ಸೌಂದತ್ತಿ

ಹುಮ್ನಾಬಾದ ತಹಸೀಲ್ದಾರ ಮೇಲೆ ಹಲ್ಲೆ: ಕ್ರಮಕ್ಕೆ ಮನವಿ

ಹುಮ್ನಾಬಾದ ತಹಸೀಲ್ದಾರ ಮೇಲೆ ಹಲ್ಲೆ: ಕ್ರಮಕ್ಕೆ ಮನವಿ

ಲೋಕದರ್ಶನ ವರದಿ 


ಸವದತ್ತಿ 29: ಹುಮ್ನಾಬಾದ ತಹಸೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠರ ಮೇಲೆ ಹಲವು ಪುಂಡರು ಹಲ್ಲೆ ಮಾಡಿರುವದನ್ನು ಖಂಡಿಸಿ ಶನಿವಾರದಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೆಂದ್ರ ಸಂಘದ ಸವದತ್ತಿ ತಾಲೂಕು ಘಟಕಗಳಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. 

ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ ಮೂಗಬಸವ ಮಾತನಾಡಿ, ಕರ್ತವ್ಯದ ಮೇಲಿರುವ ಅಧಿಕಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ಕೆಲವು ರಾಜಕೀಯ ಪ್ರೇರಿತ ವ್ಯಕ್ತಿಗಳು ಹಲ್ಲೆ ಮಾಡಿರುವುದು ಖಂಡನೀಯ ಎಂದರು. ಕಚೇರಿಯಲ್ಲಿಯೆ ತಹಸೀಲ್ದಾರರನ್ನು ಕಾಲಿನಿಂದ ಒದ್ದು ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದು ಸರಕಾರಿ ನೌಕರರಿಗೆ ಭದ್ರತೆ ಇಲ್ಲದಂತಾಗಿದೆ. ತಪ್ಪಿತಸ್ಥರನ್ನು ಕೂಡಲೆ ಬಂಧಿಸಿ ಅವರ ಮೇಲೆ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಕಂದಾಯ ಇಲಾಖೆಯು ಆಡಳಿತ ಇಲಾಖೆಯಾಗಿದ್ದು, ಇಲ್ಲಿನ ಅಧಿಕಾರಿಗಳ ಮೇಲೆ ಅನೇಕ ಸಂದರ್ಭಗಳಲ್ಲಿ ಹಲ್ಲೆಗಳು ನಡೆಯುತ್ತಲೆ ಬಂದಿವೆ. ಇದೇ ರೀತಿ ಹಲ್ಲೆಗಳ ಯತ್ನಗಳು ಮುಂದುವರೆದರೆ ನೌಕರರು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. ಸರಕಾರಿ ನೌಕರರ ಮೇಲಾಗುತ್ತಿರುವ ಹಲ್ಲೆಯಂತ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಸರಕಾರಿ ನೌಕರರ ಸಂಘದ ನೌಕರರಿಂದ ಉಪತಹಸೀಲ್ದಾರ ಶಶಿಕುಮಾರ ವನಕಿಯವರಿಗೆ ಮನವಿ ಸಲ್ಲಿಸಲಾಯಿತು. 

ಐ.ಎಸ್‌.ಕಲಗೌಡ, ಎ.ಕೆ.ಮುಲ್ಲಾ, ಎಸ್‌.ಡಿ.ಖನ್ನಿನಾಯ್ಕರ, ಸೋಮು ಅಗಸಿಮನಿ, ಎಫ್‌.ಜಿ.ನವಲಗುಂದ, ಜಿ.ವೈ.ಕುರಿ, ವಿ.ಸಿ.ಹಿರೇಮಠ, ಎಸ್‌.ಬಿ.ಬೆಟ್ಟದ, ಅನ್ನಪ್ಪ ಶಿಂಧಿ, ಪ್ರಕಾಶ ಹಡಪದ, ರಾಜಶೇಖರ ಪಾಶ್ಚಾಪುರ, ಮಂಜು ಇಳ್ಳೂರು, ಮಹೇಶ ಬಾಗನವರ, ಎಮ್‌.ವಿ.ಮುರಗೋಡ, ರವಿ ಲಮಾಣಿ,  ಗುರುನಾಥ ತೋಟಗೇರ, ಅಪೂರ್ಣ ರಾಮದುರ್ಗ, ಎಲ್‌.ಎಸ್‌.ತಳವಾರ, ಸುರೇಶ ಆಯಟ್ಟಿ,  ಎ.ಎಚ್‌.ಬ್ಯಾಹಟ್ಟಿ, ಗಂಗಮ್ಮಾ.ಬಿ, ಎಮ್‌.ಎಮ್‌.ಗಂಗಮ್ಮನವರ ಹಾಗೂ ಸರಕಾರಿ ಎಲ್ಲ ಇಲಾಖೆಗಳ ವೃಂದ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ