ಬೈಲಹೊಂಗಲ

ಸಂಗೊಳ್ಳಿ ಹೆಸರಿನಲ್ಲೇ ಜಿಪಂ ಕ್ಷೇತ್ರವನ್ನು ಮುಂದುವರೆಸುವಂತೆ ಮನವಿ

ಸಂಗೊಳ್ಳಿ ಹೆಸರಿನಲ್ಲೇ ಜಿಪಂ ಕ್ಷೇತ್ರವನ್ನು ಮುಂದುವರೆಸುವಂತೆ ಮನವಿ
ಸಂಗೊಳ್ಳಿ ಗ್ರಾಮದ ಹೆಸರಿನ ಜಿಪಂ ಕ್ಷೇತ್ರವನ್ನು ಮುಂದುವರೆಸುವಂತೆ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಲಾ

ಬೈಲಹೊಂಗಲ 19:  ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಗ್ರಾಮದ ಹೆಸರಿನ ಜಿಪಂ ಕ್ಷೇತ್ರವನ್ನು ದೇವಲಾಪೂರ ಎಂದು ಬದಲಾಯಿಸಿದನ್ನು ಕೈಬಿಟ್ಟು ಸಂಗೊಳ್ಳಿ ಜಿಪಂ ವನ್ನಾಗಿ ಮುಂದುವರೆಸಿ ಕೊಂಡು ಹೋಗಬೇಕೆಂದು ಗ್ರಾಮಸ್ಥರು ಪ್ರತಿಭಟಿಸಿ, ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.

ಸಂಗೊಳ್ಳಿ ರಾಯಣ್ಣನ ಹೆಸರು ಅಜರಾಮರವಾಗಿರಲು ರಾಯಣ್ಣನ ಹುಟ್ಟೂರು ಹೆಸರಿನಲ್ಲಿ ಜಿಪಂ ಕ್ಷೇತ್ರ ಇರುವದು ಅವಶ್ಯವಾಗಿದೆ. ಕ್ಷೇತ್ರದ ಕೇಂದ್ರ ಸ್ಥಾನವಾಗಿರುವ ಇದನ್ನು ಬದಲಿಸಿ ಹೆಚ್ಚಿನ ಜನಸಂಖ್ಯೆ ಇರುವ ದೇವಲಾಪೂರ ಗ್ರಾಮವನ್ನು ಜಿಪಂ ಕ್ಷೇತ್ರವನ್ನಾಗಿಸಿದ್ದು ಸಮರ್ಪಕವಲ್ಲ ಕೂಡಲೇ ಅದನ್ನು ಬದಲಿಸಿ ಮೊದಲಿನಂತೆ ಮುಂದುವರೆಸಿಕೊಂಡು ಹೋಗಲು ಮನವಿ ಮೂಲಕ ಒತ್ತಾಯಿಸಿದರು.

ಗ್ರಾಪಂ ಮನವಿ-ಈ ಮೊದಲಿನಂತೆ ಸಂಗೊಳ್ಳಿ ಗ್ರಾಮದ ಹೆಸರಿನಲ್ಲೆ ಜಿಪಂ ಕ್ಷೇತ್ರವನ್ನು ಮುಂದುವರೆಸಿಕೊಂಡು ಹೋಗುವಂತೆ ಒತ್ತಾಯಿಸಿ ಗ್ರಾಪಂ ಸದಸ್ಯರು ಎಸಿ ಅವರಿಗೆ ಮನವಿ ಸಲ್ಲಿಸಿದರು.

ಜಿಪಂ ಸದಸ್ಯ ಶಂಕರ ಮಾಡಲಗಿ, ಗ್ರಾಪಂ ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನವರ, ಶಿವಕುಮಾರ ಪುಂಡಲೀಕ, ಈರಣ್ಣ ಹಳೇಮನಿ, ದೀಪಾ ಬಡವನ್ನವರ, ರೂಪಾ ಚಚಡಿ, ಗಂಗವ್ವ ಹೊಳೆಪ್ಪನವರ, ಮಂಗಳಾ ಕುಡೊಳ್ಳಿ, ನ್ಯಾಯವಾದಿ ಉಮೇಶ ಲಾಳ, ಬಸವರಾಜ ಬಡವನ್ನವರ, ಚನ್ನಪ್ಪ ಹಕ್ಕಿ, ಮಲ್ಲಿಕಾರ್ಜುನ ಕುಡೊಳ್ಳಿ, ಭೀಮಪ್ಪ ಆನಿಗೋಳ, ಮಲ್ಲಿಕಾರ್ಜುನ ಚನ್ನಕ್ಕನವರ, ಸುರೇಶ ಚಚಡಿ, ಆಕಾಶ ಮಾಲಬನ್ನವರ, ಸಂಪ್ರೀತ ತಿಗಡಿ ಮುಂತಾದವರು ಇದ್ದರು.


ಸುದ್ದಿ ಓದಿ