ಅಂತರರಾಷ್ಟ್ರೀಯ

ರಷ್ಯಾದಲ್ಲಿ ಭುಗಿಲೆದ್ದ ಆಂತರಿಕ ದಂಗೆ: ರಷ್ಯಾವನ್ನು ರಕ್ಷಿಸಿಯೇ ತಿರುತ್ತೇನೆ ಎಂದ ಪುಟಿನ್

ರಷ್ಯಾದಲ್ಲಿ ಭುಗಿಲೆದ್ದ ಆಂತರಿಕ ದಂಗೆ: ರಷ್ಯಾವನ್ನು ರಕ್ಷಿಸಿಯೇ ತಿರುತ್ತೇನೆ ಎಂದ ಪುಟಿನ್

ಮಾಸ್ಕೋ 24: ರಷ್ಯಾದಲ್ಲಿ ಆಂತರಿಕ ದಂಗೆ ಭುಗಿಲೆದ್ದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರ ಪರಮಾಪ್ತ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾ ನಗರಗಳಿಗೆ ಮುತ್ತಿಗೆ ಹಾಕಿದ್ದು, ರಷ್ಯಾವನ್ನು ರಕ್ಷಿಸಿಯೇ ತಿರುತ್ತೇವೆ ಎಂದು ಪುಟಿನ್ ಪ್ರತಿಜ್ಞೆ ಮಾಡಿದ್ದಾರೆ. 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶನಿವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ಖಾಸಗಿ ಸೇನೆ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಅವರು ಘೋಷಿಸಿದ ಸಶಸ್ತ್ರ ದಂಗೆಯಿಂದ ದೇಶ ಮತ್ತು ಅದರ ಜನರನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ದಂಗೆಗೆ ಪ್ರತಿಕ್ರಿಯೆಯಾಗಿ ಕಠಿಣ ಕ್ರಮ ಜರುಗಿಸುವುದಾಗಿ ಪ್ರತಿಜ್ಞೆ ಮಾಡಿದರು.  

ಅಂತೆಯೇ ಈ ದಂಗೆಯನ್ನು ಸಿದ್ಧಪಡಿಸಿದವರೆಲ್ಲರೂ ಅನಿವಾರ್ಯ ಶಿಕ್ಷೆಯನ್ನು ಅನುಭವಿಸುತ್ತಾರೆ. ಸಶಸ್ತ್ರ ಪಡೆಗಳು ಮತ್ತು ಇತರ ಸಕರ್ಾರಿ ಏಜೆನ್ಸಿಗಳು ಅಗತ್ಯ ಆದೇಶಗಳನ್ನು ಸ್ವೀಕರಿಸಿವೆ. ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿಯ ಮಾಲೀಕರನ್ನು ದ್ರೋಹಿ ಮತ್ತು ದೇಶದ್ರೋಹಿ ಎಂದು ಕರೆದ ಪುಟಿನ್, ಪ್ರಿಗೋಜಿನ್ ಅವರ ಹೆಸರು ಹೇಳದೇ ಅವರ ವಿರುದ್ಧ ಕ್ರಮಗಳನ್ನು ಜರುಗಿಸುವುದಾಗಿ ಹೇಳಿದರು. ಅಲ್ಲದೇ ಶೀಘ್ರ ಸರಿಯಾದ ನಿಧರ್ಾರಕ್ಕೆ ಬನ್ನಿ... ಇಲ್ಲವಾದಲ್ಲಿ ನಿಮಗೆ ನಿಧರ್ಾರ ಮಾಡಲೂ ಕೂಡ ಸಮಯ ಇರುವುದಿಲ್ಲ.. ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ ಎಂದು ಪುಟಿನ್ ನೇರ ಎಚ್ಚರಿಕೆ ನೀಡಿದರು. 

ಪಶ್ಚಿಮ ದೇಶಗಳ ಸಂಪೂರ್ಣ ಮಿಲಿಟರಿ, ಆರ್ಥಿಕ ಮತ್ತು ಮಾಹಿತಿ ಯಂತ್ರವನ್ನು ನಮ್ಮ ವಿರುದ್ಧ ನಡೆಸಲಾಗಿದೆ. ಈ ಯುದ್ಧ, ನಮ್ಮ ಜನರ ಭವಿಷ್ಯವನ್ನು ನಿರ್ಧರಿಸುವಾಗ, ಎಲ್ಲಾ ಶಕ್ತಿಗಳ ಏಕೀಕರಣ, ಏಕತೆ, ಬಲವರ್ಧನೆ ಮತ್ತು ಜವಾಬ್ದಾರಿಯ ಅಗತ್ಯವಿರುತ್ತದೆ. ಅಂತಹ ಸಮಯದಲ್ಲಿ ಸಶಸ್ತ್ರ ದಂಗೆಯು ರಷ್ಯಾಕ್ಕೆ, ಅದರ ಜನರಿಗೆ ಒಂದು ದೊಡ್ಡ ಹೊಡೆತವಾಗಿದೆ. ಉಕ್ರೇನ್ನಲ್ಲಿ ತನ್ನ ಯುದ್ಧದೊಂದಿಗೆ ರಷ್ಯಾ ತನ್ನ ಭವಿಷ್ಯಕ್ಕಾಗಿ ಕಠಿಣ ಯುದ್ಧ ನಡೆಸುತ್ತಿರುವ ಸಮಯದಲ್ಲಿ ಈ ದಂಗೆ ಸಹಿಸಲಸಾಧ್ಯ ಎಂದು ಪುಟಿನ್ ಕೆಂಡಕಾರಿದರು.  

ತಿಂಗಳುಗಳ ಕಾಲ ರಕ್ಷಣಾ ಸಚಿವಾಲಯದೊಂದಿಗಿನ ಭಿನ್ನಾಭಿಪ್ರಾಯ ಹೊಂದಿರುವ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ಇಂದು ಮಾಸ್ಕೋ ತನ್ನ ಪಡೆಗಳ ಮೇಲೆ ಮಾರಣಾಂತಿಕ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಆರೋಪಿಸಿದರು. ಅಂತೆಯೇ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು. ದೇಶದ ಮಿಲಿಟರಿ ನಾಯಕತ್ವವನ್ನು ಉರುಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ  ಅವರು ತಿಳಿಸಿದರು. ಈಗಾಗಲೇ ತಾವು ಉಕ್ರೇನ್ನಲ್ಲಿನ ಹೋರಾಟವನ್ನು ನೋಡಿಕೊಳ್ಳುವ ರಷ್ಯಾದ ಸೇನಾ ಪ್ರಧಾನ ಕಛೇರಿ ಹೊಂದಿರುವ ರೋಸ್ಟೊವ್-ಆನ್-ಡಾನ್ ಸಿಟಿ ವಶಕ್ಕೆ ಪಡೆದಿದ್ದಾಗಿ ತಿಳಿಸಿದ್ದಾರೆ. ಇದಕ್ಕೆಲ್ಲ ಶೀಘ್ರ ಅಂತ್ಯ ಹಾಡುತ್ತೇವೆ ಎಂದು ಪ್ರಿಗೋಜಿನ್ ಹೇಳಿದರು. 

 

  

 

ಸುದ್ದಿ ಓದಿ