ಅಥಣಿ

ಸಾಲಗಾರ ಕ್ಷೇತ್ರದ ಚುನಾವಣೆಯಲ್ಲಿ ಅವಿನಾಶ ಹಣಮಾಪುರ ಭಾರೀ ಬಹುಮತದಿಂದ ಗೆಲುವು

ಸಾಲಗಾರ ಕ್ಷೇತ್ರದ ಚುನಾವಣೆಯಲ್ಲಿ ಅವಿನಾಶ ಹಣಮಾಪುರ ಭಾರೀ ಬಹುಮತದಿಂದ ಗೆಲುವು

ಅಥಣಿ 07:  ಅಥಣಿ ಮತಕ್ಷೇತ್ರದ ಹೊಸಟ್ಟಿ ಸಿದ್ಧೇಶ್ವರ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಸಾಲಗಾರ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ ಬೆಂಬಲಿತ ಅಭ್ಯರ್ಥಿ ಅವಿನಾಶ ಹಣಮಾಪುರ ಭಾರೀ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಚಲಾವಣೆಯಾದ ಮತಗಳಲ್ಲಿ 97 ಮತಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಜಯ ಶಾಲಿಯಾದರು. ಜಯಶಾಲಿಯಾದ ನಂತರ ಅವಿನಾಶ ಹಣಮಾಪುರ ಬೆಂಬಲಿಗರು ಹೊಸಟ್ಟಿ ಗ್ರಾಮದಲ್ಲಿ ಮತ್ತು ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುಲಾಲ ಎರಚಿ ರಮೇಶ ಜಾರಕಿಹೊಳಿ ಮತ್ತು ಮಹೇಶ ಕುಮಠಳ್ಳಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.        

ಸಂಕೋನಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಬಿಜೆಪಿ ಯುವ ನಾಯಕ ಸಂತೋಷ ಕಕಮರಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಮಾಜಿ ಶಾಸಕ ಮಹೇಶ ಕುಮಠಳ್ಳಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಅವಿನಾಶ ಹಣಮಾಪುರ 30 ಮತಗಳ ಅಂತರದಿಂದ ಹೊಸಟ್ಟಿ ಸಹಕಾರ ಸಂಘಕ್ಕೆ ಆಯ್ಕೆಯಾಗಿರುವುದು ವಿರೋಧಿ ಬಣದ ಶಕ್ತಿ ಕುಗ್ಗಿಸಿದೆ ಎಂದರು.        ಜಯಶಾಲಿಯಾದ ಅಭ್ಯರ್ಥಿ ಅವಿನಾಶ ಹಣಮಾಪುರ ಮಾತನಾಡಿ, ನನ್ನ ಮೇಲೆ ವಿಶ್ವಾಸ ಇಟ್ಟು ಮತದಾರರು ಮತ ಚಲಾವಣೆ ಮಾಡಿದ್ದು, ಮತದಾರರ ವಿಶ್ವಾಸ ಉಳಿಸಿಕೊಂಡು ಕಾರ್ಯನಿರ್ವಹಿಸುವೆ ಎಂದ ಅವರು ನನಗೆ ಮತ ಚಲಾವಣೆ ಮಾಡಿದ ಎಲ್ಲ ಮತದಾರ ಬಂಧುಗಳಿಗೆ ಮತ್ತು ನನ್ನ ಜೊತೆ ಕಾರ್ಯನಿರ್ವಹಿಸಿದ ಎಲ್ಲರನ್ನು ಅಭಿನಂದಿಸಿದರು. ಮಲ್ಲಿಕಾರ್ಜುನ ಅಂದಾನಿ, ಅಪ್ಪಾಸಾಬ ಹಲ್ಯಾಳ, ಸುರೇಶ ಭೋಸಲೆ, ಲಕ್ಷ್ಮಣ ನಾಯಿಕ, ರಾಜು ನಾಯಿಕ, ರಾವಸಾಬ ದೇವಕಾತೆ, ಅಣ್ಣಪ್ಪಾ ನಾಯಿಕ, ಮಂಜುನಾಥ ಕರವಳೆ, ಮಹಾದೇವ ಹಲ್ಯಾಳ, ದತ್ತು ನಾಯಿಕ, ಲಕ್ಷ್ಮಣ ದೇವಕಾತೆ, ಮಹೇಶ ಹಣಮಾಪುರಅಕ್ಷಯ ಐಹೊಳೆ ಸೇರಿದಂತೆ ಅನೇಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ