ಅಥಣಿ

ಅಭಿವೃದ್ಧಿಯಿಂದ ಮಾದರಿ ಕ್ಷೇತ್ರವನ್ನಾಗಿಸುವ ಗುರಿ

ಅಭಿವೃದ್ಧಿಯಿಂದ ಮಾದರಿ ಕ್ಷೇತ್ರವನ್ನಾಗಿಸುವ ಗುರಿ

ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಕೃಷಿ ಪತ್ತಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭ  

ವೆಂಕಟೇಶ ದೇಶಪಾಂಡೆ  

ಅಥಣಿ 06: ಕಾಗವಾಡ ಮತಕ್ಷೇತ್ರದಲ್ಲಿ ಜನಪರ, ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ತಮ್ಮದಾಗಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.  

ಅವರು ಜಂಬಗಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಮೊದಲ ಮಹಡಿ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಹೊರ ಬಂದು ನಾನು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನ್ನ ರಾಜಕೀಯ ವಿರೋಧಿಗಳು ಹಣದ ಆಸೆಗಾಗಿ ಬಿಜೆಪಿ ಸೇರೆ​‍್ಡಯಾಗಿದ್ದಾರೆ ಎಂದು ಅಪ ಪ್ರಚಾರ ಮಾಡಿದರು ಆದರೂ ಕೂಡ ವಿರೋಧಿಗಳ ಅಪ ಪ್ರಚಾರಕ್ಕೆ ಕಿವಿ ಗೊಡದ ಮತದಾರರು ಬೆಂಬಲಿಸಿದ ಪರಿಣಾಮ ಭಾರೀ ಬಹುಮತದಿಂದ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಮತದಾರರ ವಿಶ್ವಾಸಕ್ಕೆ ಚಿರಋಣಿ ಎಂದ ಅವರು ಮೂಲ ಭೂತ ಸೌಲಭ್ಯ ವಂಚಿತ ಕಾಗವಾಡ ಮತಕ್ಷೇತ್ರದಲ್ಲಿ ನಾನು ಶಾಸಕನಾದ ನಂತರ ನೀರಾವರಿ, ಶಿಕ್ಷಣ, ವಿದ್ಯತ್, ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಮೂಲ ಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿರುವೆ ಎಂದರು.  

 ಕಾಗವಾಡ ಮತಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ನಂತರ ಇಲ್ಲಿಯವರೆಗೆ 3000 ಕೋಟಿ ರೂ.ಗಳ ಅನುದಾನ ವಿವಿಧ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳಿಗೆ ವಿನಿಯೋಗಿಸಿರುವೆ. ಈ ಪೈಕಿ ಜಂಬಗಿ ಗ್ರಾಮ ಒಂದರಲ್ಲಿಯೇ ರಸ್ತೆ, ಕುಡಿಯುವ ನೀರು, ಕೃಷಿ, ನೀರಾವರಿ, ವಿದ್ಯತ್ ಸೇರಿದಂತೆ ಅನೇಕ ಮೂಲ ಭೂತ ಸೌಲಭ್ಯಗಳಿಗಾಗಿ ಸುಮಾರು 35 ಕೋಟಿ ಅನುದಾನ ವಿನಿಯೋಗಿಸಿರುವೆ ಎಂದ ಅವರು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅಂತಿಮ ಹಂತ ತಲುಪಿದ್ದು, ಕೆಲವೇ ದಿನಗಳಲ್ಲಿಯೇ ಸಿಎಮ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದರು.  

ಸಾನಿಧ್ಯವಹಿಸಿ ಮಾತನಾಡಿದ ಕೌಲಗುಡ್ಡ ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ರಾಜಕೀಯ ಕ್ಷೇತ್ರದಲ್ಲಿಯೇ ಅಪರೂಪದ ರಾಜಕಾರಣಿ ನಮ್ಮ ಶಾಸಕರಾದ ಶ್ರೀಮಂತ ಪಾಟೀಲರು. 4 ಸಕ್ಕರೆ ಕಾರಖಾನೆಗಳ ಮಾಲಿಕರಾದ ಇವರು ತಮ್ಮ ರಾಜಕೀಯ ಅಧಿಕಾರವನ್ನು ರೈತರ, ಬಡವರ, ನಿರ್ಗತಿಕರ, ಕಾರ್ಮಿಕರ ಅಭಿವೃದ್ಧಿಗಾಗಿ ರಾತ್ರಿ-ಹಗಲು ಶ್ರಮಿಸುತ್ತಿದ್ದಾರೆ ಎಂದ ಅವರು ನಾನು ಶ್ರೀಮಂತ ಪಾಟೀಲರ ಬಗೆಗೆ ಸತ್ಯ ಹೇಳಿದರೂ ಕೂಡ ನನ್ನನ್ನು ಕೆಲವರು ತೆಗಳುವವರು ಇರುತ್ತಾರೆ ಆದರೆ ಮಠಾಧೀಶರಾದ ನಾವು ಸತ್ಯವನ್ನು ಹೇಳಲೇ ಬೇಕು ಎಂದು ಹೇಳಿದರು.  

 ಮದಭಾವಿಯ ಬಿಜೆಪಿ ಮುಖಂಡ ಮಹಾದೇವ ಕೋರೆ ಮಾತನಾಡಿ, ಕಾಗವಾಡ ಮತಕ್ಷೇತ್ರದಿಂದ ಕೆಲವರು ಮೂರು ಬಾರಿ, ಇನ್ನೂ ಕೆಲವರು ಎರಡು ಬಾರಿ ಆಯ್ಕೆಯಾಗಿ ಬಂದರೂ ಕೂಡ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲೇ ಇಲ್ಲ ಆದರೆ ಶ್ರೀಮಂತ ಪಾಟೀಲರು ಮಾತ್ರ ಮೊದಲ ಬಾರಿಗೆ ಶಾಸಕರಾದ ನಂತರ ಒಂದೇ ಒಂದು ಅವಧಿಯಲ್ಲಿಯೇ ಕಾಗವಾಡ ಕ್ಷೇತ್ರದಲ್ಲಿ ಅಭಿವೃದ್ಧಿ, ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಶ್ರೀಮಂತಗೊಳಿಸಿದ್ದಾರೆ ಎಂದರು.  

 ಬಿಜೆಪಿ ಮುಖಂಡ ರಾಮ ಸೊಡ್ಡಿ, ಸಹಕಾರಿ ಧುರೀಣ ಪೊಪಟ ಜಾಧವ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದತ್ತಾ ಭೋಸಲೆ, ಉಪಾಧ್ಯಕ್ಷ ಮಲ್ಲಪ್ಪ ಮಾಳಿ, ನಿರ್ದೇಶಕರುಗಳಾದ ರಾಜೇಂದ್ರ ಪಾಟೀಲ, ಶ್ರೀಮಂತ ಏಳಾವಕರ, ರಾಜಾರಾಮ ಪಾಟೀಲ, ರಾಜಾರಾಮ ಬೆವನೂರ, ಭೀಮಸೇನ ಸನದಿ, ರಾಜಾರಾಮ ಭಂಡಾರೆ, ಸತ್ಯಪ್ಪ ನಾಯಿಕ, ರುಕ್ಮಿಣಿ ಬಾಬರ, ರಮಾಬಾಯಿ ಪಾಟೀಲ, ತಾನಾಜಿ ಬೊರಗಾಂವೆ, ಕಾರ್ಯದರ್ಶಿ ಭಗವಾನ ಚವ್ಹಾಣ ಸೇರಿದಂತೆ ಧುರೀಣರಾದ ಶಿವಾನಂದ ಗೊಲಭಾವಿ, ಜಯವಂತ ಪಾಟೀಲ, ಮುರಿಗೆಪ್ಪ ಕೋಳೆಕರ ಉಪಸ್ಥಿತರಿದ್ದರು. 


ಸುದ್ದಿ ಓದಿ