ರೈತರಿಗೆ ದಿನನಿತ್ಯ 7 ತಾಸು ವಿದ್ಯುತ್ ನೀಡುವಂತೆ ಒತ್ತಾಯ
ಬಳ್ಳಾರಿ 25: ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರೈತರ ವತಿಯಿಂದ ದಿ.25 ರಂದು ಕಾರ್ಯನಿರ್ವಾಹಕ ಅಭಿಯಂತರ ಕಚೇರಿ, ಕಾರ್ಯ ಪಾಲನೆ ವಿಭಾಗ ಬಳ್ಳಾರಿ ಇವರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿಯವರು ಮಾತನಾಡುತ್ತಾ ಕಳೆದ ವರ್ಷ ಅಂದರೆ 2020-21ನೇ ಸಾಲಿನಲ್ಲಿ ಹಿಂದಿನ ಸರ್ಕಾರವು ರೈತರಿಗೆ 7 ತಾಸು ವಿದ್ಯುತ್ ಪೂರೈಸುತ್ತಿತ್ತು. ಆದರೆ ಪ್ರಸ್ತುತ ವರ್ಷದಲ್ಲಿ ಈ ದಿನಮಾನಗಳಲ್ಲಿ ಇಂದಿನ ಸರ್ಕಾರವು ಕೇವಲ 5 ತಾಸು ಮಾತ್ರವೇ ವಿದ್ಯುತ್ ಪೂರೈಸುತ್ತಿದ್ದು, ಪಂಪ್ ಸೆಟ್ ಗಳ ಮೂಲಕ ರೈತರುಗಳ ವಿವಿಧ ಬೆಳೆಗಳಿಗೆ, ತೋಟ ಹಾಗೂ ಇತರೆ ಬೆಳೆಗಳಿಗೆ ನೀರು ಸಾಕಾಗುತ್ತಿಲ್ಲ. ಆದ್ದರಿಂದ ವಿದ್ಯುತ್ನ್ನು ಪ್ರತೀ ದಿನ 7 ತಾಸು ನೀಡಿದರೆ ಮಾತ್ರ ಎಲ್ಲಾ ರೈತರ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ನಂತರ ಎಲ್ಲಾ ಅಧಿಕಾರಿಗಳು, ಈ ವಿಚಾರವನ್ನು ಸೂಕ್ತ ತನಿಖೆ ನಡೆಸಿ ವಿದ್ಯುತ್ ಪೂರೈಸುವಂತೆ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದಷ್ಟು ಬೇಗನ ಒಂದು ದಿನಕ್ಕೆ 7 ತಾಸು ವಿದ್ಯುತ್ ಪೂರೈಸುವಂತೆ ನೀಡಬೇಕು, ಹಾಗೂ ರೈತರ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಬಳ್ಳಾರಿ ಜಿಲ್ಲಾ ಘಟಕದವತಿಯಿಂದ ಒತ್ತಾಯಿಸುತ್ತೇವೆ ಎಂದು ತಿಳಿಸಿದರು. ಒಂದು ವೇಳೆ ಈ ವಿಷಯವನ್ನು ತಾವುಗಳು ನಿರ್ಲಕ್ಷವಹಿಸಿ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ರೈತರು ಎಲ್ಲರೂ ಸೇರಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸುತ್ತಿದ್ದೇವೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ, ತಿಮ್ಮಪ್ಪ, ಎರಿಸ್ವಾಮಿ, ಸಂಘದ ಸದಸ್ಯರು ರೈತ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.