ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
ಬೈಲಹೊಂಗಲ: ಪಟ್ಟಣದ ಪ್ರಭುನಗರದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಅ.31 ರಿಂದ ಸೆ.1 ರವರೆಗೆ ಎರಡು ದಿನಗಳ ಕಾಲ ಬ್ರಾಹ್ಮಣ ಸಂಘ ಹಾಗೂ ಮಹಿಳಾ ಭಜನಾ ಮಂಡಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಜರುಗಲಿದೆ.
ರಾಘವೇಂದ್ರ ಸ್ವಾಮಿಗಳಿಗೆ ಕಾಕಡಾರತಿ, ಅಲಂಕಾರ ಪೂಜೆ, ಅಷ್ಟೋತ್ತರ, ಮಹಾಮಂಗಳಾರತಿ, ಕುಂಕುಮಾರ್ಚನೆ, ಆರತಿ ನೈವೇದ್ಯ ಪಾಲಕಿ ಸೇವೆಗಳು ಜರುಗಲಿವೆ ಎಂದು ರಾಘವೇಂದ್ರ ಟ್ರಸ್ಟ ಕಮಿಟಿ ಅಧ್ಯಕ್ಷ ಡಿ.ಎ.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ