ಅರಸು ಬಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದವರು: ಕೌಜಲಗಿ
ಬೈಲಹೊಂಗಲ 23: ಸಾಮಾಜಿಕ ಸಮಾನತೆ ಹಿತದೃಷ್ಟಿಯಿಂದ ಕಡುಬಡವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿ ಬಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದವರು ದಿ. ಡಿ.ದೇವರಾಜ ಅರಸು ಅವರು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಭಾನುವಾರ ಬಾಯಪಾಸ ರಸ್ತೆಯ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ದಿ.ಡಿ.ದೇವರಾಜ ಅರಸುರವರ 108 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ. ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದವರ ಧ್ವನಿಯಾಗಿದ್ದರು. ಎಲ್ಲರಿಗೂ ಸಮಬಾಳು ಸಮಪಾಲು ನೀಡುವುದು ಅವರ ಆಶಯವಾಗಿತ್ತು. ಅರಸುರವರು ಭೂ ಕಂದಾಯ ಅಧಿನಿಯಮವನ್ನು ಸಹ ಜಾರಿಗೆ ತಂದರು. ಊಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿ, ಭೂಮಿಯನ್ನು ಬಡವರಿಗೆ ಹಂಚಿ ಸಾಮಾಜಿಕ ನ್ಯಾಯ ಒದಗಿಸಿದರಲ್ಲದೇ ಸೂರು ಇಲ್ಲದವರಿಗೆ ಸೂರು ಒದಗಿಸಿದರು. ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಮತ್ತು ಹಿಂದುಳಿದ ವರ್ಗಗಳ ನಿರ್ದೇಶನಾಲಯ ಸಹ ಜಾರಿಗೆ ತಂದರು ಎಂದರು.
ಕೆ.ಆರಿ್ಸ.ಇ.ಎಸ್.ಮಹಾವಿದ್ಯಾಲಯದ ಪ್ರೋ.ಬಿ.ಎಸ್.ಮುದೆನ್ನವರ ಉಪನ್ಯಾಸ ನೀಡಿದರು.
ತಹಸೀಲ್ದಾರ ಸಚ್ಚಿದಾನಂದ ಕುಚನೂರ, ತಾಪಂ.ಇಓ ಸುಭಾಸ ಸಂಪಗಾಂವಿ, ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಾಂತಾ ಮರಿಗೌಡರ , ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಕಲಾವತಿ ದೇಶನೂರ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ರುದ್ರ್ಪ ನಿಂಗನ್ನವರ, ಬಸವರಾಜ ಭರಮನ್ನವರ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸತ್ಕರಿಸಲಾಯಿತು.
ಸುರೇಶ ಕೋಟಗಿ, ಪವನ ಬೋಳೆತ್ತಿನ, ಡಿ ಪಿ ಹಜೇರಿ, ಎನ್ ಎಸ್ ಸಾಬಣ್ಣವರ, ಸಹದೇವ್ ಸುಂಕದ, ಕೆ ಪಿ ಹಿರೇಮಠ್, ಜಿ ಪಿ ಮುದುಕನಗೌಡ್ರ, ಎಮ್ ವಾಯ ಕರಿಸಿರಿ ಎಸ್ ಎ ಗರಗ, ಲಲಿತಾ ಗೊರಗುದ್ದಿ, ಎ ಎಸ್ ಹಿರೇಮಠ್, ವಿಠ್ಠಲ ತಲ್ಲೂರ, ವಿವಿಧ ಸಂಘಟನೆಗಳ ಮುಖಂಡರು, ದಿ. ದೇವರಾಜ್ ಅರಸು ಅಭಿಮಾನಿ ಬಳಗ ಇದ್ದರು.
ಇದಕ್ಕೂ ಮೊದಲು ಪಟ್ಟಣದ ಪುರಸಭೆ ಆವರಣದಲ್ಲಿ ದಿ.ದೇವರಾಜ ಅರಸುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು. ವಿವಿಧ ವಾದ್ಯಮೇಳಗಳು, ಕಲಾತಂಡಗಳು ಕಳೆತಂದವು. ಮೆರವಣಿಗೆ ಬೆಳಗಾವಿ ರಸ್ತೆ , ಎಪಿಎಂಸಿ, ಬಾಯಪಾಸ್ ಮಾರ್ಗವಾಗಿ ಸಮಾರಂಭ ವೇದಿಕೆಗೆ ತಲುಪಿತು. ನಂತರ ವಸತಿ ನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.