ಅಂಬೇಡ್ಕರ್ರ ಬದುಕು ಎಲ್ಲರಿಗೂ ಸ್ಫೂರ್ತಿ: ಶಾಸಕ ಕೌಜಲಗಿ
ಬೈಲಹೊಂಗಲ 15: ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಪಟ್ಟಣದ ಮಿನಿವಿಧಾನಸೌಧ ಇರುವ ಬಾಬು ಜಗಜೀವನರಾಮ ಸಮುದಾಯ ಭವನದಲ್ಲಿ ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತದ ಸಂವಿಧಾನದ ಪಿತಾಮಹ ಎಂದು ಪ್ರೀತಿಯಿಂದ ನೆನಪಿಸಿಕೊಳ್ಳುವ ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರು ಭಾರತವು ಹೆಮ್ಮೆಪಡುವ ರೋಮಾಂಚಕ ಪ್ರಜಾಪ್ರಭುತ್ವ ರಚನೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ತಮ್ಮ ಜೀವನದುದ್ದಕ್ಕೂ, ಅಂಬೇಡ್ಕರ್ ಅವರು ಹಿಂದುಳಿದ ಸಾಮಾಜಿಕ ವರ್ಗಗಳಾಗಲಿ ಅಥವಾ ಮಹಿಳೆಯರಾಗಲಿ ಸಮಾನತೆಯ ಕಾರಣವನ್ನು ಪ್ರತಿಪಾದಿಸಿದರು. ಜಾತಿ ವ್ಯವಸ್ಥೆಯಂತಹ ಅಸಮಾನತೆಗಳು ಪ್ರಜಾಪ್ರಭುತ್ವಕ್ಕೆ ಹಾನಿಕರ ಎಂದು ಅವರು ಬಲವಾಗಿ ನಂಬಿದ್ದರು. ಎಲ್ಲರಿಗೂ ಸಮಾನ ಹಕ್ಕುಗಳ ದೃಷ್ಟಿಕೋನವನ್ನು ಅವರು ಸಂವಿಧಾನದಲ್ಲಿ ಸ್ಥಾಪಿಸಿದ ಹಲವಾರು ಕಾನೂನುಗಳಲ್ಲಿ ಅಳವಡಿಸಿಕೊಂಡಿದ್ದರು ಎಂದರು.
ಉಪವಿಭಾಗಾಧಿಕಾರಿ ಶಶಿಧರ್ ಬಗಲಿ ಮಾತನಾಡಿದರು.
ಪ್ರಾಚಾರ್ಯರ ಡಾ, ವಾಯ್ ಎಮ್ ಯಾಕೊಳ್ಳಿ ಬಾಬಾಸಾಹೇಬರ ಜೀವನ ಕುರಿತು ಉಪನ್ಯಾಸ ನೀಡಿದರು. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ ಬಿ ಯಮನೂರ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ತಾಲೂಕಾ ಆರೋಗ್ಯಾಧಿಕಾರಿ ಎಸ್ ಎಸ್ ಸಿದ್ದನ್ನವರ, ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಡಾ ತಹಶೀಲ್ದಾರ ಬಸವರಾಜ ನಾಗರಾಳ, ಜಿ ವಾಯ್ ಭರಮಣ್ಣವರ, ರಮೇಶ ರಾಯಪ್ಪಗೋಳ, ಸುರೇಶ ರಾಯಪ್ಪಗೋಳ, ರುದ್ರ್ಪ ನಿಂಗನ್ನವರ, ಶಂಕರ ಕೋರಿಕೊಪ್ಪ, ತಾಲೂಕಾ ಅಧ್ಯಕ್ಷ ಪ್ರಕಾಶ ಮಾದಿಗರ, ಮಂಜುನಾಥ ಶಿಡ್ಲವ್ವಗೋಳ, ಮಲ್ಲಿಕಾರ್ಜುನ ಕಿತ್ತೂರ, ಸುರೇಶ ಕಿತ್ತೂರ, ರಮೇಶ ಹುಲೇನ್ನವರ, ಅಶೋಕ ಸವದತ್ತಿ, ಮೋಹನ ಮುರಗೋಡ, ಶಿವಯೋಗಿ ಹುಲೇನ್ನವರ, ಮೋಹನ್ ಮುರಗೋಡ, ಅರ್ಜುನ ರಾಯಭಾಗ, ಆನಂದ ಪಠಾತಿ, ಸಂಜೀವ ಮುರಗೋಡ, ಬಸವರಾಜ ಶಿಂತ್ರಿ, ಸಂಗಮೇಶ ರೋಳ್ಳಿ, ವಿಠ್ಠಲ ನ್ಯಾಮಗೌಡರ ಜಗದೀಶ ಅಣ್ಣಿಗೇರಿ, ಬಿ ಆರ್ ಕೌಜಲಗಿ, ಎಮ್ ಎಪ್ ಮಕರವಳ್ಳಿ, ವಿದ್ಯಾ ದೊಡಮನಿ, ರೂಪಾ ಜ್ಯೋತಿ, ತಾಲೂಕು ಮಟ್ಟದ ಇಲಾಖೆ ಸಿಬ್ಬಂದಿ ವರ್ಗ ಇದ್ದರು.
ಮೆರವಣಿಗೆ: ಇದಕ್ಕೂ ಮೊದಲು ಪಟ್ಟಣದ ಅಂಬೇಡ್ಕರ ನಗರದ ಉದ್ಯಾನವನದಿಂದ ಡಾ.ಅಂಬೇಡ್ಕರ ಅವರ ಮೂರ್ತಿಗೆ ಮಾಲಾರೆ್ನ ಮಾಡಿ ಅಂಬೇಡ್ಕರ ಅವರ ಭಾವಚಿತ್ರ ಮೆರವಣಿಗೆ ಚಾಲನೆ ನೀಡಲಾಯಿತು.