ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹರಳಯ್ಯ ಕಾಲೋನಿ ನಿವಾಸಿಗಳಿಂದ ಮನವಿ
ಬೈಲಹೊಂಗಲ 21: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿಗಳು, ಕರ್ನಾಟಕ ಅಂಬೇಡ್ಕರ ಯುವ ಸೇನೆ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಅಂಬೇಡ್ಕರ ಯುವ ಸೇನೆ ರಾಜ್ಯಾಧ್ಯಕ್ಷ ಮಾತನಾಡಿ, ಪಟ್ಟಣದ ಹರಳಯ್ಯ ಕಾಲೋನಿಯಲ್ಲಿ ಸುಮಾರು 40 ವರ್ಷಗಳಿಂದ ವಾಸವಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿಲ್ಲ. ಕಾಲೋನಿಯ ಉದ್ಯಾನವನ ಅಭಿವೃದ್ಧಿಗೊಳಿಸಬೇಕು, ಪಟ್ಟಣದಲ್ಲೆಡೆ ಒಳಚರಂಡಿ ಕಾಮಗಾರಿ, 24*7 ಕುಡಿಯುವ ನೀರಿನ ಕಾಮಗಾರಿ ನಡೆದಿದೆ. ಹರಳಯ್ಯ ಕಾಲೋನಿಯಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂದು ಆರೋಪಿಸಿದರು. ಮುಖ್ಯ ರಸ್ತೆಯ ಕಾಲುವೆ ಮೇಲೆ ಸ್ಲಾಬ್ ಹಾಕಿ ಎಂದು ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ , ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಪವಿಭಾಗಾಧಿಕಾರಿ ಕಚೇರಿ ಎದುರು ನಿರಂತರ ಹೋರಾಟ ಮಾಡಲಾಗುವುದು ಎಂದರು.
ಮಾರುತಿ ಕೊಂಡೂರ, ರಾಮು ಕಳಮಕರ, ಸುನೀಲ ಹಲಗಿ, ಗಂಗಪ್ಪ ರಾಯಬಾಗ, ರಫೀಕ್ ಅನ್ಸಾರಿ, ಗೊರೆಸಾಬ ಮುಜಾವರ, ವಿನೋದ ಸವದತ್ತಿ, ಅರ್ಜುನ ರಾಯಬಾಗ, ಉಮೇಶ ದೊಡಮನಿ, ಸುರೇಶ ಅಗಾಸಿ, ಈರಣ್ಣ ರಾಯಬಾಗ, ರಿಯಾಜ ಅನ್ಸಾರಿ, ಮಂಜುನಾಥ ರಾಯಬಾಗ, ಅರ್ಜುನ ಕೆಳಗೇರಿ, ನಾರಾಯಣ. ಕಳಂಕರ, ಖುರ್ಷಿದಭಾನು ಸಯ್ಯದ, ಮಂಜು ಚಿಕ್ಕಣ್ಣವರ, ಕುಮಾರ ಅಗಾಸಿ, ಬಸವರಾಜ ಕಿತ್ತೂರು, ರಾಜೇಶ ತೋರಗಲ, ಮಲ್ಲವ್ವ ಭಜಂತ್ರಿಪುಷ್ಕರ ಪಟೇಲ, ಸಾಧಿಕ ಸಂಗೊಳ್ಳಿ,. ಮಲ್ಲವ್ವ ಭಜಂತ್ರಿ, ಮಾಬುಬಿ ಸಯ್ಯದ ಹಾಗೂ ಅಂಬೇಡ್ಕರ ಯುವ ಸೇನೆಯ ಕಾರ್ಯಕರ್ತರು ಇದ್ದರು.