ಬೈಲಹೊಂಗಲದಲ್ಲಿ ಎಲ್ ಐ ಸಿ ಪ್ರತಿನಿಧಿಗಳ ಜೀವನ ದೀಪ ಸಂಘಟನೆಯ ವಾರ್ಷಿಕ ಮಹಾಸಭೆ
ಬೈಲಹೊಂಗಲ 23: ಎಲ್ಐಸಿ ವಿಮೆ ಸೌಲಭ್ಯವು ಬದುಕಿನ ಅನಿರೀಕ್ಷಿತ ಅವಘಡಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.ಪ್ರತಿಯೊಬ್ಬರೂ ವಿಮೆ ಪಡೆದು ಭಾವಿ ಜೀವನಕ್ಕೆ ಸುರಕ್ಷತೆ ಮತ್ತು ಭದ್ರತೆ ಒದಗಿಸಿಕೊಳ್ಳಬೇಕು ಎಲ್ ಐ ಸಿ ಬೆಳಗಾವಿ ಮಾರುಕಟ್ಟೆ ಪ್ರಭಂದಕ ಮನೋಜ ಮ್ಯಾಥು ಹೇಳಿದರು.
ಅವರು ಪಟ್ಟಣದ ಹೊಸೂರ ರಸ್ತೆಯ ಭಾರತೀಯ ಜೀವ ವಿಮಾ ಕಚೇರಿಯಲ್ಲಿ ಬುಧವಾರ ಜೀವನ ದೀಪ ಪ್ರತಿನಿಧಿಗಳ ವಾಷರ್ಿಕ ಮಹಾಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಐಸಿ ವಿಮೆ ವ್ಯಕ್ತಿಯ ನಿಧನದ ನಂತರ ಮತ್ತು ಜೀವತಾವಧಿಯಲ್ಲಿ ಕುಟುಂಬದ ಸದಸ್ಯರಿಗೆ ಆಧಾರ ಸ್ಥಂಭವಾಗಿದೆ.ವಿಮೆ ವಹಿವಾಟಿನಲ್ಲಿ ಹಣ ತೊಡಗಿಸಿದರೆ ದೀಘರ್ಾವಧಿಯ ಉಳಿತಾಯ ಸಾಧ್ಯವಾಗುತ್ತದೆ ಎಂದರು. ಶಾಖಾ ವ್ಯವಸ್ಥಾಪಕ ಸಚೀನ ಕುಲಕಣರ್ಿ ಮಾತನಾಡಿ , ವಿಮಾ ಪ್ರತಿನಿಧಿಗಳು ನಿರಂತರ ಪ್ರಯತ್ನ, ನಿದರ್ಿಷ್ಠ ಗುರಿ ಹಾಗೂ ಛಲದೊಂದಿಗೆ ಪರಿಶ್ರಮಿಸಿ ಅಲ್ಪಾವಧಿಯಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕು ಎಂದರು. ಅಭಿವೃದ್ದಿ ಅಧಿಕಾರಿ ಸಂಜಯ ಮಹಾಲೆ ಅವರು ಎಲ್ಐಸಿ ವಿಮಾ ನಿಗಮವು ನಡೆದು ಬಂದ ದಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಪಾಲಿಸಿ ನೀಡಿದ ಪ್ರತಿನಿಧಿಗಳನ್ನು ಸತ್ಕರಿಸಲಾಯಿತು. ಪ್ರತಿನಿಧಿಗಳಾದ ಬಿ ಎಸ್ ಕಿವಡಸನ್ನ ವರ, ಶಂಕರ ಮಾಡಲಗಿ, ಸಿದ್ದಣ್ಣ ಗದಗ, ವೀರುಪಾಕ್ಷಪ್ಪ ಅಂಗಡಿ, ಎಂ ಆರ್ ಮೆಳವಂಕಿ, ಉಮೇಶ ಟೋನ್ನಿ, ಪಿ ಆರ್ ಗಾಣಗಿ ನಾಗರತ್ಮ ಅಂಬರಶೆಟ್ಟಿ, ಅನೇಕರು ಇದ್ದರು.