ಮೂಲ ಕಲೆ ಸಾಹಿತ್ಯಗಳನ್ನು ಉಳಿಸುವ ಕಲಾವಿದರನ್ನು ಉಳಿಸಿಕೊಳ್ಳಬೇಕಿದೆ: ಡಾ. ಬಸಪ್ಪ
ಬಳ್ಳಾರಿ 19: ನಗರದ ಬಂಡಿಹಟ್ಟಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಕ್ಷಯ ಕಲಾ ಟ್ರಸ್ಟ್ ಹೊಸಯರ್ರಗುಡಿ ಇವರ ವತಿಯಿಂದ ರಂಗ ಗೀತೆಗಳು ಮತ್ತು ಸಾಮಾಜಿಕ ಅರಿವು ನಾಟಕ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ಬೀಮಪ್ಪ ಹಾರ್ಮೋನಿಯಂ ಮಾಸ್ಟರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಇಲ್ಲಿನ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಕಾಲೇಜ್ ಅತಿಥಿ ಉಪನ್ಯಾಸಕ ಡಾ. ಕೆ.ಬಸಪ್ಪ ವಹಿಸಿದ್ದರು. ನಂತರ ಸಣ್ಣ ಬಿ ಎಂ ಭೀಮಪ್ಪ ರವರು ಮಾತನಾಡುತ್ತಾ ನಶಿಸಿಹೋಗುವ ಮೂಲ ಕಲೆಗಳ ಬಗ್ಗೆ ಯುವ ಜನರಿಗೆ ಮುಂದಿನ ಯುವ ಪೀಳಿಗೆಗೆ ಕಲೆ ಸಾಹಿತ್ಯ ಸಂಗೀತ ಉಳಿಯಬೇಕು ಎಂದು ಹೇಳಿದರು.
ನಮ್ಮ ತಾಯ್ನಾಡಿನ ಕಲೆಗಳು, ಜಾನಪದ ಹಾಡುಗಳು, ರಂಗ ಗೀತೆಗಳು, ಗೀಗಿ ಪದಗಳು, ಲಾವಣಿ ಪದಗಳು, ದೊಡ್ಡಾಟ, ಸಣ್ಣಾಟ, ಬೈಲಾಟದಂತ ಸಾಮಾಜಿಕ ಅರಿವು ನಾಟಕ, ನಮ್ಮ ನಾಡಿನ ಮೂಲ ಕಲೆಗಳಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಈ ಮಾಧ್ಯಮಗಳಿಂದ ನಮ್ಮ ಮೂಲ ಕಲೆಗಳು ಕಣ್ಮರೆಯಾಗಿವೆ ಎಂದು ಅರ್ಥಗರ್ಭಿತವಾಗಿ ಜನರಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ ತಮ್ಮ ಡಾ.ಕೆ ಬಸಪ್ಪ ರವರು ತಮ್ಮ ಹಿತವಚನಗಳನ್ನು ಮಾತನಾಡುತ್ತಾ ಮೂಲ ಕಲೆ ಸಾಹಿತ್ಯಗಳು ಉಳಿಸುವ ಕಲಾವಿದರನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಇವತ್ತಿನ ಕಲಾವಿದರು ವಾಸ್ತವದ ಮೂಲ ಕಲೆಗಳನ್ನು ಬಿಟ್ಟು ಮೊಬೈಲ್ನಿಂದ ಬರುವಂತಹ ಕರೋಕೆ ಸಾಂಗ್ಗಳನ್ನು ಕಲಿತು ಹಾಡುವಂತಹದು ಜಾಸ್ತಿ ಆಗ್ತಾ ಇದೆ. ವಾದ್ಯಗಳನ್ನು ಹಿಡಿದುಕೊಂಡು ಹಾಡುವಂತ ಕಲಾವಿದರು ಇತ್ತೀಚಿಗೆ ಕಡಿಮೆಯಾಗಿದ್ದಾರೆ. ಹಾಗಾಗಿ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ಕಲಾವಿದರಿಗೆ ಇಲಾಖೆಯವರು ಮೊದಲ ಆದ್ಯತೆ ನೀಡಬೇಕು ಹಾಗೆಯೇ ಅವರಿಗೆ ಪ್ರೋತ್ಸಾಹಿಸಬೇಕು ಎಂದು ಮನದಾಳದ ಮಾತು ವ್ಯಕ್ತಪಡಿಸಿದರು.
ಕೊಟ್ರೇಶ ಮತ್ತು ತಂಡದವರಿಂದ ರಂಗ ಗೀತೆಗಳು ಕಾರ್ಯಕ್ರಮ ನಡೆಯಿತು ಎಚ್ ರಮೇಶ್ ಮತ್ತು ಕಲಾ ತಂಡದವರಿಂದ ಸಾಮಾಜಿಕ ಅರಿವು ನಾಟಕ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ. ಕಲಾವಿದರಾದ ಹುಲುಗಪ್ಪ ಎಸ್ ಎಂ ಬಿ, ಆನಂದ ವೈ,ತಾಯಪ್ಪ, ಅಶ್ವಿನಿ ವಿಜಯಕುಮಾರ್, ಎಲ್ ಕೊಟ್ರೇಶ, ರಮೇಶ ಎಚ್, ಜಿ ಸುಂಕಪ್ಪ ಅಧ್ಯಕ್ಷರು ಅಕ್ಷಯ್ ಕಲ್ಲ ಟ್ರಸ್ಟ್ ಹೊಸಯರ್ರ ಗುಡಿ ಮತ್ತು ಸಮಾಜ ಸೇವಕರಾದ ವೆಂಕೋಬಣ್ಣ, ಕಲಾಪೋಷಕರಾದ ಶಿವಶರಣ ಹಾಗೂ ಊರಿನ ಎಲ್ಲಾ ಹಿರಿಯ ಮುಖಂಡರು, ಜನರು ಭಾಗವಹಿಸಿದ್ದರು.