ಅನಾಥ ವೃದ್ಧ ದಂಪತಿಗಳ ಬದುಕಿಗೆ ನೆರವು
ಬೈಲಹೊಂಗಲ 02: ಬೆಳಗಾವಿ ಶಾಹೂನಗರದ ಮಲ್ಲಿಕಾರ್ಜುನ ವೃದ್ಧಾಶ್ರಮದಲ್ಲಿದ್ದ ಅನಾಥ ವೃದ್ಧ ದಂಪತಿಯು ಅನುಭವಿಸುತ್ತಿರುವ ಸಂಕಷ್ಟವನ್ನು ಮನಗಂಡು ಅವರ ನೆರವಿಗೆ ಧಾವಿಸುವುದರ ಮೂಲಕ ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಅವರು ಬಾಡಿಗೆ ಮನೆ, ಸ್ವಂತ ಅಂಗಡಿ ಹಾಕಿಕೊಡುವುದರ ಮೂಲಕ ಮಾದರಿ ಕಾರ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಅನಾಥ ವೃದ್ಧ ದಂಪತಿಗಳಾದ ಬಸವರಾಜ ಮಲಕಾಜಪ್ಪ ಸೋಲಾಪೂರೆ, ಸಾವಿತ್ರಿ ಬಸವರಾಜ ಸೊಲಾಪೂರೆ ಅವರು ಬೆಳಗಾವಿಯ ವೃದ್ಧಾಶ್ರಮದಲ್ಲಿನ ವ್ಯವಸ್ಥೆಯ ಕುರಿತು ಬೇಸರ ವ್ಯಕ್ತಪಡಿಸಿದರು. ವೃದ್ಧಾಶಮ್ರದಲ್ಲಿ ನಿಷ್ಕಾಳಜಿತನ ತೋರುತ್ತಿದ್ದು, ಸರಿಯಾದ ಊಟ, ಚಿಕಿತ್ಸೆ ಸಿಗುತ್ತಿಲ್ಲ. ನಿತ್ಯ ನರಕಯಾತನೆ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಮಾತು ಕೇಳುವವರು ಯಾರೂ ಇಲ್ಲ. ಏನಾದರೂ ಹೇಳಲಿಕ್ಕೆ ಹೋದರೆ ನಮ್ಮ ಮಾತಿಗೆ ಬೆಲೆನೇ ಇಲ್ಲ. ಇದರಿಂದ ನೊಂದು ವೃದ್ಧ ದಂಪತಿ ಬೈಲಹೊಂಗಲಕ್ಕೆ ಬಂದಿದ್ದಾರೆ. ಇದನ್ನು ಮನಗಂಡು ಸಮಾಜ ಸೇವಕ ರಫೀಕ ಬಡೇಘರ ಅವರು ಅವರಿಗೆ ಬಾಡಿಗೆ ಕೊಡಿಸಿ, ಸ್ವಂತ ಹಣ್ಣಿನ, ಹೂವಿನ ಅಂಗಡಿ ಹಾಕಿ ಅವರಿಗೆ ಜೀವನೋಪಾಯಕ್ಕೆ ನೆರವಾಗಿದ್ದಾರೆ. ವ್ಯಾಪಾರಕ್ಕಾಗಿ ಅಂಗಡಿಯ ಮುಂದೆ ಬ್ಯಾನರ್ ಹಾಕಿದ್ದು, ಸಾರ್ವಜನಿಕರಲ್ಲಿ ವೃದ್ಧ ದಂಪತಿಯ ಮನವಿ. ನಾವು ಅನಾಥರಿದ್ದು ತಾವುಗಳು ನಮ್ಮ ಅಂಗಡಿಯಲ್ಲಿ ಹೂವು. ಹಣ್ಣು-ಹಂಪಲ ಖರೀದಿ ಮಾಡಿ, ನಮಗೆ ಸಹಾಯ ಮಾಡಿರಿ ಎನ್ನುವ ಬ್ಯಾನರ್ ಹಾಕಿಕೊಂಡು ವ್ಯಾಪಾರ-ವಹಿವಾಟ ನಡೆಸಿದ್ದಾರೆ.
ವೈದ್ಯ ಸಾಹಿತಿ ಡಾ.ಎಸ್.ಎಸ್.ದೇವಲಾಪೂರ ಅವರು ಅನಾಥ ವೃದ್ಧ ದಂಪತಿಯ ಚಿಕಿತ್ಸೆಯನ್ನು ಉಚಿತವಾಗಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ್ದಾರೆ.
ಬಾಕ್ಸ ಐಟಂ :
ವೃದ್ಧಾಶ್ರಮಗಳಲ್ಲಿ ಅನಾಥರಿಗೆ, ಬುದ್ಧಿಮಾಂದ್ಯರಿಗೆ, ಅಂಗವಿಕಲರಿಗೆ ಸರಿಯಾದ ಉಪಚಾರ, ಕಾಳಜಿ ಮಾಡದೆ ಅಮಾನವೀಯ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಅಧಿಕಾರಗಳ ದಿವ್ಯ ನಿರ್ಲಕ್ಷತನದಿಂದ ಅನಾಥರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ, ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಂಗವೀಕಲರ ಇಲಾಖೆಗೆ ಸರಕಾರ ಕೋಟ್ಯಾಂತರ ರೂ.ಹಣ ಖುರ್ಚು ಮಾಡುತ್ತಿರುವುದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದರು. ಅನಾಥರಿಗೆ ಸರಿಯಾದ ಊಟ, ಚಿಕಿತ್ಸೆ, ವಸತಿ ನೀಡದಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಿ ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಬೇಕು.
-ರಫೀಕ ಬಡೇಘರ,
ಸಾಮಾಜಿಕ ಕಾರ್ಯಕರ್ತರು, ಬೈಲಹೊಂಗಲ
ಬಾಕ್ಸ ಐಟಂ :
ನಾವು ಅನಾಥ ದಂಪತಿಗಳು ನಮ್ಗೆ ಯಾರೂ ದಿಕ್ಕಿಲ್ಲ. ವೃದ್ಧಾಶ್ರಮಗಳಲ್ಲಿ ನಮ್ಮನ್ನು ಕೀಳಾಗಿ ಕಾಣುತ್ತಾರೆ. ಸರಿಯಾದ ಊಟ, ವಸತಿ, ಚಿಕಿತ್ಸೆ ನೀಡದೆ ನಾಯಿಗಿಂತ ಕಡೆಯಾಗಿ ನೋಡ್ತಾರೆ. ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಅವರು ನಮ್ಗೆ ಬಾಡಿಗೆ ಮನೆ ಕೊಡಿಸಿ, ಜೀವನೋಪಾಯಕ್ಕೆ ಹಣ್ಣಿನ ಹಾಗೂ ಹೂವಿನ ಅಂಗಡಿ ಹಾಕಿಕೊಟ್ಟು ಸಮಾಜದಲ್ಲಿ ಬದುಕಲು ಹೇಳಿಕೊಟ್ಟಿದ್ದಾರೆ. ನಮ್ಮೆಲ್ಲ ಕಷ್ಟಗಳಿಗೆ ಬೆನ್ನೆಲುಬಾಗಿ ನಿಲುವೆ ಎಂದು ಹೇಳಿದ್ದರಿಂದ ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ.
-ಬಸವರಾಜ ಸೋಲಾಪೂರೆ
ಅನಾಥ ವೃದ್ಧ