ಬೈಲಹೊಂಗಲ

ಗ್ರಾಮಗಳ ಜನರಿಗೆ ಉತ್ತಮ ಸೇವಾ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮನವಿ

ಗ್ರಾಮಗಳ ಜನರಿಗೆ ಉತ್ತಮ ಸೇವಾ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ   ಮನವಿ

  ಬೈಲಹೊಂಗಲ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಿಂದ ದೊಡವಾಡ, ನನಗುಂಡಿಕೊಪ್ಪ, ಗುಡಿಕಟ್ಟಿ, ಚಿಕ್ಕಬೆಳ್ಳಿಕಟ್ಟಿ, ಗೋವನಕೊಪ್ಪ ಗ್ರಾಮಗಳ ಜನರಿಗೆ ಉತ್ತಮ ಸೇವಾ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸೋಮವಾರ ಬ್ಯಾಂಕಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ದೊಡವಾಡ ಠಾಣೆ ಪಿಎಸ್‌ಐ ನಂದೀಶ ಅವರ ಮಧ್ಯಸ್ಥಿಕೆಯಲ್ಲಿ ಕೆವಿಜಿ ಬ್ಯಾಂಕ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರ ಸಭೆ ನಡೆಸಲಾಯಿತು. ಬ್ಯಾಂಕನ ಪ್ರಧಾನ ಶಾಖಾಧಿಕಾರಿ ಆರ್.ಕೆ.ಪ್ರಭಾಸ್‌ರವರ ಮೂಲಕ ಧಾರವಾಡ ಪ್ರಧಾನ ಕಛೇರಿಯ ಪ್ರಾದೇಶಿಕ ವ್ಯವಸ್ಥಾಪಕರಿಗೆ ಮನವಿ ನೀಡಿ ಬ್ಯಾಂಕಿನಲ್ಲಾಗುತ್ತಿರುವ ಸಮಸ್ಯೆಗಳನ್ನು ಆದಷ್ಟು ಶೀಘ್ರ ಪರಿಹರಿಸಿ ಉತ್ತಮ ಸೇವೆ ಒದಗಿಸಲು ವಿನಂತಿಸಲಾಯಿತು. ಬ್ಯಾಂಕಿನಲ್ಲಿ ಈಗಾಗಲೇ ಆಧಾರ ಕಾರ್ಡ ಜತೆಗೆ ಬ್ಯಾಂಕ ಖಾತೆ ಜತೆ ಲಿಂಕ್ ವ್ಯವಸ್ಥೆ ಬೇಗ ಮಾಡಿಕೊಡಬೇಕು. ಬ್ಯಾಂಕಿಗೆ ಜಮೆ ಆದ ಹಣವು ಗ್ರಾಹಕರಿಗೆ ಬೇಗ ಹಣ ಸಿಗುವಂತಾಗಬೇಕು. ಶಾಖೆಯಲ್ಲಿ ಎಟಿಎಮ್ ಪಾಯಿಂಟ್ ಮತ್ತು ಪಾಸ್ ಬುಕ್ ಎಂಟ್ರಿ ಮಶಿನ್ ಶೀಘ್ರ ವ್ಯವಸ್ಥೆ ಮಾಡಬೇಕು. ಹೊಸ ಖಾತೆ ಮತ್ತು ಪಾಸ್‌ಬುಕ್ ವಿತರಣೆ ಒಂದೇ ದಿನದಲ್ಲಿ ಆಗಬೇಕು ಮತ್ತು ಹೆಚ್ಚಿನ ಸಿಬ್ಬಂದಿ ಒದಗಿಸಿ ಬ್ಯಾಂಕಿನ ಕೆಲಸಗಳು ತುರ್ತು ಆಗುವಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಗ್ರಾಮದ ಪ್ರಮುಖರಾದ ನಿಂಗಪ್ಪ ಚೌಡಣ್ಣವರ, ರವಿ ಅಕ್ಕಿ, ಮಡಿವಾಳಪ್ಪ ಹತ್ತಿಕಟಗಿ, ರಾಮನಿಂಗ ಮೀಸಿ, ಮಡಿವಾಳಪ್ಪ ಅಕ್ಕಿ, ಶಿವನಪ್ಪ ಚೌಡಣ್ಣವರ, ಗಂಗಾಧರ ಕರಿಸೀರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ