ಅಥಣಿ

ಅನಂತಪೂರ ನಾಡ ಕಚೇರಿ ಉಪ ತಹಶೀಲದಾರ ಅಮೀತ ಡವಳೇಶ್ವರ ಅಧಿಕಾರ ಸ್ವೀಕಾರ

ಅನಂತಪೂರ ನಾಡ ಕಚೇರಿ ಉಪ ತಹಶೀಲದಾರ ಅಮೀತ ಡವಳೇಶ್ವರ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಸಂಬರಗಿ 13: ಅನಂತಪೂರ ನಾಡ ಕಚೇರಿ ಉಪ ತಹಶೀಲದಾರನಾಗಿ ಅಮೀತ ಡವಳೇಶ್ವರ ಇವರು ಬುಧವಾರ ಅಧಿಕಾರ ಸ್ವೀಕಾರ ಮಾಡಿದರು. ಇಲ್ಲಿಯ ಉಪ ತಹಶೀಲ್ದಾರ ಬಿ.ಬಿ. ಮ್ಯಾಗೇರಿ ಇವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಯಿತು.

ಅಮೀತ ಡವಳೇಶ್ವರ ಇವರು ಹಾವೇರಿ ಜಿಲ್ಲೆಯ ಹಾನಗಲ, ಬಾಗಲಕೋಟ, ಅಥಣಿ, ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಮೀತ ಡವಳೇಶ್ವರ ಮಾತನಾಡಿ ನಾಡ ಕಚೇರಿಯಲ್ಲಿ ಸತತ ಬೆಳಗ್ಗೆ 10ರಿಂದ ಸಾಯಂಕಾಲ 5ರವರೆಗೆ ಕಚೇರಿ ಪ್ರಾರಂಭವಿದ್ದು ಯಾವುದೇ ಸಮಸ್ಯೆ ಇದ್ದರೆ ಜನರು ನನ್ನ ಗಮನಕ್ಕೆ ತರಬೇಕು. ಈ ನಾಡ ಕಚೇರಿಯಿಂದ ವಿಧವಾ, ವೃದ್ಧಾಪ್ಯ,  ಅಂಗವಿಕಲ, ರಹವಾಸಿ ಸೇರಿದಂತೆ ಹಲವಾರು ದಾಖಲೆಗಳನ್ನು ನೀಡುಲಾಗುತ್ತಿದೆ. ಈ ನಾಡ ಕಚೇರಿ ವ್ಯಾಪ್ತಿಯೊಳಗೆ 30 ಗ್ರಾಮಗಳು ಬರುತ್ತವೆ. ಇಲ್ಲಿ ಕೆಲಸಕ್ಕೆ ದಾವುದೇ ಮಧ್ಯವರ್ತಿಗಳ ಅವಶ್ಯಕತೆಯಿರದೆ ನೇರವಾಗಿ ಕೆಲಸ ಮಾಡುತ್ತಾರೆ.

ಸುದ್ದಿ ಓದಿ