ಅಥಣಿ

ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶಕ್ಕೆ ಅವತಾಡೆ ಆಗ್ರಹ

ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶಕ್ಕೆ ಅವತಾಡೆ ಆಗ್ರಹ

ಲೋಕದರ್ಶನ ವರದಿ 


ಅಥಣಿ 11: 2023 ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟಿಲ್ ಹಾಗೂ ಚುನಾವಣಾ ಉಸ್ತುವಾರಿ ಸಮಿತಿಯನ್ನು ಕೆ.ಎಮ್‌.ಎಫ್ ನಿರ್ದೇಶಕ, ಬಿಜೆಪಿ ಧುರೀಣ ಅಪ್ಪಾಸಾಹೇಬ ಅವತಾಡೆ ಆಗ್ರಹಿಸಿದರು.  

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ನಾನು ಕಳೆದ 37 ವರ್ಷಗಳಿಂದ ಸಮಾಜಿಕ, ಸಹಕಾರ ಕ್ಷೇತ್ರಗಳಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವೆ ಜೊತೆಗೆ 25 ವರ್ಷಗಳಿಂದ ಬಿಜೆಪಿಯಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಿರುವ ನಾನು ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ ಸದಸ್ಯನಾಗಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಅನುಭವ ಕೂಡ ನನಗಿದೆ ಎಂದ ಅವರು ಪ್ರಸ್ತುತ ಕೆ.ಎಮ್‌.ಎಫ್ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿರುವೆ ಎಂದು ಹೇಳಿದರು.  

     ಅಥಣಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಸಹ ಯುವಕ ಸಂಘಗಳ, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ನನ್ನ ಪರ ಒಲವು ತೋರುತ್ತಿದ್ದಾರೆ, ಜೊತೆಗೆ ಬಿಜೆಪಿ ಕಾರ್ಯಕರ್ತರು, ಮಂಡಲ ಪದಾಧಿಕಾರಿಗಳು, ಮುಖಂಡರು, ಅಭಿಮಾನಿಗಳು ಕೂಡ ನನಗೆ ಬೆಂಬಲ ವ್ಯಕ್ತ ಪಡಿಸುತ್ತಿದ್ದು, ಗ್ರಾಮ ಪಂಚಾಯತ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಸದಸ್ಯರು ಕೂಡ ನನ್ನ ಜೊತೆಗಿದ್ದಾರೆ ಎಂದು ಹೇಳಿದರು.  

     ಅಥಣಿ ಮತಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮದ ಭೇದ, ಭಾವ ಇಲ್ಲದೆ ಎಲ್ಲರೊಂದಿಗೆ ಸೌಹಾರ್ದ ಮತ್ತು ನಿಕಟ, ನಿರಂತರ ಸಂಪರ್ಕದಲ್ಲಿರುವ ನಾನು ಕ್ಷೇತ್ರದ ಧಾರ್ಮಿಕ, ಆಧ್ಯಾತ್ಮ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿರುವ ನಾನು ಈ ಕೇಂದ್ರಗಳಿಗೆ ಸಹಾಯ ಹಸ್ತ ಚಾಚುತ್ತಲೇ ಬಂದಿರುವೆ ಎಂದು ಹೇಳಿದರು.  

    ಅಪಾರ ಜನಬಲ ಹೊಂದಿರುವ ನನಗೆ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟು ಮತದಾರರ ಸೇವೆ ಮಾಡಲು ಅನುವು ಮಾಡಿಕೊಡಬೇಕು ಎಂದು ಅಪ್ಪಾಸಾಹೇಬ ಅವತಾಡೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಆಗ್ರಹಿಸಿದರು.  

ಬಿಜೆಪಿ, ಮುಖಂಡರು, ಅಪ್ಪಾಸಾಹೇಬ ಅವತಾಡೆ ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ