4ರಿಂದ ಅಡವಿ ಆಂಜನೇಯ ಸ್ವಾಮಿ ರಥೋತ್ಸವ
ರಾಣಿಬೆನ್ನೂರ 02: ಸುಕ್ಷೇತ್ರವೆಂದೇ ಹೆಸರಾದ ನಗರದ ಹೊರವಲಯದ ಹನುಮಂತ ದೇವರ ಮಹೋತ್ಸವವು ಏ. 4 ರಿಂದ 7 ರವರೆಗೆ ಜರುಗಲಿದೆ. ಏ.4ರಂದು ಸಾಯಂಕಾಲ 7ಘಂಟೆಗೆ ದೇವರಿಗೆ ಕಂಕಣ ಕಟ್ಟುವುದು, ಅನ್ನ ಸಂತರೆ್ಣ ನಡೆಯಲಿದೆ. ಏ.5ರಂದು ಮುಂಜಾನೆಯಿಂದ ಪುಷ್ಪಾಲಂಕಾರ, ಅಭಿಷೇಕ, ಮಂಗಳಾರತಿ ಜರುಗಲಿದೆ. ಎ.6ರಂದು ಸಂಜೆ 5 ಗಂಟೆಗೆ ದೊಡ್ಡ ರಥೋತ್ಸವ ನಡೆಯಲಿದೆ. ಏ.7ಕ್ಕೆ ಸಂಜೆ 5 ಗಂಟೆಗೆ ಬೆಲ್ಲದ ಬಂಡಿ ಮತ್ತು ಓಕಳಿ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.