ವಿವಿಧ ರೈತರ ಬೇಡಿಕೆ ಈಡೇರಿಸಲು ಒತ್ತಾಯಿಸಿ 22ರಂದು ಸಿಎಂಗೆ ಮನವಿ
ಲೋಕದರ್ಶನ ವರದಿ
ಬೈಲಹೊಂಗಲ 12: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು, ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಚರ್ಮಗಂಟು ರೋಗ ಬಂದು ಸಾವನ್ನಪ್ಪಿದ ಜಾನುವಾರುಗಳ ಪರಿಹಾರ ಮೊತ್ತ ಹೆಚ್ಚಿಸಬೇಕು ವಿವಿಧ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಡಿ.22 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗವುದು ಎಂದು ಸ್ವಾಭಿಮಾನಿ ರಾಜ್ಯ ರೈತ ಸಂಘ ಕರ್ನಾಟಕದ ರಾಜ್ಯಾಧ್ಯಕ್ಷ ಶೀವನಸಿಂಗ ಮೊಖಾಶಿ ಹೇಳಿದರು.
ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತೀವೃಷ್ಟಿ, ಚರ್ಮಗಂಟು ರೋಗ ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಇಲ್ಲದಿರುವುದು ಇದರಿಂದ ರೈತರು ಸಂಪೂರ್ಣವಾಗಿ ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ಗಾದೆಯಂತೆ ಗುಜರಾತ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಕಬ್ಬಿಗೆ ರೂ.4400 ಬೆಲೆ ನಿಗದಿಗೊಳಿಸಿವೆ. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಹೋರಾಟ ಮಾಡುವ ರೈತರಿಗೆ 2500 ನಿಗದಿಗೊಳಿಸಿದೆ ಈ ತಾರತಮ್ಯ ನೀತಿ ಎಕೆ, ರೈತರ ಗೊಬ್ಬರ, ಬೀಜದ ದರಗಳು ಗಗನಕ್ಕೇರಿದ್ದು ಅವನು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಒಂದು ಕ್ವೀಂಟಲ್ ಸೋಯಾಬಿನ್ ಗೆ ರೂ. 9000 ಸಾವಿರ ಇದ್ದ ಬೆಲೆ ಇಂದು 5400 ಆಗಿದೆ. ಅದೇ ರೀತಿ ಗೋವಿನಜೋಳ ಅನೇಕ ಬೆಳೆಗಳ ಬೆಲೆ ನೆಲಕಚ್ಚಿವೆ. ಸರ್ಕಾರ ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದರು.
ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ, ಸಲಹಾ ಸಮಿತಿ ಅಧ್ಯಕ್ಷ ಎಂ. ವೈ. ಸೋಮನ್ನವರ ಮಾತನಾಡಿ, ಚರ್ಮಗಂಟು ರೋಗ ಬಂದು ಜಾನುವಾರುಗಳು ಅಸುನಿಗುತ್ತಿದ್ದು ಸಕರ್ಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಸುಮಾರು 2000 ಹೆಚ್ಚು ಜಾನುವಾರುಗಳು ಅಸುನಿಗಿದ್ದು ಕೇವಲ 100 ಜಾನುವಾರುಗಳಿಗೆ ಪರಿಹಾರ ಬಂದಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದರು. ಸರ್ಕಾರ ಮಲತಾಯಿ ಧೋರಣೆ ತೋರದೆ ರೈತರ ಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಡಿ.22 ರಂದು ಅಧೀವೇಶನದಲ್ಲಿ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಲಾಗವುದು ಎಂದರು.
ರೈತ ಮುಖಂಡರಾದ ಮಲ್ಲಿಕಾರ್ಜುನ ಕೊಡೊಳ್ಳಿ , ದ್ಯಾಮಣ್ಣ ಹುದಲಿ, ಲಕ್ಷ್ಮಣ ಕಿಲಾರಿ, ಬಸಮ್ಮ ಕಾದ್ರೊಳ್ಳಿ, ಈರಣ್ಣ ಗುಮ್ಮಗೋಳ, ಅಶೋಕ ಕಳಸಣ್ಣವರ, ಉಮೇಶ ಕಾದ್ರೊಳ್ಳಿ , ಅಡಿವೆಪ್ಪ ಕೋಟೂರ, ಮಲ್ಲಪ್ಪ ಪಣತಿ, ಯಲ್ಲಪ್ಪ ಕರಬನ್ನವರ, ಬಾಬುಸಾಬ ಖುದ್ದುನವರ, ಗಂಗಮ್ಮ ಪಾಟೀಲ, ಲಕ್ಷ್ಮಣ ಗೊರಗುದ್ದಿ, ಮುನೇಪ್ಪ ಕುಲ್ಲೊಳ್ಳಿ ಹಾಗೂ ನೂರಾರು ರೈತರು ಇದ್ದರು