ಸಂಸ್ಕೃತಿ ಸಂಸ್ಕಾರ ಭಾರತೀಯರ ಅವಿಭಾಜ್ಯ ಅಂಗ: ಪೂಜಾರ
ರಾಣೇಬೆನ್ನೂರು 13: ಸಂಸ್ಕೃತಿ ಪರಂಪರೆ ಭಾರತೀಯರ ಬಹು ದೊಡ್ಡ ಆಸ್ತಿ ಅದನ್ನು ಉಳಿಸಿ ಬೆಳೆಸುವ ಬಹು ಮಹತ್ತರವಾದ ಕೆಲಸ ಪ್ರತಿಯೊಂದು ಸಂಘ ಸಂಸ್ಥೆಗಳಿಂದ ಆಗಬೇಕಾದ ಇಂದಿನ ಅಗತ್ಯವಿದೆ ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.
ಶನಿವಾರ ಇಲ್ಲಿನ ಸಿದ್ದೇಶ್ವರ ನಗರದ ಕಾಕಿ ಜನ ಸೇವಾ ಸಂಸ್ಥೆ ಗಣೇಶೋತ್ಸವ ಕಲ್ಯಾಣ ಮಂಟಪದಲ್ಲಿ ಕಾಕಿ ಕುಟುಂಬದ ಲಿಂ ದೊಡ್ಡನಾಗಪ್ಪ ಮತ್ತು ಸಣ್ಣ ನಾಗಪ್ಪ ಕಾಕಿ ಅವರ ಸ್ಮರಣೆಯಲ್ಲಿ ಜೆ ಸಿ ಐ, ಸಂಸ್ತೇ ಜೆಸಿಐ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುರುಹಿನ ಶೆಟ್ಟಿ ಸಮಾಜ ಸಂಘ,ಕಾಕಿ ಜನ ಸೇವಾ ಸಂಸ್ಥೆ, ಸೌರಭ ಜಾನಪದ ಕಲಾ ವೇದಿಕೆ ಆಯೋಜಿಸಿದ್ದ, ರಾಜ್ಯಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕಾಕಿ ಕುಟುಂಬದವರು, ಸರಕಾರ ಮಾಡಬೇಕಾದ ಕೆಲಸ ತಮ್ಮ ಬದುಕಿನ ಉದ್ದಕ್ಕೂ ಮಾಡುತ್ತಾ ಬಂದಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದ ಅವರು ಸಮಾಜದಲ್ಲಿ ಸದಾ ಕಾಲ ಶಾಂತಿ ಮತ್ತು ನೆಮ್ಮದಿಯಾಗಿರಬೇಕಾದರೆ, ಧಾನ, ಧರ್ಮ, ಪರೋಪಕಾರ ಸೇವೆ ನಿರಂತರವಾಗಿರಬೇಕು. ಅಂತಹ ಕಾರ್ಯವು ಕಾಕಿ ಜನಸೇವಾ ಸಂಸ್ಥೆ ಮಾಡುತ್ತಿರುವುದು ವಾಣಿಜ್ಯ ನಗರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು. ನಗರಸಭಾ ಸದಸ್ಯ ಮಲ್ಲಣ್ಣ ಅಂಗಡಿ, ಶಿವಕುಮಾರ ನರಸಗೊಂಡರ ಮಾತನಾಡಿದರು. ನಿರ್ಣಾಯಕ ಡಾ:ಕೆ. ಸಿ. ನಾಗರಜ್ಜಿ, ಕೆ.ಎಸ್. ನಾಗರಾಜ್, ಅವರು ಕಲೆ, ಸಾಹಿತ್ಯ, ಸಂಗೀತ ಮತ್ತು ಭಜನಾ ಪದಗಳು, ಭಜನಾ ಸಂಸ್ಕೃತಿ ವಿಷಯ ಕುರಿತು, ಮಾತನಾಡಿದರು. ರೂಪಾ ಕಾಕಿ, ಮಂಜಪ್ಪ ಕಾಟಿ, ಪವನ ಮಲ್ಲಾಡದ, ದೊಡ್ಡ ಹನುಮಂತಪ್ಪ ಕಾಕಿ,ಸಣ್ಣಹನುಮಂತಪ್ಪಕಾಕಿ,ಅಮಾಸಿ ಹನುಮಂತಪ್ಪ , ರಾಘವೇಂದ್ರ ಕುಲಕರ್ಣಿ, ವೆಂಕಟೇಶ ಕಾಕಿ, , ಪ್ರಭು ಎಳೆಹೊಳಿ, ವಿ ಎಂ ಹಿರೇಮಠ, ಸಿದ್ದಪ್ಪ ಬುದನೂರು, ಶೋಭಾ, ಹೊಸಪೇಟೆ ಪಾಂಡಪ್ಪ ಕಾಕಿ,, ಭೀಮಣ್ಣ ಕಾಕಿ, ಶಾರದಮ್ಮ ಶ್ಯಾವಿ, ಸಿದ್ದಮ್ಮಕಾಕಿ,,ಮಹಾದೇವಪ್ಪ ಶ್ಯಾವಿ,ಪ್ರಭು ಎಳೆಹೋಳಿ, ಚನ್ನಪ್ಪ ಕಾಕಿ,ಮಂಜುನಾಥ ಹೊಸಪೇಟೆ, ಶಿವಾನಂದ ಸಾಲಗೇರಿ, ಆರ್. ವಿಪಾಟೀಲ್ ಪ್ರಭುಲಿಂಗಪ್ಪ ಹಲಗೇರಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ನಿರ್ಣಾಯಕ ಗುಡ್ಡರಾಜ ಹಲಗೇರಿ, ಎ. ಎ. ಕಿಲ್ಲೇದಾರ್ ಮತ್ತು ಕಾಕಿ ಜನ ಸೇವಾ ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಇದ್ದರು. ಮುಂಜಾನೆ ಆರಂಭವಾದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ನಾಡಿನ 50 ಹೆಚ್ಚು ಭಜನಾ ತಂಡಗಳು ಪಾಲ್ಗೊಂಡು, ಪ್ರಭಾವಿ ಸ್ಪರ್ಧೆಗೆ ಮೈಯೂಡ್ಡಿದ್ದರು. ಅಧ್ಯ ಆಂಧ್ರ ಮಕ್ಕಳಿಗೆ ವಸ್ತ್ರಗಳು ಕ್ಷ ಶ್ರೀನಿವಾಸ ಕಾಕಿ, ಸ್ವಾಗತಿಸಿದರು. ಶಿದಾನಂದ ಬಾಗಾದಿ ನಿರೂಪಿಸಿ, ವಂದಿಸಿದರು. ಅಂದ ಮಕ್ಕಳಿಗೆ ವಸ್ತ್ರಗಳು, ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ಪಾಕೀಟಗಳು, ವಿತರಿಸಲಾಯಿತ