದಾನ ಶಿಬಿರ ಜರುಗುವದು. ವಿಜಯಪುರ ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಮತ್ತು ಅನುಗ್ರಹ ಆಸ್ಪತ್ರೆ ಸಹಯೋಗದಲ್ಲಿ ನೇತ್ರದಾನ ಕಾರ್ಯಕ್ರಮ ಅಯ್ಯಪ್ಪ ಮಾಲಾಧಾರಣಿಗಳು ಮತ್ತು ಭಕ್ತರು ನೇತ್ರದಾನ ವಾಗ್ದಾನ ಮಾಡುವರು. 

ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು ಮತ್ತು ಹಂಜಗಿ, ಚಿಕ್ಕಬೇವನೂರ ಗ್ರಾ.ಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗುವದು ಎಂದು ರಾಯಲ್ ಗುರುಸ್ವಾಮಿ ತಿಳಿಸಿದ್ದಾರೆ. 

ಶ್ಯಾಮ ಲಚ್ಯಾಣ ಸ್ವಾಮಿ, ಮಂಜು ಸ್ವಾಮಿ ಮೆಡಿಕಲ್ಸ, ಮಂಜು ಸ್ವಾಮಿ ಕುಂಬಾರ, ಬಸು ಸ್ವಾಮಿ ತಾಂಬೆ, ಪಾಂಡು ಗುರುಸ್ವಾಮಿ, ಸಂಜು ಹೂಗಾರ, ಪ್ರದೀಪ ಅಹಿರಸಂಗ, ಬಸು ಸ್ವಾಮಿ ಸೆಂಟ್ರಿಂಗ್, ರಾಮ ಹದಗಲ್ಲ, ಅಪ್ಪು ಸ್ವಾಮಿ, ಉಡುಪಿ ಸ್ವಾಮಿ, ಕಲ್ಯಾಣಶೆಟ್ಟಿ ಸ್ವಾಮಿ ಮತ್ತಿತರಿದ್ದರು. 

ಸುದ್ದಿ ಓದಿ