ಇಂಡಿ

ಕೃತಕ ಕಾಲು ಜೋಡಣೆ: ಮಾನವೀಯತೆ ಮರೆದ ವಿಜಯಕುಮಾರ

ಕೃತಕ ಕಾಲು ಜೋಡಣೆ: ಮಾನವೀಯತೆ ಮರೆದ ವಿಜಯಕುಮಾರ


ಇಂಡಿ18: ಯಾವುದೋ ಒಂದು ಭೀಕರ ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡು ನಡೆದಾಡಲು ಆಗದ ಸ್ಥಿತಿಯಲ್ಲಿರುವ ಬಡ ಜನರನ್ನು ಗುರುತಿಸಿ ಇಲ್ಲೋರ್ವ ಸಮಾಜ ಸೇವಕ ಕೃತಕ ಕಾಲು ಜೋಡಣೆ ಮಾಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. 

ತಾಲ್ಲೂಕಿನ ಭತಗುಣಕಿ ಗ್ರಾಮದ ಸಮಾಜ ಸೇವಕ ವಿಜಯಕುಮಾರ ಭೋಸಲೆ ಎಂಬುವವರೇ ಸಮಾಜ ಸೇವೆಯಲ್ಲಿ ತೊಡಗಿಕೊಂಡ ವ್ಯಕ್ತಿ. ಈ ವ್ಯಕ್ತಿಯ ಸಮಾಜಮುಖಿ ಕಾರ್ಯಗಳೂ ಎಷ್ಟೋ ಜನರಿಗೆ ಪ್ರೇರಣೆಯಗುತ್ತಲಿವೆ. 

ಮೂಲತಃ ಭತಗುಣಕಿ ಗ್ರಾಮದವರಾದ ಭೋಸಲೆ ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ಎರಡ್ಮೂರು ಕಾರ್ಖಾನೆಗಳಲ್ಲಿ ಪಾಲುದಾರರಾಗಿ ನೂರಾರು ಜನ ಬಡವರನ್ನು ಗುರಿತಿಸಿ ಕೆಲಸ ನೀಡಿ ಅವರ ಬಾಳಿಕೆ ಬೆಳಕಾಗಿದ್ದಾರೆ. ತಿಂಗಳಿಗೊಮ್ಮೆಯಾದರೂ ತಮ್ಮ ತವರೂರಿಗೆ ಬಂದು ಬಡ ಜನರ ಸೇವೆ ಮಾಡುತ್ತ ಸಂತಸ ಪಡುವ ಗುಣ ಹೊಂದಿದ್ದಾರೆ. 

ಇತ್ತೀಚೆಗೆ ದಲಿತ ಸಮುದಾಯದ 15-16 ವರ್ಷದ ಹುಡುಗಿಯೊಬ್ಬಳು ಪಾಲಕರೀರ್ವರನ್ನು ಕಳೆದುಕೊಂಡು ಅನಾಥೆಯಾಗಿದ್ದಳು. ಆ ವಿಷಯ ತಿಳಿಯುತ್ತಲೇ ಭೋಸಲೆ ಅವರು ಆ ಹುಡುಗಿಯ ಮನೆಗೆ ದಂಪತಿ ಸಮೇತ ಹೋಗಿ ಆ ಹುಡುಗಿಯ ಶೈಕ್ಷಣಿಕ ವೆಚ್ಚ ಭರಿಸುವುದಲ್ಲದೆ ಪ್ರತೀ ತಿಂಗಳು ಅವಳ ತುತ್ತಿನ ಚೀಲ ತುಂಬಿಕೊಳ್ಳಲು ಅಸರೆಯಗಿದ್ದಾರೆ. 

ಅಲ್ಲದೆ ಕಳೆದ ಒಂದೆರಡು ತಿಂಗಳಿನಿಂದ ಕಾಲು ಕಳೆದುಕೊಂಡ ಬಡವರನ್ನು ಗುರುತಿಸಿ ಅವರಿಗೆ ಕೃತಕ ಕಲು ಜೋಡಣೆ ಮಾಡಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಕೊಮಡಿದ್ದಾರೆ. ಈಗಗಲೆ 4 ಜನರ ಕಾಲಿಗೆ ಕೃತಕ ಕಾಲು ಜೋಡಣೆ ಮಾಡಿಸಿದ್ದಾರೆ. ಇನ್ನೂ 6 ಜನರನ್ನು ಗುರುತಿಸಿದ್ದು ಒಂದು ವಾರದಲ್ಲಿ ಅವರಿಗೂ ಕೃತಕ ಕಾಲು ಜೋಡಣೆಯಾಗಲಿದೆ ಎನ್ನುತ್ತಾರೆ ವಿಜಕುಮಾರ ಭೋಸಲೆ. 

ಬಾಕ್ಸ-1 

ದೇವರು ನಮಗೆ ಅವಶ್ಯವಿರುವಷ್ಟು ಅಂತಸ್ಥು ನೀಡಿದ್ದಾನೆ. ಹೀಗಾಗಿ ಇದ್ದದ್ದರಲ್ಲಿಯೆ ತೃಪ್ತಿಯಾಗಿದ್ದೇವೆ. ಸ್ವಲ್ಪ ದಾನ-ಧರ್ಮ ಮಾಡುತ್ತಿದ್ದೇನೆ. ಬಡವರನ್ನು, ನಿರ್ಗತಿಕರನ್ನು ಗುರುತಿಸಿ ಅವರನ್ನು ಮೇಲಕ್ಕೆತ್ತುವ ಸಣ್ನ ಪ್ರಯತ್ನ ಡುತ್ತಿರುತ್ತೇನೆ. ಇದಕ್ಕೆಲ್ಲ ನನ್ನ ತಂದೆ-ತಾಯಿ ಮತ್ತು ಮಡದಿ ಸಾಥ್ ನೀಡುತ್ತಾರೆ. 

ವಿಜಯಕುಮಾರ ಭೋಸಲೆ. ಸಮಾಜಸೇವಕ, ಭತಗುಣಕಿ 

ಬಾಕ್ಸ-2 

ನಮ್ಮ ಪರಿಸ್ಥಿತಿಯ ಬಗ್ಗೆ ತಾವೇ ತಿಳಿದುಕೊಂಡು ನಮ್ಮನ್ನು ಬೆಂಗಳೂರಿಗೆ ಕರೆಸಿಕೊಂಡು ಕೃತಕ ಕಾಲು ಜೋಡಿಸಿಕೊಟ್ಟಿದ್ದಾರೆ. ಇದರಿಂದ ನನಗೆ ಅಡ್ಡಾಡಲು ಸಹಾಯವಾಗಿದೆ. ದೇವರು ಭೋಸಲೆ ಅವರ ಕುಟುಂಬಕ್ಕೆ ಒಳಿತು ಮಾಡಲೆಂದು ಪ್ರಾರ್ಥಿಸುತ್ತೇನೆ. ರಾಜಾರಾಮ ಪವಾರ, ಮೌಲಸಾಬ ಪಠಾಣ..  ಕೃತಕ ಕಾಲು ಜೋಡಿಸಿಕೊಂಡವರು. 

ಭೋಸಲೆ ಅವರು ಭತಗುಣಕಿ, ಮೈಲಾರ, ಝಳಕಿ, ಅರ್ಜನಾಳ, ಹಿಂಗಣಿ, ಬೂದಿಹಾಳ, ಭೈರುಣಗಿ, ಅಹಿರಸಂಗ, ಬರಗುಡಿ, ಲೋಣಿ, ಲಚ್ಯಾಣ ಗ್ರಾಮ ಸೇರಿ ಒಟ್ಟು 1400 ಜನಕ್ಕೆ ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ. 130 ಜನರಿಗೆ ಕಾರ್ಮಿಕ ಕಾರ್ಡ, 75 ಜನರಿಗೆ ಆರೋಗ್ಯ ಬಂಧು ಕಾರ್ಡ ಮಾಡಿಸಿ ಕೊಟ್ಟಿದ್ದು, ಇವರ ಇಂತಹ ಕಾರ್ಯಗಳು ಮತ್ತೊಬ್ಬರಿಗೆ ಪ್ರೇರಣೆಯಗುತ್ತಿವೆ. 


ಸುದ್ದಿ ಓದಿ