ಇಂಡಿ

ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ವರ್ಷಾಚರಣೆ: ಬಿರಾದಾರ

ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ವರ್ಷಾಚರಣೆ: ಬಿರಾದಾರ

ಇಂಡಿ08:  ಕೂಡಲಸಂಗಮದಲ್ಲಿ ಜರುಗುವ ಪಂಚಮಸಾಲಿ ಸಮಾಜದ ಮೀಸಲಾತಿ ವರ್ಷಾಚರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆ ಇಂಡಿ ತಾಲ್ಲೂಕಿನಿಂದ 3 ಸಾವಿರ ಜನರು ಸೇರುವ ವಿಶ್ವಾಸವಿದೆ ಎಂದು ಪಂಚಮಸಾಲಿ ಸಮಾಜದ ಇಂಡಿ ತಾಲೂಕಾ ಅಧ್ಯಕ್ಷ ವಿ.ಹೆಚ್‌. ಬಿರಾದಾರ ಹೇಳಿದರು. 

ಅವರು ಶುಕ್ರವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಸಮಾಜದ ಒಳಿತಿಗಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಲಿ ಎಂಬ ಸದಾಶಯದಿಂದ ಕಳೆದ ಒಂದು ವರ್ಷದ ಹಿಂದೆ ಜ.14 2021 ರಂದು ಮೀಸಲಾತಿಗಾಗಿ ಪಾದಯಾತ್ರೆ ಪ್ರಾರಂಭ ಮಾಡಿದ್ದರು. ಸುಮಾರು 712 ಕಿ.ಮೀ ನಮ್ಮ ಸಮಾಜದ ಒಳಿತಿಗಾಗಿ ಶ್ರೀಗಳು ಹಾಗೂ ಸಮಾಜದ ಹಿತ ಚಿಂತಕರು ಪಾದಯಾತ್ರೆ ಮಾಡಿದ್ದಾರೆ. ಇಂದು ಆ ಪಾದಯಾತ್ರೆ 1 ವರ್ಷ ಪೂರೈಸಿದ್ದು ಅದರ ಸವಿನೆನಪು ಮತ್ತು ಮತ್ತೆ- ಸರಕಾರಕ್ಕೆ ಎಚ್ಚರಿಕೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. 

ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಪಂಚಮಸಾಲಿ ಸಮಾಜದ ಕಾರ್ಯದರ್ಶಿ ಶಿವಾನಂದ ಚಾಳೀಕಾರ ಮಾತನಾಡಿ ಶ್ರೀಗಳು ಹಾಗೂ ಅನೇಕ ರಾಜಕೀಯ ಮುಖಂಡರು ನಮ್ಮ ಸಮಾಜದ ಬಡ ಜನರಿಗೆ ನ್ಯಾಯ ದೊರಕಿಸಲು ಹೋರಾಟ ಮಾಡುತ್ತಿದ್ದು ಸಮಾಜ ಬಾಂಧವರು ಅವರ ಬೆನ್ನಹಿಂದೆ ಇರಬೇಕಿದೆ. ಆ ನಿಟ್ಟಿನಲ್ಲಿ ಜ.14 2022 ರಂದು ಕೂಡಲ ಸಂಗಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿಯೇ ನಮ್ಮ ತಾಲೂಕಿನ ಜನ ಹೆಚ್ಚಾಗಿ ಸೇರೋಣ ಪ್ರತೀ ಮನೆ-ಮನೆಗೆ ಒಬ್ಬೊಬ್ಬರು ಕೂಡಲ ಸಂಗಮಕ್ಕೆ ಹೋಗುವ ನಿರ್ಧಾರ ಮಾಡೋಣ ಎಂದರು. 

ಸಭೆಯಲ್ಲಿ ಬಾಳು ಮುಳಜಿ, ಅನೀಲಗೌಡ ಬಿರಾದಾರ, ಉಮೇಶ ಲಚ್ಯಾಣ, ಶಿವಕುಮಾರ ಬರಡೋಲ, ಈರಣ್ಣ ಡೆಂಗಿ, ಧನರಾಜ ಮುಜಗೊಂಡ, ಹೊಸಮನಿ ಪಿ.ಎಸ್, ಅರವಿಂದ ಪಾಟೀಲ, ಸಿದರಾಯ ಆಳೂರ, ವಿಠ್ಠಲಗೌಡ ಪಾಟೀಲ, ಶಿವಯೋಗಿ ಹೊಸೂರ, ಪ್ರದೀಪ ಮುರಗುಂಡಿ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು. 

ಫೋಟೊ ಕ್ಯಾಪ್ಸನ್ 07 ಇಂಡಿ 04: ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ವಿ.ಹೆಚ್‌.ಬಿರಾದಾರ ಮಾತನಾಡಿದರು. 


ಸುದ್ದಿ ಓದಿ